Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮತ್ತು ಮಹಾನಗರಪಾಲಿಕೆ, ಶಿವಮೊಗ್ಗ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಉದ್ದಿಮೆ ಪರವಾನಗಿಯನ್ನು ಪಡೆದುಕೊಳ್ಳಲು ಉದ್ದಿಮೆದಾರರಿಗೆ ಅನುಕೂಲಕ್ಕಾಗಿ ದಿನಾಂಕ:23, 24 ಮತ್ತು 25ನೇ ಜುಲೈ ರಂದು ಬೆಳಿಗ್ಗೆ 10 ರಿಂದ 4 ಘಂಟೆಯವರೆಗೆ ಮೂರು ದಿನಗಳ ಕಾಲ “ಉದ್ದಿಮೆ ಪರವಾನಿಗೆ” (ಟ್ರೇಡ್ ಲೈಸೆನ್ಸ್) ನೀಡುವ ಬೃಹತ್ ಮೇಳವನ್ನು ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಮಹಾನಗರಪಾಲಿಕೆಯ ಆಯುಕ್ತರಾದ ಶ್ರೀಯುತ ಮಾಯಣ್ಣ ಗೌಡರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿ. ಗೋಪಿನಾಥ್‌ರವರು ವಹಿಸಲಿದ್ದಾರೆ. ಸಂಘದ ಆಡಳಿತ ಮಂಡಳಿಯ ಎಲ್ಲಾ ನಿರ್ದೆಶಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಮಾನ್ಯ ಸದಸ್ಯ ಉದ್ದಿಮೆದಾರರು, ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕಾರ್ಯದರ್ಶಿ ಎ.ಎಂ. ಸುರೇಶ್‌ರವರು ಸಂಘದ ತಿಳಿಸಿದ್ದಾರೆ.
ಉದ್ದಿಮೆ ಪರವಾನಗಿ ನವೀಕರಿಸಲು ಅರ್ಜಿಯೊಂದಿಗೆ ಕಳೆದ ವರ್ಷದ 1) ಲೈಸೆನ್ಸ್ ಪ್ರತಿ, 2)ಪಾನ್‌ಕಾರ್ಡ್ ಪ್ರತಿ, 3) ಮೊಬೈಲ್ ನಂಬರ್ ಮತ್ತು
Chamber Of Commerce Shivamogga ಹೊಸದಾಗಿ ಪರವಾನಗಿ ಪಡೆಯುವವರು ಅರ್ಜಿಯೊಂದಿಗೆ ಈ ಕೆಳಕಾಣಿಸಿದ ದಾಖಲೆಗಳನ್ನು ಸಲ್ಲಿಸಿ ಪರವಾನಗಿ ಪಡೆಯಲು ಕೋರಲಾಗಿದೆ.
- ಅರ್ಜಿದಾರರ ಪಾಸ್‌ಪೋರ್ಟ್ ಭಾವಚಿತ್ರ, 2. ಮುನಿಸಿಪಲ್ ಖಾತಾ ನಕಲು/ಪಹಣೆ/ಬಾಡಿಗೆ ಕರಾರು 4. ಆಧಾರ್ ಕಾರ್ಡ್ 5. ವಿದ್ಯುಚ್ಛಕ್ತಿ ಬಿಲ್ 6. ಮೊಬೈಲ್ ನಂಬರ್ 7. ಪಾನ್‌ಕಾರ್ಡ್ 8. ಇ-ಮೇಲ್ ಐಡಿ.
