Rotary Club Shivamogga ಇಂಟರ್ಯಾಕ್ಟ್ ಕ್ಲಬ್ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಯಲ್ಲಿ ಸಂವಹನ ಕೌಶಲ್ಯ ಕಲಿಕೆಗೆ ನೆರವಾಗುತ್ತದೆ ಎಂದು ವಲಯ 10ರ ಇಂಟರ‍್ಯಾಕ್ಟ್ ಜೋನಲ್ ಕೋಆರ್ಡಿನೇಟರ್ ಸೂರ್ಯನಾರಾಯಣ ಉಡುಪ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಶ್ರೀ ಶಾರದಾದೇವಿ ಅಂಧರ ವಿಕಾಸ ಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಮಾತನಾಡಿ, ಇಂಟರ‍್ಯಾಕ್ಟ್ ಕ್ಲಬ್ ಉತ್ತಮ ವಿದ್ಯಾರ್ಥಿ ನಾಯಕರನ್ನು ತಯಾರು ಮಾಡುವಲ್ಲಿ ಸಫಲವಾಗಿದೆ. ನಮ್ಮ ರೋಟರಿ ಸಂಸ್ಥೆ ಸದಾ ನಿಮ್ಮೊಂದಿಗೆ ಇದೆ. ಮುಂದಿನ ದಿನಗಳಲ್ಲಿ ನಿಮ್ಮ ಕುಂದು ಕೊರತೆಗಳನ್ನು ಪರಿಹರಿಸುವುದರಲ್ಲಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದರು.
Rotary Club Shivamogga ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ, ಇಂಟರ‍್ಯಾಕ್ಟ್ ಕ್ಲಬ್ 1962ರಲ್ಲಿ ಪ್ರಾರಂಭವಾಗಿ ಇಂದಿಗೂ ಉತ್ತಮ ವಿದ್ಯಾರ್ಥಿಗಳನ್ನು ಮತ್ತು ವಿದ್ಯಾರ್ಥಿ ನಾಯಕರನ್ನು ಸಮಾಜಕ್ಕೆ ನೀಡಿದೆ ಎಂದು ತಿಳಿಸಿದರು.
ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಕೀರ್ತನಾ ಮತ್ತು ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ ಅವರಿಗೆ ಪದಗ್ರಹಣ ಮಾಡಿ ಶುಭಾಶಯ ತಿಳಿಸಿದರು. ಶಾರದಾ ದೇವಿ ಅಂಧರ ವಿಕಾಸ ಶಾಲೆಯ ಟ್ರಸ್ಟಿ ಅನಿತಾ ಮಾತನಾಡಿ, ರೋಟರಿ ಸಂಸ್ಥೆಯ ಸಹಕಾರವನ್ನು ಶ್ಲಾಘಿಸಿದರು.
ಶಾರದಾ ದೇವಿ ಅಂಧರ ವಿಕಾಸ ಶಾಲೆಯ ಮುಖ್ಯಶಿಕ್ಷಕ ಸುರೇಶ್, ಅಧ್ಯಕ್ಷೆ ರಾಜಶ್ರೀ ಬಸವರಾಜ್ ಹಾಗೂ ಕಾರ್ಯದರ್ಶಿ ಮಥುರಾ ಧನಂಜಯ್, ಇಂಟರ‍್ಯಾಕ್ಟ್ ಚೇರ್ಮನ್ ಗೀತಾ ಜಗದೀಶ್, ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ಜಯಶೀಲ್ ಶೆಟ್ಟಿ, ಮಾಜಿ ಸಹಾಯಕ ಗವವರ್ನರ್ ರವಿ ಕೋಟೋಜಿ, ರಮೇಶ, ಸುರೇಖಾ ಮುರಳಿಧರ್, ಗಿರೀಶ್, ಧರ್ಮೇಂದ್ರ ಸಿಂಗ್, ಬಲರಾಮ್, ಜ್ಯೋತಿ, ಶ್ರೀರಾಮ್, ಲಕ್ಷ್ಮೀ ರವಿ, ದೀಪಾ ಶೆಟ್ಟಿ, ಗುರುರಾಜ್, ಈಶ್ವರ, ಮುರುಳಿ, ಅನಿತಾ ಹಾಗೂ ಚೈತ್ರ ಹೊಳ್ಳ ಉಪಸ್ಥಿತರಿದ್ದರು.
