Shri Kshetra Dharmasthala ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹಾರ್ನಳ್ಳಿ ಗ್ರಾಮದ ಚೌಕಿ ಮಠಕ್ಕೆ ಮಂಜೂರು ಮಾಡಿದ 10ಲಕ್ಷದ ಡಿ ಡಿಯನ್ನು ಈ ದಿನ ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಅವರು ಮಠದ ಸ್ವಾಮೀಜಿಗಳಾದ ಶ್ರೀ ಮ. ನಿ. ಪ್ರ ನೀಲಕಂಠ ಸ್ವಾಮಿಗಳು ಮತ್ತು ಕಮಿಟಿಯ ಸದಸ್ಯರುಗಳ ಸಮ್ಮುಖದಲ್ಲಿ ಹಸ್ತಾಂತರ ಮಾಡಿ ಶ್ರೀ ಕ್ಷೇತ್ರದಿಂದ ಸುಮಾರು 15 ಸಾವಿರಕ್ಕೂ ಮಿಕ್ಕಿ ದೇವಸ್ಥಾನ, ಮಠ ಮಂದಿರಗಳ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಅನುದಾನಗಳನ್ನು ನೀಡಿದ್ದಾರೆ. ಇವತ್ತು ಕೇವಲ ಸ್ವಸಹಾಯ ಸಂಘಗಳನ್ನು ಮಾಡಿ ಅವರ ಮತ್ತು ಅವರ ಕುಟುಂಬದ ಅಭಿವೃದ್ಧಿಗೆ ಶ್ರಮಿಸುವುದಲ್ಲದೆ, ಗ್ರಾಮಗಳ ಹಳ್ಳಿಗಳ ಸರ್ವಾಂಗಿನ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಶ್ರೀ ಕ್ಷೇತ್ರದಿಂದ ಪೂಜ್ಯರು ಹಾರ್ನಳ್ಳಿ ಚೌಕಿ ಮಠಕ್ಕೆ 10 ಲಕ್ಷ ಮೊತ್ತವನ್ನು ಮಂಜೂರು ಮಾಡಿದ್ದು ಮಠದ ಅಭಿವೃದ್ಧಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ ಎಂದರು, ತಾಲೂಕಿನ ಯೋಜನಾಧಿಕಾರಿಗಳಾದ ಉಲ್ಲಾಸ್ ಮೆಸ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇವಸ್ಥಾನಗಳ ಅಭಿವೃದ್ಧಿ, ಮಠ ಮಂದಿರಗಳ ಅಭಿವೃದ್ಧಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು, ಸುಜ್ಞಾನ ನಿಧಿ ಶಿಷ್ಯವೇತನ, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆಜ್ಞಾನದೀಪ ಶಿಕ್ಷಕರ ನಿಯೋಜನೆ, ಸಮಾಜದಲ್ಲಿ ಯಾರು ಇಲ್ಲದೆ ನಿರ್ಗತಿಕವಾಗಿ ಜೀವನ ನಡೆಸುತ್ತಿರುವವರಿಗೆ ಮಾಸಿಕ, ಮಾಶಾಸನ, ವಾತ್ಸಲ್ಯ ಮನೆ ನಿರ್ಮಾಣ ಹೀಗೆ 10 ಹಲವಾರು ಕೆಲಸಗಳನ್ನು ಯೋಜನೆ ಮಾಡುತ್ತಿದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
Shri Kshetra Dharmasthala ವಲಯದ ಮೇಲ್ವಿಚಾರಕರಾದ ಸುರೇಶ್ ಶೆಟ್ಟಿಗಾರ್ ಎಲ್ಲರನ್ನು ಸ್ವಾಗತಿಸಿದರು, ಹಾರ್ನಳ್ಳಿ ಒಕ್ಕೂಟದ ಅಧ್ಯಕ್ಷರಾದ ಭಾಗ್ಯ, ಮಠದ ಕಮಿಟಿಯವರಾದ ಸುರೇಶ್ ಮತ್ತು ಸದಸ್ಯರು, ಸೇವಾ ಪ್ರತಿನಿಧಿಗಳಾದ ಕವಿತಾ ಮತ್ತು ಆಶಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು
