Saturday, December 6, 2025
Saturday, December 6, 2025

Chamber of Commerce Shivamogga ಟ್ರೇಡ್ ಲೈಸೆನ್ಸ್ ನಿಂದ ಪಾಲಿಕೆಗೆ ಪ್ರಮುಖ ಆದಾಯ, ನಾಗರೀಕರು ಪಾಲಿಕೆಯನ್ನ ಆರ್ಥಿಕವಾಗಿ ಸದೃಢಗೊಳಿಸಿ – ಮಾಯಣ್ಣಗೌಡ

Date:

Chamber of Commerce Shivamogga ಟ್ರೇಡ್ ಲೈಸನ್ಸ್ ಮೇಳ ಅತ್ಯಂತ ಯಶಸ್ವಿಯಾಗಿದ್ದು, ಸೂಕ್ತ ದಾಖಲೆಗಳೊಂದಿಗೆ ನೂರಾರು ವರ್ತಕರು ವ್ಯಾಪಾರ ನಡೆಸಲು ಅವಶ್ಯವಿರುವ ಲೈಸೆನ್ಸ್ ಪಡೆದುಕೊಂಡರು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಆಯೋಜಿಸಿದ್ದ ಲೈಸೆನ್ಸ್ ಮೇಳದಲ್ಲಿ ವರ್ತಕರಿಗೆ ಪರವಾನಗಿ ಪತ್ರ ವಿತರಿಸಿ ಮಾತನಾಡಿ, ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ವರ್ತಕರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಮೇಳ ನಡೆಸಲು ಸಹಕಾರ ನೀಡಿದ್ದು ಅಭಿನಂದನೀಯ ಎಂದು ತಿಳಿಸಿದರು.

ಟ್ರೇಡ್ ಲೈಸೆನ್ಸ್ ಮಹಾನಗರ ಪಾಲಿಕೆಗೆ ಒಂದು ಪ್ರಮುಖ ಆದಾಯದ ಮೂಲವಾಗಿದೆ. ಶಿವಮೊಗ್ಗದ ನಾಗರಿಕರಾಗಿ ಮಹಾನಗರ ಪಾಲಿಕೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳಿಗೆ ಕಾನೂನು ಬದ್ಧ ವ್ಯವಹಾರ ಮಾಡಲು ಟ್ರೇಡ್ ಲೈಸೆನ್ಸ್ ಕಡ್ಡಾಯವಾಗಿದೆ. ವ್ಯವಹಾರದ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ. ಸರ್ಕಾರಿ ಯೋಜನೆಗಳಿಗೆ ಟೆಂಡರ್ ಹಾಕಲು ಅನುಕೂಲವಾಗುತ್ತದೆ. ಶಿವಮೊಗ್ಗದಲ್ಲಿ ಹೆಚ್ಚಿನ ಸಂಖ್ಯೆಯ ವರ್ತಕರು ಅಭಿಯಾನದ ಪ್ರಯೋಜನ ಪಡೆದಿದ್ದಾರೆ. ಮುಂದೆ ಇನ್ನು ಈ ರೀತಿಯ ಅನೇಕ ಕಾರ್ಯಕ್ರಮಗಳನ್ನು ಸಂಘದಿಂದ ನಡೆಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಇ ಖಾತೆ ಸಮಸ್ಯೆ ಇದ್ದು, ಈಗ ಸರಳವಾಗಿದೆ. ಇನ್ನೂ ಸಣ್ಣಪುಟ್ಟ ತೊಂದರೆಗಳಿವೆ. ಶಿವಮೊಗ್ಗ ನಗರದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಾಗೂ ಜನತೆಗೆ ಸಾಕಷ್ಟು ಉದ್ಯೋಗವನ್ನು ಒದಗಿಸಿರುವ ಶಿವಮೊಗ್ಗ ನಗರದ ಸಾಗರ ರಸ್ತೆ, ಆಟೋ ಕಾಂಪ್ಲೆಕ್ಸ್ ಹಾಗೂ ಕಲ್ಲೂರು – ಮಂಡ್ಲಿ ಕೈಗಾರಿಕಾ ಪ್ರದೇಶಗಳ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ನಿಯಮಿತವಾಗಿ ನಿರ್ವಹಿಸಬೇಕು. ನಗರದ ಅಭಿವೃದ್ಧಿಗೆ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಸದಾ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.

Chamber of Commerce Shivamogga ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್ ಮನೋಹರ, ವಿತರಕ ಸಂಘದ ಅಧ್ಯಕ್ಷ ದೇವರಾಜ್, ಖಜಾಂಚಿ ಚಂದ್ರಶೇಖರ್, ಮಹಾನಗರ ಪಾಲಿಕೆಯ ಪ್ರಭುರಾಜ್, ಪುಷ್ಪವತಿ, ವಿಕಾಸ್, ವಸಂತ್, ನವೀನ್, ಇನ್ನೂ ಅನೇಕ ಸಿಬ್ಬಂದಿಗಳು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು, ವರ್ತಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...