Nomadic community of SC and ST ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ನಿವೇಶನ / ವಸತಿ ರಹಿತ ಬಡ ಕುಟುಂಬದವರು ಟೆಂಟು ಮತ್ತು ಗುಡಿಸಲುಗಳಲ್ಲಿ ಹೊದಿಕೆಯಾಗಿದ್ದ ತಾಡಪಾಲುಗಳು ಶಿಥಿಲಗೊಂಡಿರುವುದು ಗಮನಕ್ಕೆ ಬಂದಿರುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರ ರಸ್ತೆ, ಶ್ರೀ ರಾಂಪುರದಲ್ಲಿ ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದವರು ವಾಸಿಸುತ್ತಿರುವ 91 ಕುಟುಂಬಗಳಿಗೆ ಹಾಗೂ ಶಿವಮೊಗ್ಗ ನಗರದ ಎಮ್.ಆರ್.ಎಸ್. ಡಬಲ್ ಟ್ಯಾಂಕ್ ಹತ್ತಿರ ಟೆಂಟು, ಗುಡಾರಗಳನ್ನು ನಿರ್ಮಿಸಿಕೊಂಡು ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯದ 44 ಕುಟುಂಬಗಳು ವಾಸಿಸುತ್ತಿದ್ದು. ಈ ನಡುವೆ ಅತಿ ಮಳೆಯಿಂದಾಗಿ ತೊಂದರೆ ಯಾಗುತ್ತಿದ್ದು, ನಿಗಮದಿಂದ ಮೂಲಭೂತ ಸೌಕರ್ಯ ಯೋಜನೆಗೆ ನಿಗದಿ ಪಡಿಸಿದ ಅನುದಾನದಲ್ಲಿ ತಾತ್ಕಾಲಿಕವಾಗಿ ಸುಮಾರು 150 ಕುಟುಂಬಗಳಿಗೆ ತಡಪಾಲುಗಳನ್ನು ಶ್ರೀಮತಿ ಪಲ್ಲವಿ ಜಿ. ಅಧ್ಯಕ್ಷರು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮರವರು ವಿತರಿಸಿದರು. ಇವರುಗಳಿಗೆ ಶಾಶ್ವತ ನೆಲೆ ಕಲ್ಪಿಸಲು ಶಿದಿಲೀಪುರ ಗ್ರಾಮದ ಹತ್ತಿರ ಸರ್ಕಾರಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಅದನ್ನು ಹಂಚಿಕೆ ಮಾಡಿ ಅಭಿವೃದ್ಧಿ ಮಾಡುವ ಕಾರ್ಯವು ಪ್ರಗತಿಯಲ್ಲಿರುತ್ತದೆ.
Nomadic community of SC and ST ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಶ್ರೀ ಚನ್ನಬಸಪ್ಪರವರು ಉಪಸ್ಥಿತರಿದ್ದು, ಸದರಿ ಅಲೆಮಾರಿ ಕುಟುಂಬಕ್ಕೆ ನೆಲೆ ಕಲ್ಪಿಸುವ ಸಂಬಂಧ ಸರ್ಕಾರವು ಆಶ್ರಯ ಯೋಜನೆಗೆ ನಿಗಧಿಪಡಿಸಿರುವ ಭೂಮಿಯಲ್ಲಿ ಸದರಿ ಶಾಸಕರು ಮುಂಬರುವ ಅಧಿವೇಶನದ ನಂತರದಲ್ಲಿ ಆದ್ಯತೆಯ ಮೇರೆಗೆ ಈ ಅಲೆಮಾರಿ ಕುಟುಂಬಗಳಿಗೆ ಹಕ್ಕು ಪತ್ರ ಕೊಡಿಸುವ ವರದಿ ನೀಡಿದರು. ಈ ಸಂದರ್ಭದಲ್ಲಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ ಜಿಲ್ಲೆರವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಜಿಲ್ಲೆರವರು ಮತ್ತು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಇತರೆ ಅಲೆಮಾರಿ ಮುಖಂಡರುಗಳು ಭಾಗಿಯಾಗಿದ್ದರು.
Nomadic community of SC and ST ಪರಿಶಿಷ್ಠ ಜಾತಿಯ ಅಲೆಮಾರಿ ಸಮುದಾಯ 150 ಕುಟುಂಬಕ್ಕೆ ತಾಡಪಾಲು ವಿತರಣೆ
Date:
