Rotary Shivamogga ರೋಟರಿ ಜಿಲ್ಲೆಯಿಂದ ಅತಿ ಹೆಚ್ಚು ಸಸಿಗಳನ್ನು ನೆಡುವುದರ ಮುಖಾಂತರ ಪರಿಸರಕ್ಕೆ ವಿಶೇಷ ಕೊಡುಗೆ ನೀಡಬೇಕು ಎಂದು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ರೋಟರಿ ಬಯೋಡೈವರ್ಸಿಟಿ ಪಾರ್ಕ್ನಲ್ಲಿ ಸಸಿ ನೆಡುವುದರ ಮೂಲಕ ರೋಟರಿ ಜಿಲ್ಲಾ ಯೋಜನೆ ಪರಿಸರ ಸಂರಕ್ಷಣೆ, ಹಸಿರು-ಉಸಿರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಜಿಲ್ಲಾ ಮಾಜಿ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಅವರ ಕನಸು. ಈಗಾಗಲೇ ಇಲ್ಲಿ ವಿವಿಧ ಜಾತಿ ಸಸಿಗಳನ್ನು ನೆಡುವುದರ ಮೂಲಕ ಈ ಜಾಗವನ್ನು ಬಹಳ ಸುಂದರವಾಗಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ಯುಟಿಪಿ ವತಿಯಿಂದ ಬಯೋಡೈವರ್ಸಿಟಿ ಉದ್ಯಾನವನ ಮಾಡಲು, ನಿರ್ವಹಣೆ ಮಾಡಲು ಈ ಸ್ಥಳ ನೀಡಿದ್ದು, ಈಗಾಗಲೇ ನಗರದ 8 ರೋಟರಿ ಕ್ಲಬ್‌ಗಳು ಈ ಯೋಜನೆಯಲ್ಲಿ ಸಹಕರಿಸುತ್ತಿದ್ದಾರೆ. ಹಾಗೆ ನಗರದ ಎಲ್ಲ ಸಂಘ ಸಂಸ್ಥೆಗಳು ಮತ್ತು ಶಾಲಾ ಕಾಲೇಜಿನವರು ವಿಶೇಷ ದಿನಗಳಲ್ಲಿ ಸಸಿಗಳನ್ನು ನೆಡುತ್ತಿದ್ದಾರೆ ಎಂದರು.
Rotary Shivamogga ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ನೆಪ್ಚೂನ್ ಕಿಶೋರ್ ಮಾತನಾಡಿ, ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ವಿಶೇಷ ಸೇವಾ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಹಾಯಕ ಗವರ್ನರ್ ಲಕ್ಷ್ಮಣ್‌ಗೌಡ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಡಾ. ಗುಡದಪ್ಪ ಕಸಬಿ, ಡಾ. ರವಿಕಿರಣ್, ವಲಯ ಸೇನಾನಿ ಕಿರಣಕುಮಾರ್, ಮಾಜಿ ಅಧ್ಯಕ್ಷ ಎನ್.ಎಚ್.ಶ್ರೀಕಾಂತ್, ಅರುಣ್ ದೀಕ್ಷಿತ್, ಮಂಜುನಾಥ ರಾವ್ ಕದಂ, ಎಂ.ಎಲ್.ಪ್ರತಾಪ್, ಎ.ಒ.ಮಹೇಶ್, ಗಣೇಶ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
Rotary Shivamogga ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ ಸಸಿ ನೆಟ್ಟು ಪರಿಸರಕ್ಕೆ ವಿಶೇಷ ಕೊಡುಗೆ ನೀಡಬೇಕು- ಬಿ.ಎಂ.ಭಟ್
Date:
