Monday, February 2, 2026
Monday, February 2, 2026

ತಾಳಗುಪ್ಪ ದಿಂದ ಯಶವಂತಪುರ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು, ಜುಲೈ 26 ರಿಂದ ಸಂಚಾರ ಆರಂಭ

Date:

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/06588) ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ.

ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ಎಕ್ಸ್ ಪ್ರೆಸ್ ವಿಶೇಷ ರೈಲು ಜುಲೈ 25, 2025 ರಂದು ರಾತ್ರಿ 10:30 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 04:15 ಗಂಟೆಗೆ ತಾಳಗುಪ್ಪ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ತುಮಕೂರು (11:18/11:20 PM), ತಿಪಟೂರು (00:13/00:15 AM), ಅರಸೀಕೆರೆ (00:33/00:38 AM), ಬೀರೂರು (01:13/01:15 AM), ತರೀಕೆರೆ (01:43/01:45 AM), ಭದ್ರಾವತಿ (02:00/02:02 AM), ಶಿವಮೊಗ್ಗ ಟೌನ್ (02:20/02:25 AM), ಆನಂದಪುರಂ (03:10/03:12 AM) ಮತ್ತು ಸಾಗರ ಜಂಬಗಾರು (03:35/03:37 AM) ನಿಲ್ದಾಣಗಳಲ್ಲಿ ಆಗಮಿಸಿ, ನಿರ್ಗಮಿಸಲಿದೆ.

ವಾಪಸ್ ಬರುವಾಗ, ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು ಜುಲೈ 26, 2025 ರಂದು ಬೆಳಿಗ್ಗೆ 08:15 ಗಂಟೆಗೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 04:50 ಗಂಟೆಗೆ ಯಶವಂತಪುರ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ಸಾಗರ ಜಂಬಗಾರು (08:30/08:32 AM), ಆನಂದಪುರಂ (09:00/09:02 AM), ಶಿವಮೊಗ್ಗ ಟೌನ್ (09:45/09:50 AM), ಭದ್ರಾವತಿ (10:15/10:17 AM), ತರೀಕೆರೆ (10:30/10:32 AM), ಬೀರೂರು (11:00/11:02 AM), ಅರಸೀಕೆರೆ (12:00/12:10 PM), ತಿಪಟೂರು (12:28/12:30 PM) ಮತ್ತು ತುಮಕೂರು (03:18/03:20 PM) ನಿಲ್ದಾಣಗಳಲ್ಲಿ ಆಗಮಿಸಿ, ನಿರ್ಗಮಿಸಲಿದೆ.

ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 01 ಎಸಿ ಟು ಟೈರ್, 02 ಎಸಿ ತ್ರಿ ಟೈರ್, 10 ಸ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...