ABVP ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ABVP) ಪ್ರಾಂತ್ಯ ಸಮ್ಮೇಳನವು 18 ಜುಲೈ 2025 ರಂದು ಶಿವಮೊಗ್ಗದ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಯುವ ಉದ್ಯಮಿ ರಾಕೇಶ್ ಗೌಡ ಅವರು ಪ್ರಮುಖ ಉದ್ಘಾಟಕರಾಗಿ ಭಾಗವಹಿಸಿ, ತನ್ನ ಪ್ರೇರಣಾದಾಯಕ ಭಾಷಣದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ತಲುಪಿದರು.
ಅವರು ತಮ್ಮ ಭಾಷಣದಲ್ಲಿ, “ಈ ದೇಶದ ಉಜ್ವಲ ಭವಿಷ್ಯ ಯುವಕರ ಕೈಯಲ್ಲಿದೆ. ಸದೃಢ ನಾಯಕತ್ವ, ಸಾಮಾಜಿಕ ಹೊಣೆಗಾರಿಕೆ ಮತ್ತು ದೇಶಭಕ್ತಿ ಎಂದರೆ ಕೇವಲ ಮಾತುಗಳಲ್ಲ, ಅವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನಿಜವಾದ ಮೌಲ್ಯಗಳು,” ಎಂದು ವಿದ್ಯಾರ್ಥಿಗಳಿಗೆ ಉತ್ಸಾಹ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಬಿವಿಪಿ ಕರ್ನಾಟಕ ದಕ್ಷಿಣ ಘಟಕದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಎಚ್ ಕೆ ವಹಿಸಿದ್ದರು.
ಪ್ರಾಂತ ವಿದ್ಯಾರ್ಥಿನಿ ಪ್ರಮುಖ ಸುಧ, ಶಿವಮೊಗ್ಗ ಜಿಲ್ಲಾ ಸಂಚಾಲಕ ಲೋಹಿತ್, ವಿಭಾಗ ಸಂಚಾಲಕ ರವಿ ಇರೂಜಿ, ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದಿತ್ಯ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷರಾಗಿ ಮಂಜಪ್ಪ ಜಿ ಕೆ ಅವರು ನೂತನ ಜವಾಬ್ದಾರಿಯನ್ನು ಸ್ವೀಕರಿಸಿದರು. ಜೊತೆಗೆ ವಿವಿಧ ವಿದ್ಯಾರ್ಥಿಗಳು ವಿಭಿನ್ನ ಹೊಣೆಗಾರಿಕೆಗಳನ್ನು ಸ್ವೀಕರಿಸಿ ಸಂಘಟನೆಯ ಚಟುವಟಿಕೆಗೆ ಬಲ ನೀಡಿದರು.
ABVP ಸಮ್ಮೇಳನದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಗಿದ್ದು, ದೇಶಪ್ರೇಮ, ಶಿಸ್ತು ಮತ್ತು ಸೇವಾಭಾವನೆ ಕುರಿತ ಸಂದೇಶಗಳು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ತುಂಬಿದವು.
