Actress Nagashree Begar 2023 ರಲ್ಲಿ 50 ದಿನ ಪೂರೈಸಿದ ಮತ್ತು ಈಗಲೂ ಅಮೆಜಾನ್ ಪ್ರೈಮ್ ಲ್ಲಿ ವೀಕ್ಷಣೆ ಗೆ ಲಭ್ಯವಿರುವ ‘ ಜಲಪಾತ ‘ ಸಿನಿಮಾ ದಲ್ಲಿ ಲವಲವಿಕೆ ಯ ಅಭಿನಯ ದ ಮೂಲಕ, ಪೂರ್ವಿ ಪಾತ್ರದಲ್ಲಿ ಮನೆ ಮಾತಾದವರು ಅದರ ನಾಯಕ ನಟಿ ನಾಗಶ್ರೀ ಬೇಗಾರ್. ಅದೇ ವರ್ಷ ಬಿಡುಗಡೆ ಆದ ‘ವೈಶಂಪಾಯನ ತೀರ’ ಎಂಬ ಥ್ರಿಲ್ಲರ್ ಸಿನಿಮಾ ದಲ್ಲಿ ಟ್ರಾನ್ಸ್ ಜೆಂಡರ್ ಮಾದರಿ ಯ ಪಾತ್ರ ನಿರ್ವಹಿಸಿ ವಿಮರ್ಶಕರ – ವೀಕ್ಷಕರ ಗಮನ ಸೆಳೆದವರು. ನಭಾ ನಟೇಶ್, ಸಂಗೀತ ನಂತರ ಸ್ಯಾಂಡಲ್ ವುಡ್ ಪ್ರವೇಶಿಸಿದ ಶೃಂಗೇರಿ ಯ ಈ ಸುಂದರಿ ನಂತರ ಸೀರಿಯಲ್ ಕಡೆ ಮುಖಮಾಡಿ, ಪ್ರಮೋದ್ ಶೆಟ್ಟಿ ಪ್ರೊಡಕ್ಷನ್ ಹೌಸ್ ನ, ಜೀ ಕನ್ನಡ ದಲ್ಲಿ ಪ್ರಸಾರ ಆಗುತ್ತಿರುವ ” ಅಣ್ಣಯ್ಯ ” ಧಾರಾವಾಹಿ ಯಲ್ಲಿ ರತ್ನ ಪಾತ್ರದಲ್ಲಿ ಜನಪ್ರಿಯರಾಗಿದ್ದಾರೆ. ವೃತ್ತಿ ಯಲ್ಲಿ ಶಿಕ್ಷಕಿಯಾಗಿರುವ, ತುಂಬಾ ಗಂಭೀರವಾದ ಆ ಪಾತ್ರ ಅಪೇಕ್ಷಿಸುವ ಸೆಟಲ್ಡ್ ಆಕ್ಟಿಂಗ್ ಮೂಲಕ ಕಿರುತೆರೆ ಪ್ರಪಂಚ ದಲ್ಲಿ ಗಟ್ಟಿ ಪಾತ್ರ ಕಟ್ಟುವ ಪ್ರಯೋಗಶೀಲತೆ ಮೂಲಕ ತನ್ನ ಅಂತರ್ಗತವಾಗಿ, ಅಭಿಜಾತ ವಾಗಿ ಒದಗಿದ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ ಹೆಗ್ಗಳಿಕೆ ಇವರದು. Actress Nagashree Begar ಈಗಾಗಲೇ ಸಂಗೀತ ಮತ್ತು ನಾಟ್ಯ ಶಾಸ್ತ್ರದಲ್ಲಿ ಪದವಿ ಶಿಕ್ಷಣವನ್ನೂ ಪಡೆದಿರುವ ನಾಗಶ್ರೀ ಸರಿಗಮಪ ವೇದಿಕೆಯಲ್ಲೂ ಮಿಂಚಿ ಬಂದಿರುವ ವಿಶಿಷ್ಟ ಪ್ರತಿಭೆ. ಇದೀಗ ನಾಗಶ್ರೀ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿ ಬಿಗ್ ಅಪ್ ಡೇಟ್ ನೊಂದಿಗೆ ಬಂದಿದ್ದಾರೆ. ಜಲಪಾತ ಸಿನಿಮಾ ನಿರ್ಮಿಸಿದ ಶ್ರೀಎಂಟರ್ಪ್ರೈಸಸ್ ಬ್ಯಾನರ್ , ಅದೇ ತಂಡದೊಂದಿಗೆ ಮತ್ತೊಂದು ಪರಿಸರ ಕಾಳಜಿಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಈಗಾಗಲೇ ನಾಲ್ಕು ಹಂತದ ಚಿತ್ರೀಕರಣ ಮುಗಿಸಿದೆ. ನೀರು ಮತ್ತು ಕೆರೆ ಯ ಮಹತ್ವ ಸಾರುವ ಈ ಐತಿಹಾಸಿಕ ಕಥಾ ಹಂದರದ ಕಾದಂಬರಿ ಆಧಾರಿತ ಸಿನಿಮಾ ದಲ್ಲಿ ಮುಖ್ಯ ಪಾತ್ರದಲ್ಲಿ ನಾಗಶ್ರೀ ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ. ಭಾವನೆಗೆ ಹೆಚ್ಚು ಪ್ರಾಮುಖ್ಯವಿರುವ, ಪ್ರಮುಖ ಪಾಳೆಗಾರ ಮನೆತನ ದ ನೆಚ್ಚಿನ ಸೊಸೆ ಯ ಪಾತ್ರ ಇದಾಗಿದ್ದು ಅಭಿನಯ ಕ್ಕೆ ತುಂಬಾ ಮಹತ್ವ ಇದೆ ಎಂದು ನಾಗಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ನಾಗಶ್ರೀ ಜನುಮದಿನದ ಪ್ರಯುಕ್ತ ಚಿತ್ರ ತಂಡ , ಪೋಸ್ಟರ್ ಮೂಲಕ ಅವರ ಪಾತ್ರದ ಗೆಟಪ್ ನ್ನು ರಿವಿಲ್ ಮಾಡಿದೆ. ಗ್ಲಾಮರ್ ಮತ್ತು ಸೀರಿಯಸ್ನೆಸ್ ಮಿಶ್ರವಾಗಿರುವ ರಾಜ ಮನೆತನ ದ ಗಂಭೀರ ನಿಲುವಿನ ಯುವರಾಣಿ ಶೈಲಿ ಯ ಪೋಸ್ಟರ್ ಮನಮೋಹಕವಾಗಿರುವುದರ ಜೊತೆಗೆ ಸಿನಿಮಾ ಕುರಿತು ಅಪಾರ ಕುತೂಹಲವನ್ನೂ ಹುಟ್ಟು ಹಾಕುತ್ತಿದೆ. ಸಧ್ಯ ದಲ್ಲೇ ಸಿನಿಮಾದ ಪೂರ್ತಿ ವಿವರ ಇರುವ ಟೀಸರ್ ನ್ನು ಬಿಡುಗಡೆ ಮಾಡಲಾಗುವುದು ಎಂದು ಈ ಚಿತ್ರದ ನಿರ್ದೇಶನ ತಂಡದಲ್ಲೂ ಪ್ರಮುಖವಾಗಿ ಕೆಲಸ ಮಾಡುತ್ತಿರುವ ನಾಗಶ್ರೀ ಮಾಧ್ಯಮ ಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಲೆನಾಡ ಮತ್ತು ಶೃಂಗೇರಿ ಯ ಕೀರ್ತಿ ಯನ್ನು ಮುಗಿಲೆತ್ತರಕ್ಕೆ ಏರಿಸುವಲ್ಲಿ ಸದಾ ಪ್ರಯೋಗಶೀಲೆ ಆಗಿರುವ ಅಪ್ಪಟ ಪ್ರತಿಭೆ ನಾಗಶ್ರೀ ಯ ಕಲಾ ಬದುಕು ಸರಾಗವಾಗಿರಲಿ.
ಪಿ ಆರ್
