International JCI organization ಜೆಸಿಐ ಸಂಸ್ಥೆ ಮಾನವೀಯ ಸೇವೆಗಳೊಂದಿಗೆ ವ್ಯಕ್ತಿತ್ವ ವಿಕಸನ ಹಾಗೂ ಜೀವನದ ಕಲೆಯನ್ನು ಕಲಿಸುವುದರ ಮುಖಾಂತರ ಸದೃಢ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಿದೆ ಎಂದು ಜೆಸಿಐ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜುಂಜುನ್‌ವಾಲಾ ಹೇಳಿದರು.
ಶಿವಮೊಗ್ಗ ನಗರಕ್ಕೆ ಆಗಮಿಸಿ ವಲಯ 24ರ ಅಧಿಕೃತ ಭೇಟಿ ಸಮಯದಲ್ಲಿ ವಲಯದ ಎಲ್ಲ ಉಪಾಧ್ಯಕ್ಷರು, ವಲಯ ಮಂಡಳಿ ಎಲ್ಲ ಸದಸ್ಯರು, ಜಿಲ್ಲೆಯ ಎಲ್ಲ ಜೆಸಿಐ ಘಟಕದ ಸದಸ್ಯರ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತರಾಷ್ಟ್ರೀಯ ಜೆಸಿಐ ಸಂಸ್ಥೆ ಮನುಕುಲದ ಸೇವೆ, ಒಡನಾಟ, ಪ್ರೀತಿ ಮತ್ತು ಉತ್ತಮವಾದ ಮಾನವೀಯ ಸಂಬಂಧಗಳು ಹಾಗೂ ಮಕ್ಕಳಲ್ಲಿ ಜೀವನ ಕೌಶಲ್ಯ, ನಾಯಕತ್ವದ ಗುಣ ಮತ್ತು ಸಂಘಟನೆ ಶಕ್ತಿ ತುಂಬುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡುವಲ್ಲಿ ಜೆಸಿಐ ಪಾತ್ರ ಪ್ರಮುಖ ಎಂದು ತಿಳಿಸಿದರು.
ವಲಯ 24ರಲ್ಲಿ ಎಲ್ಲ ಜೆಸಿ ಘಟಕಗಳು ತುಂಬಾ ವಿಶೇಷ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದೆ ಎಂದರು.
ವಲಯ 24ರ ಅಧ್ಯಕ್ಷ ಜೆಸಿಐ ಸೆನೇಟರ್ ಗೌರೀಶ್ ಭಾರ್ಗವ್ ಮಾತನಾಡಿ, ವಲಯ 24 ಈಗ ಜೆಸಿಐನಲ್ಲೇ ವಿಶೇಷವಾದ ಸಂಚಲನ ಮೂಡಿಸಿದೆ. ಹೊಸ ಹೊಸ ಸದಸ್ಯರ ಸೇರ್ಪಡೆ ಹಾಗೂ ಹೊಸ ಘಟಕಗಳ ಸ್ಥಾಪನೆ ಹಾಗೂ ವಿಶೇಷವಾದ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಜೆಸಿಐ ಫೌಂಡೇಷನ್ಸ್ಗೆ ಅತಿ ಹೆಚ್ಚಿನ ದೇಣಿಗೆ ನೀಡಿವೆ ಎಂದರು.
ರಾಷ್ಟ್ರೀಯ ಅಧ್ಯಕ್ಷರ ಟೂರ್ ಡೈರೆಕ್ಟರ್ ಸುದರ್ಶನ್ ತಾಯಿಮನೆ ಅವರು ಜೆಸಿಐ ಸಂಸ್ಥೆ ನಡೆದು ಬಂದ ದಾರಿ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
International JCI organization ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ ಗಣೇಶ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷರ ಭೇಟಿಯಿಂದ ಎಲ್ಲ ಜೆಸಿಐ ಘಟಕಗಳಿಗೆ ಅವರ ಮಾರ್ಗದರ್ಶನ, ಸಲಹೆ ಹಾಗೂ ಸಹಕಾರ ಇನ್ನಷ್ಟು ಹುಮ್ಮಸ್ಸು ಮೂಡಿಸಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಜೆಸಿಐನ 22 ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು, ಹಿರಿಯ ಜೆಸಿಐ ಸದಸ್ಯರುಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಮಧುಸೂದನ್ ನಾವಡ, ಪ್ರಮೋದ್ ಶಾಸ್ತ್ರಿ. ವಿನೀತ್ ಆರ್., ಜೆಸಿಐನ ಎಲ್ಲ ಹಿರಿಯ ಸದಸ್ಯರು ಉಪಸ್ಥಿತರಿದ್ದರು.
International JCI organization ಮಾನವೀಯ ಸೇವೆ, ವ್ಯಕ್ತಿತ್ವ ವಿಕಸನ & ಜೀವನ ಕಲೆಯ ಕಲಿಕೆ ಮೂಲಕ ಜೆಸಿಐ ನಿಂದ ಸಮಾಜ ನಿರ್ಮಾಣ- ಅಂಕುರ್ ಜುಂಜುನ್ ವಾಲಾ
Date:
