Adichunchanagiri Mutt ಹೆಸರೇ ಹೇಳುವಂತೆ ಇದು ಮಾತುಕತೆಯ ವೇದಿಕೆ. ಹರಟೆ ಎಂದರೆ ಹಾಸ್ಯ ಮಾತ್ರವಲ್ಲ ಅದರಲ್ಲಿ ಜೀವನಕ್ಕೆ ಬೇಕಾದ ಸಂದೇಶವು ಇದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠ,ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶರಾವತಿ ನಗರದ ಬಿಜಿಎಸ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಮೂಹ ಮಾಧ್ಯಮಗಳು ಇಂದಿನ ಶೈಕ್ಷಣಿಕ ಪ್ರಗತಿಗೆ ಮಾರಕವೂ, ಪೂರಕವೋ ಎಂಬ ವಿಷಯದ ಬಗ್ಗೆ ಬಿಜಿಎಸ್ ವಸತಿ ಶಾಲೆಯ ಮಕ್ಕಳಿಂದ ಹರಟೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಟಿ.ವಿ., ಮೊಬೈಲ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎಂಬ ಆತಂಕ ಬಹುತೇಕ ಹೆತ್ತವರಲ್ಲಿ, ಶಿಕ್ಷಕರಲ್ಲಿದೆ, ಇದನ್ನು ಬಿಟ್ಟು ಅವರು ಸರಿಯಾಗಿ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಟಿ.ವಿ, ರೇಡಿಯೋ ಮೂಲಕ ಪಠ್ಯಗಳ ಬೋಧನೆಯ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸುವಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರ ಪ್ರಯೋಜನ ಪಡೆದರೆ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸುವುದರೊಂದಿಗೆ ಪರೀಕ್ಷೆ ತಯಾರಿಯಲ್ಲಿ ಸುಲಭವಾಗುವುದು.
ವಿದ್ಯಾರ್ಥಿಗಳು ಯಾವ ಕಾರ್ಯಕ್ರಮಗಳನ್ನು ಕೇಳುವುದು ಹಾಗೂ ನೋಡುವುದರಿಂದ ತಮ್ಮ ವಿಷಯಗಳಿಗೆ ಪೂರಕ, ಮಾರಕ ಎಂಬುದಾಗಿ ಶಿಕ್ಷೆಕರು ಮಾಹಿತಿ ನೀಡಬೇಕು ಎಂದರು.
Adichunchanagiri Mutt ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಕವಿತಾ ಸುಧೀಂದ್ರ ರವರು ಕವನದ ಮೂಲಕ ತಮ್ಮ ಮಾತನ್ನು ಆರಂಭಿಸಿ ವಿದ್ಯಾರ್ಥಿಗಳ ಮಾತಿನ ಶೈಲಿ, ತಂದೆ ತಾಯರಿಗೆ ಕೊಡುವ ಗೌರವ ಇವೆಲ್ಲವನ್ನು ಕಲಿಯುತ್ತಿರುವ ವಸತಿ ಶಾಲೆಯ ಮಕ್ಕಳು ಪುಣ್ಯವಂತರು ಎಂದು ತಿಳಿಸುತ್ತಾ ತಮ್ಮ ಮಾತಿನ ಶೈಲಿಯಿಂದ ಎಲ್ಲರನ್ನು ನಗಿಸುತ್ತ ಎಲ್ಲರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಹಿರಿಯಣ್ಣ ಹೆಗಡೆ, ವಸತಿ ಶಾಲೆಯ ಪ್ರಾಂಶುಪಾಲರಾದ ಗಿರೀಶ್ ಬಿ. ಎನ್, ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಸುಜಾತಾ, ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ನಟರಾಜ, ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಮತ್ತು ಪೋಷಕ ವೃಂದದವರು ಉಪಸ್ಥಿತರಿದ್ದರು
Adichunchanagiri Mutt ಟೀವಿ,ಮೊಬೈಲ್ ಗಳಿಂದ ಮಕ್ಕಳು ಹಾಳಾಗುತ್ತಾರೆ ಎಂಬ ಅಭಿಪ್ರಾಯ ಬದಲಿಸಬೇಕು- ಶ್ರೀನಾದಮಾಯಾನಂದ ನಾಥಶ್ರೀ
Date:
