Rotary Club ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜತೆಯಲ್ಲಿ ಶಿಸ್ತುಬದ್ಧ ಜೀವನಶೈಲಿ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಹಿರಿಯ ವೈದ್ಯ ಡಾ. ಪಿ.ನಾರಾಯಣ್ ಹೇಳಿದರು.
ಶಿವಮೊಗ್ಗ ನಗರದ ಮಲೆನಾಡು ಗೇಟ್ ವೇ ಸಭಾಂಗಣದಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, 20ಕ್ಕೂ ಹೆಚ್ಚು ಹೊಸ ಸದಸ್ಯರನ್ನು ಸಭೆಗೆ ಪರಿಚಯಿಸಿರುವುದು ತುಂಬಾ ಸಂತಸವಾಗಿದೆ. ಹೊಸ ಸದಸ್ಯರು ಮೀಟಿಂಗ್ ಹಾಜರಾಗುವ ಮೂಲಕ ರೋಟರಿ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜಮುಖಿ ಕೆಲಸಲದಲ್ಲಿ ಸದಾ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ನೂತನ ಅಧ್ಯಕ್ಷರಾಗಿ ಪ್ರಕಾಶ್ ಮೂರ್ತಿ.ಎಂ.ಆರ್ ಹಾಗೂ ಕಾರ್ಯದರ್ಶಿಯಾಗಿ ರಶ್ಮಿ ಆರ್.ಎಸ್ ಅವರು ಅಧಿಕಾರ ಸ್ವೀಕರಿಸಿದರು. ಡಾ. ಪಿ.ನಾರಾಯಣ್ ನೂತನ ಅಧ್ಯಕ್ಷರಿಗೆ ಪ್ರತಿಜ್ಞಾವಿಧಿ ಭೋದಿಸಿದರು.
ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಪ್ರಕಾಶ್ ಮೂರ್ತಿ ಎಂ.ಆರ್ ಮಾತನಾಡಿ, ಈ ದಿನ ನಾನು ಅಧ್ಯಕ್ಷರಾಗಿದ್ದು ಸುದಿನ, ಡಾ. ಪಿ.ನಾರಾಯಣ್ ಪ್ರತಿಜ್ಞಾವಿಧಿ ಬೋಧಿಸಿತ್ತಿದ್ದು ಅತ್ಯಂತ ಸಂತೋಷ ದಿನ. ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಹೊಸ ಸದಸ್ಯರ ಪರಿಚಯಿಸುತ್ತಿದ್ದೇವೆ ಎಂದರು. ಮೂರು ಇಂಟರ‍್ಯಾಕ್ಟ್ ಕ್ಲಬ್, ಎರಡು ರೋಟರ‍್ಯಾಕ್ಟ್ ಕ್ಲಬ್ ಆರಂಭಿಸುವುದಾಗಿ ಘೋಷಿಸಿದರು.
ಇಂಟರ‍್ಯಾಕ್ಟ್ ಕ್ಲಬ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟ್ ಬುಕ್ ವಿತರಿಸಲಾಯಿತು.
ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮಾತನಾಡಿ, 20ಕ್ಕೂ ಹೆಚ್ಚು ರೋಟರಿ ಸದಸ್ಯರು ಬಂದಿರುವುದು ನಿಜಕ್ಕೂ ಖುಷಿ ತರಿಸಿದೆ. ಸದಸ್ಯರು ಹೆಚ್ಚಿನ ಸೇವಾ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು.
Rotary Club ರಂಗರಾಜನ್, ನಿಕಟ ಪೂರ್ವ ಅಧಕ್ಷ ಮುಸ್ತಕ್ ಆಲಿ ಷಾ ಹಾಗೂ ಕಾರ್ಯದರ್ಶಿ ಶ್ರೀಕಾಂತ್, ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಪದಾಧಿಕಾರಿಗಳು ಉಪಸ್ಥಿತರಿದ್ದರು.
