Shivamogga District Tourism Development Forum ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ವತಿಯಿಂದ ವಾರಾಂತ್ಯದ ಪ್ರವಾಸದ ಯೋಜನೆಯಡಿಯಲ್ಲಿ 27.07.2025 ರ ಭಾನುವಾರದಂದು ಶಿವಮೊಗ್ಗ ಜಿಲ್ಲೆಯಲ್ಲಿರುವ ಆನಂದಪುರ ಸಮೀಪವಿರುವ ಚಂಪಕ ಸರಸಿ ಕೊಳ, ಹೆಗ್ಗೋಡಿನ ನೀನಾಸಂ, ಚರಕ, ಸಿಗಂದೂರು ಚೌಡೇಶ್ವರಿ ಅಮ್ಮನವರ ದೇವಸ್ಥಾನ ಹಾಗೂ ಹೊಸನಗರ ತಾಲೂಕಿನಲ್ಲಿ ಇರುವ ಜೇನುಕಲ್ಲು ಗುಡ್ಡಮ್ಮನ ದೇವಸ್ಥಾನಕ್ಕೆ ಪ್ರವಾಸವನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ 6.30 ಕ್ಕೆ ಹೋಟೆಲ್ ಮಥುರಾ ಪ್ಯಾರಡೈಸ್ ಹೋಟೆಲ್ ನಿಂದ
ಹೊರಟು ರಾತ್ರಿ 8.30 ಕ್ಕೆ ಶಿವಮೊಗ್ಗಕ್ಕೆ ವಾಪಾಸಾಗುವುದು. ಶುಲ್ಕ ಒಬ್ಬರಿಗೆ ರೂ. 600.00, Shivamogga District Tourism Development Forum 45 ಜನರಿಗೆ ಮಾತ್ರ ಅವಕಾಶ, ಮೊದಲು ಹೆಸರು ನೊಂದಾಯಿಸಿದವರಿಗೆ ಆಧ್ಯತೆ ನೀಡಲಾಗುವುದು. ಆಸಕ್ತರು ತಮ್ಮ ಹೆಸರನ್ನು ಅ.ನಾ.ವಿಜಯೇಂದ್ರ ರಾವ್, ಸಹ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ಪ್ರವಾಸೋಧ್ಯಮ ಅಭಿವೃದ್ಧಿ ವೆದಿಕೆ ದೂರವಾಣಿ ಸಂಖ್ಯೆ 9448790127 ಇವರನ್ನು ಸಂಪರ್ಕಿಸುವಂತೆ ವೇದಿಕೆಯ ಕಾರ್ಯದರ್ಶಿ ಎನ್.ಗೋಪಿನಾಥ್ ತಿಳಿಸಿದ್ದಾರೆ.
