India Scouts and Guides ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ಮತ್ತು ಸಾಮಾನ್ಯ ಜ್ಞಾನ ವೃದ್ಧಿಸುವ ರಾಜ್ಯ ಪುರಸ್ಕಾರ ತರಬೇತಿ ಶಿಬಿರ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಪರೀಕ್ಷಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು ರಾಜ್ಯ ಸಂಸ್ಥೆಯ ಆದೇಶದ ಮೇರೆಗೆ ಎಲ್ಲಾ ಜಿಲ್ಲೆಗಳಲ್ಲೂ ಸಹ ಈ ರಾಜ್ಯ ಪುರಸ್ಕಾರ ಪೂರ್ವಭಾವಿ ಶಿಬಿರಗಳು ನಡೆಯುತ್ತಿವೆ. ಇದರಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಇನ್ನು ಉನ್ನತವಾದ ರಾಷ್ಟ್ರಪತಿ ಅವಾರ್ಡ. ನಲ್ಲು ಸಹ ಭಾಗವಹಿಸಬಹುದಾಗಿದೆ ಎಂದು ನುಡಿದರು.
ಶಿಬಿರದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ವಿದ್ಯಾಭ್ಯಾಸದಲ್ಲಿ ಇರುವ ವಿಷಯಗಳನ್ನು ಬಿಟ್ಟು ಅವರಲ್ಲಿ ಆತ್ಮವಿಶ್ವಾಸ ಹಾಗೂ ಜೀವನದ ಕಲೆ ಸಂಕಷ್ಟದಲ್ಲಿ ಎದುರಾದಾಗ ವಿವಿಧ ರೀತಿಯ ಬುದ್ಧಿಗೆ ಕಸರತ್ತು ನೀಡುವ ಪರೀಕ್ಷೆಗಳು ಎಲ್ಲವನ್ನು ಈ ಪೂರ್ವಭಾವಿ ಪರೀಕ್ಷಾ ತರಬೇತಿಯಲ್ಲಿ ಕಲಿಸಲಾಗುವುದು ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗಪಡಿಸಿಕೊಂಡು ಮುಂದಿನ ಹಂತಕ್ಕೆ ಹೋದಾಗ ಯಶಸ್ಸು ಸಿಗುತ್ತದೆ ಎಂದು ನುಡಿದರು .
ಶಿಬಿರದ ಮುಖ್ಯಸ್ಥರು ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ರಾಜೇಶ್ ಅವಲಕ್ಕಿ ಅವರು ಶಿಬಿರಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ತರಬೇತಿಗಳನ್ನು ನೀಡಿ ಜೊತೆಗೆ ಸ್ಕೌಟ್ಸ್ ಅಂಡ್ ಗೈಡ್ಸ್ ನಿಯಮಗಳನ್ನು ಹಾಗೂ ಅನೇಕ ತರಹದ ಸ್ಪರ್ಧಾತ್ಮಕ ವಿಷಯಗಳನ್ನು ತಿಳಿಸಿದರು. ಮತ್ತೋರ್ವ ತರಬೇತಿ ಆಯುಕ್ತರಾದ ಶಿವಶಂಕರ ಅವರು ಈ ಪರೀಕ್ಷೆಯಲ್ಲಿ ಅಗತ್ಯವಾಗಿ ಬೇಕಾದ ಮೂಲಭೂತ ವಿಷಯಗಳು ಹಾಗೂ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು. ಹಾಗೂ ರಸ್ತೆ ಸುರಕ್ಷತೆ ಪ್ರಥಮ ಚಿಕಿತ್ಸೆ ಎಂಬುದರ ಬಗ್ಗೆ ಸಮಗ್ರವಾದ ವಿವರವನ್ನು ನೀಡಿದರು.
India Scouts and Guides ವಿವಿಧ ತಾಲೂಕುಗಳಿಂದ ಆಗಮಿಸಿದ ಶಿಬಿರಾರ್ತಿಗಳು. ಆಸಕ್ತಿಯಿಂದ ಭಾಗವಹಿಸಿ ಎಲ್ಲಾ ವಿಷಯಗಳಲ್ಲೂ ತರಬೇತಿ ಪಡೆದರು. ಸ್ಕೌಟ್ ಆಯುಕ್ತರಾದ ಆನಂದ್ ಎಸ್ ಜಿ. ಚುಡಮಣಿ ಈ ಪವಾರ್. ಲಕ್ಷ್ಮಿ ಕೆ ರವಿ. ವೈ ಆರ್ ವೀರೇಶಪ್ಪ. ಮಲ್ಲಿಕಾರ್ಜುನ್ ಕಾನೂರ್. ಎನ್ ಆರ್ ಚಂದ್ರಶೇಖರ್. ಪರಮೇಶ್ವರಯ್ಯ. ಸುಮನ್ ಶೇಖರ್. ರೇಣುಕಾ. ಅಶ್ವಿನಿ. ಜ್ಯೋತಿ. ಪರಿಮಳ. ಅಕ್ಷತಾ. ಡಾಕ್ಟರ್ ಅಶ್ವಿನಿ ಬಿದರಹಳ್ಳಿ ಗಿರಿಜಮ್ಮ. ಕೃಷ್ಣಸ್ವಾಮಿ. ವಿಜಯಲಕ್ಷ್ಮಿ. ಗಿರಿಜಮ್ಮ ಹಾಗೂ ತರಬೇತುದಾರರು ಉಪಸ್ಥಿತರಿದ್ದರು.
