Thursday, March 19, 2026
Thursday, March 19, 2026

K. S. Eshwarappa ಶಿವಮೊಗ್ಗ ಕಾರ್ನಿವಲ್ ಅಂತಹ ವಸ್ತು ಪ್ರದರ್ಶನಗಳು ಮಹಿಳಾ ಸಬಲೀಕರಣಕ್ಕೆ ಪೂರಕ- ಕೆ.ಎಸ್.ಈಶ್ವರಪ್ಪ

Date:

K. S. Eshwarappa ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ನಗರದ ಶ್ರೀ ಸಾಯಿ ಇವೆಂಟ್ಸ್ ಪ್ರೆಸೆಂಟ್ಸ್ ಹಾಗೂ ಜೆಸಿಐ ಶಿವಮೊಗ್ಗ ಭಾವನ ಸಹಯೋಗದೊಂದಿಗೆ ಶುಭ ಮಂಗಳ ಸಮುದಾಯ ಭವನದಲ್ಲಿ ನಡೆಯುತ್ತಿರುವ ‘ಶಿವಮೊಗ್ಗ ಕಾರ್ನಿವಲ್ ‘ ವಸ್ತು ಪ್ರದರ್ಶನವನ್ನು ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ. ಎಸ್. ಈಶ್ವರಪ್ಪ ನವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಈ ರೀತಿಯ ಶಿವಮೊಗ್ಗ ಕಾರ್ನಿವಲ್ ಅಂತಹ ವಸ್ತು ಪ್ರದರ್ಶನಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾದ ಬೆಳವಣಿಗೆಗಳು ಜೆಸಿಐ ಶಿವಮೊಗ್ಗ ಭಾವನ ಸಂಸ್ಥೆಯು ವಿಶೇಷವಾಗಿ ಮಹಿಳೆಯರಿಗೆ ವಿನೂತನ ರೀತಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಶ್ರೀ ಸಾಯಿ ಇವೆಂಟ್ಸ್ ರವರ ಸಹಯೋಗದೊಂದಿಗೆ ಈ ಎರಡು ದಿನಗಳ ಕಾಲ ನಡೆಯುತ್ತಿರುವ ಅದ್ಭುತವಾದ ವಸ್ತು ಪ್ರದರ್ಶನವು ಯಶಸ್ವಿಯಾಗಲೆಂದು ಶುಭ ಹಾರೈಸಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ವಹಿಸಿದ್ದರು. K. S. Eshwarappa ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೆಸಿಐ ವಲಯ ಅಧ್ಯಕ್ಷರಾದ ಗೌರೀಶ್ ಭಾರ್ಗವ, ಯುವ ಮುಖಂಡರಾದ ಹೆಚ್‌.ಪಿ.ಗಿರೀಶ್, ಸಮಾಜ ಸೇವಕಿ ಪುಷ್ಪಾ ಶೆಟ್ಟಿ, ನಗರದ ಪ್ರಖ್ಯಾತ ವೈದ್ಯರುಗಳಾದ ಡಾ.ರಾಹುಲ್, ಡಾ.ಸಂಧ್ಯಾ, ಡಾ. ವಿದ್ಯಾ, ಡಾ ಸೌಮ್ಯ ರಾಣಿ, ವಕೀಲರಾದ ಅಲಿಯ ಶರಾವತಿ ಮಹಿಳಾ ಸಂಘದ ಅಧ್ಯಕ್ಷರಾದ ಶಶಿಕಲಾ, ಪ್ರಮುಖರಾದ ಭಾರತೀಯ ರಾಮಕೃಷ್ಣ, ಸಾಯಿವರಂ ನ ಮಾಲೀಕರಾದ ಪ್ರಮೀಳಾ, ಸಾಯಿ ಇವೆಂಟ್ಸ್ನ ಸೋಮೇಶ್ ಸಿಹಿಮೊಗ್ಗೆ , ರಾಜೇಶ್ವರಿಸೋಮೇಶ್ , ರಾಜೇಶ್ , ಹೂವಿತ , ಜೆಸಿಐ ಭಾವನದ ಕಾರ್ಯದರ್ಶಿ ಚೈತ್ರ ಪಿ ಸಜ್ಜನ್ , ಹಾಗೂ ಜೆಸಿಐ ಭಾವನದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...