Nikhil Kumaraswamy ಶಿವಮೊಗ್ಗದಲ್ಲಿ ಜೆಡಿಎಸ್ ಯುವರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.
ಜನರೊಂದಿಗೆ ಜನತಾದಳ ಕಾರ್ಯಕ್ರಮ ವಿಶೇಷವಾಗಿ ಸಾಗುತ್ತಿದೆ.ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸವನ್ನ ಕೈಗೊಂಡಿದ್ದೇವೆ
ಜೆಡಿಎಸ್ ವರಿಷ್ಠರ ಆದೇಶದಂತೆ ಪ್ರವಾಸ ಹೊರಟಿದ್ದೇವೆ
ಜನಾಭಿಪ್ರಾಯವನ್ನು ಕೂಡ ಸಂಗ್ರಹಣೆ ಮಾಡುತ್ತಿದ್ದೇವೆ
ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಸಾಗುತ್ತಿದೆ
45 ರಿಂದ 50 ದಿನಗಳ ಕಾಲ ಇದು ನಿರಂತರವಾಗಿ ಸಾಗುತ್ತದೆ
ಶಿವಮೊಗ್ಗ ನಗರ ಭದ್ರಾವತಿ ಹಾಗೂ ಗ್ರಾಮಾಂತರ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇವೆ ಎಂದು ತಮ್ಮ ಪಕ್ಷದ ಯೋಜನೆ ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರದ ಪ್ರಸ್ತಾಪಸಿದ
ನಿಖಿಲ್ ಕುಮಾರಸ್ವಾಮಿ,
ಮೈತ್ರಿ ಬಹಳ ಬಲವಾಗಿ ಮುಂದುವರಿಯುತ್ತಿದೆ
ಮೈತ್ರಿಯಲ್ಲಿ ಯಾವುದೇ ರೀತಿಯ ಅಪಸ್ವರ ಹಾಗೂ ಬಿರುಕು ಉಂಟುಮಾಡುವ ಪ್ರಶ್ನೆಯೇ ಇಲ್ಲ.ಇದು ದೇವೇಗೌಡರು ತೆಗೆದುಕೊಂಡ ನಿರ್ಧಾರ ಶಾಶ್ವತವಾಗಿ ಉಳಿಯುತ್ತದೆ
ನರೇಂದ್ರ ಮೋದಿ ಅವರಿಗೆ ಶಕ್ತಿಯನ್ನು ತುಂಬುವಂತ ಕೆಲಸ ಮಾಡಲಾಗುತ್ತದೆ ಎಂದರು.
ಎನ್ ಡಿ ಎ ಬೆಂಬಲಕ್ಕೆ ನಾವು ನಿಂತಿದ್ದೇವೆ
ಮುಂದಿನ 2028ರ ಚುನಾವಣೆಯಲ್ಲಿ ಕೂಡ ಇದೇ ಮೈತ್ರಿ ಸಾಗುತ್ತದೆ
ನೂರಕ್ಕೆ ನೂರರಷ್ಟು ಮೈತ್ರಿ ಸದೃಢವಾಗಿ ಮುಂದಿನ ಚುನಾವಣೆಯಲ್ಲಿ ಇರುತ್ತದೆ. ಎಸ್ಐಟಿಗೆ ಧರ್ಮಸ್ಥಳ ಪ್ರಕರಣ ನೀಡಿರುವ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ,
ಅದು ನ್ಯಾಯಾಲಯದಲ್ಲಿದೆ ವಿಚಾರ ಆಚೆ ಬಂದ ಮೇಲೆ ಚರ್ಚೆ ಮಾಡೋಣ ಎಂದರು.
ಈ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರ ಹಗರಣಗಳ ಅಸ್ತ್ರ ಆಗಿದೆ ಎಂದರು.
Nikhil Kumaraswamy ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ವಸೂಲಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್
ರಾಜ್ಯ ಸರ್ಕಾರ ದಿವಾಳಿಗೆ ಹೋಗಿದೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಇಂದು ಸುನಾಮಿ ರೀತಿ ಆಗಿದೆ
ಹಾಗಾಗಿ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಬೇಕರಿಗಳ ಮೇಲೆ ಇವರ ದೌರ್ಜನ್ಯ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕೂಡ ಶೋಭೆ ತರುವಂತದ್ದಲ್ಲ, ವ್ಯಾಪಾರಿಗಳು ಬೀದಿಗಿಳಿದು ಹೋರಾಟ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ಅವರು ಸಮಯ ನೀಡಿದ್ದು ಟಿವಿಯಲ್ಲಿ ನೋಡಿದ್ದೇನೆ.ಶಾಸಕರಿಗೆ 50 ಕೋಟಿ ಶಾಸಕರ ನಿಧಿಗೆ ನೀಡಿರುವ ವಿಚಾರ
ಇದು ಮೂಗಿಗೆ ತುಪ್ಪ ವರಿಸುವ ಕೆಲಸ
50 ಕೋಟಿ ಘೋಷಣೆ ಮಾಡಿರುವುದು ಕಾಂಗ್ರೆಸ್ ಎಂಎಲ್ಎಗಳಿಗೆ ಮಾತ್ರ
ನಮ್ಮ ಪಕ್ಷದವರು ಹಾಗೂ ಬಿಜೆಪಿ ಪಕ್ಷದವರು ಏನು ಮಾಡಿದ್ದಾರೆ ?ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
50 ಕೋಟಿಯಲ್ಲಿ ಎಲ್ಲಾ ತಾಲೂಕುಗಳನ್ನ ಅಭಿವೃದ್ಧಿಪಡಿಸಲು ಸಾಧ್ಯವಿದೆಯೇ
ಇದು ನಿಜಕ್ಕೂ ಕೂಡ ಮೂಗಿಗೆ ತುಪ್ಪ ವರಿಸುವ ಕೆಲಸ ಎಂದು
ಟೀಕಿಸಿದರು.
