National Education Committee ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಪರಿಸರ ನಾಶದಿಂದ ಇಂದು ಮನುಕುಲ ಅಸಮಾತೋಲನದಲ್ಲಿದೆ ಆದ್ದರಿಂದ ಇದಕ್ಕೆ ಸರಿಯಾದ ಪರಿಹಾರ ಹೆಚ್ಚು ಹೆಚ್ಚು ಗಿಡ ಮರಗಳನ್ನು ನೀಡುವುದರ ಮುಖಾಂತರ. ಹಾಗೂ ಪ್ಲಾಸ್ಟಿಕ್ ಅನ್ನು ತ್ಯಜಿಸುವುದರ ಮುಖಾಂತರ ಪರಿಸರವನ್ನು ಸ್ವಚ್ಛವಾಗಿದೆ ಇಟ್ಟುಕೊಳ್ಳುವವರ ಜೊತೆಗೆ ಗಿಡ ಮರಗಳನ್ನು ನೆಟ್ಟು ಪಾಲನೆಯ ಪೋಷಣೆ ಮಾಡುವುದು ತುಂಬಾ ಅಗತ್ಯವಾಗಿದೆ. ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿ ಡಾಕ್ಟರ್ ಪಿ ನಾರಾಯಣ್ ಅಭಿಮತ ವ್ಯಕ್ತಪಡಿಸಿದರು. ನಾರಾಯಣ ವನ ಸ್ಥಾಪನೆ ಮಾಡಲು ಪೂರ್ವಭಾವಿಯಾಗಿ ಇಂದು ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಸಸಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು ಈ ವರ್ಷ ರೋಟರಿಯ ಜಿಲ್ಲಾ ಯೋಜನೆಗಳಲ್ಲಿ ಒಂದಾದ ಹಸಿರೇ ಉಸಿರು ಪರಿಸರ ಸಂರಕ್ಷಣೆಯ ಒಂದು ಉತ್ತಮವಾದ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಹಾಗೆ ಎಲ್ಲಾ ಜಿಲ್ಲೆಗಳನ್ನು ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸಲು ಆದೇಶ ನೀಡಲಾಗಿದೆ ಎಂದು ನುಡಿದರು.
National Education Committee ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ಕಾಲೇಜಿನ ಪ್ರಾಂಶುಪಾಲೆ ಪ್ರೊಫೆಸರ್ ಮಮತಾ ಬಿ ರಾವ್ ಅವರು ಮಾತನಾಡುತ್ತಾ. ಮನುಷ್ಯ ಸಮಾಜದಲ್ಲಿ ನೆಮ್ಮದಿಯಿಂದ ಜೀವನ ಮಾಡಲು ಉತ್ತಮವಾದ ಪರಿಸರ. ಗಾಳಿ ಬೆಳಕುಆಮ್ಲಜನಕ ತುಂಬಾ ಅಗತ್ಯವಾಗಿದೆ ಇಂದು ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯದಿಂದ ಪರಿಸರ ತುಂಬಾ ಹಾಳಾಗಿದೆ ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಗಿಡ ಮರಗಳನ್ನು ನಾವು ಎಲ್ಲರೂ ಬಳಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ನೆಪ್ಚೂನ್ ಕಿಶೋರ್ ಅವರು ಮಾತನಾಡುತ್ತಾ ಈಗಾಗಲೇ ಮಹಿಳಾ ಪಾಲಿಟೆಕ್ನಿಕ್. ಮಳೆ ಇರುವ ವರದಾಂಜನೇಯ ದೇವಸ್ಥಾನದ ಬಳಿ ಸ್ಥಾಪಿಸಲಾಗುವ ನಾರಾಯಣ ವನಕ್ಕೆ ಈಗಾಗಲೇ ಎಲ್ಲಾ ಸಂಘ ಸಂಸ್ಥೆಯವರು ವಿಶೇಷವಾದ ಸಸಿಗಳನ್ನು ನೀಡುವುದರ ಮುಖಾಂತರ ಒಂದು ಮಾದರಿ ವನವನ್ನಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ. ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ, ನಾಗರಾಜ್. ರೋಟರಿ ಮಾಜಿ ಸಹಾಯಕ ಗೌರ್ನರ್
ಜಿ ವಿಜಯಕುಮಾರ್. ಪ್ರೊಫೆಸರ್ ನಾಗರಾಜ್.. ಉಪಸ್ಥಿತರಿದ್ದರು.
