Rupashree Pre Graduate College ಪ್ರಾಚೀನಕಾಲದಿಂದಲೂ ಇರುವ ಸಂಸ್ಕೃತ ಭಾಷೆಗೆ ಭಾರತದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಚಂದ್ರಪ್ಪ ಎಸ್ ಗುಂಡಪಲ್ಲಿ ಹೇಳಿದರು.
ಸಾಗರ ತಾ. ಹೆಗ್ಗೋಡಿನ ವಿ. ಸಂ. ವಿದ್ಯಾಸಂಸ್ಥೆಯ ರೂಪಶ್ರೀ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಸಂಸ್ಕೃತ ಉಪನ್ಯಾಸಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಸಂಸ್ಕೃತ ವಿಷಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಸಂಸ್ಕೃತ ಭಾಷೆಯನ್ನು ದೇವ ಎಂದು ಕರೆಯಲಾಗುತ್ತದೆ ಅನೇಕ ಪ್ರಾಚೀನ ಪುರಾಣ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿದೆ ಯುರೋಪಿಯನ್ ದೇಶಗಳಲ್ಲಿ ಪುರಾತನ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗೆ ಇರುವ ಸ್ಥಾನ ಭಾರತದಲ್ಲಿ ಸಂಸ್ಕೃತ ಭಾಷೆಗೆ ನೀಡಲಾಗಿದೆ ಪುರಾತನ ಗ್ರಂಥಗಳ ಬಗ್ಗೆ ತಿಳಿಯಲು ನಾವು ಅದರ ಅಧ್ಯಯನ ಮಾಡಬೇಕು
ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಅಭ್ಯಾಸ ಮಾಡಿದರೆ ಸಂಸ್ಕೃತ ವಿಷಯದಲ್ಲಿ ಶೇ 100 ಫಲಿತಾಂಶ ಪಡೆಯಬಹುದು ಎಂದರು
ಜಿಲ್ಲೆಯ ಉಪನ್ಯಾಸಕರು ಒಟ್ಟಾಗಿ ಕಾರ್ಯಾಗಾರ ಮಾಡುವುದರಿಂದ ಪರಸ್ಪರ ಸಂದೇಹ ಪರಿಹರಿಸಲು ಸಹಾಯ ಆಗಲಿದೆ ಎಂದು ಹೇಳಿದರು
ಜಿಲ್ಲಾ ಸಂಸ್ಕೃತ ಉಪನ್ಯಾಸಕರ ವೇದಿಕೆ ಅಧ್ಯಕ್ಷ ವಿದ್ವಾನ್ ದತ್ತಮೂರ್ತಿ ಭಟ್ ಮಾತನಾಡಿ ಯಾವುದೇ ಭಾಷೆ ಶ್ರೇಷ್ಠವೂ ಅಲ್ಲ ಕನಿಷ್ಠವೂ ಅಲ್ಲ ಆದರೆ ಸಂಸ್ಕೃತ ಭಾಷೆ ಎಲ್ಲಾ ಭಾಷೆಯ ಮೂಲ ಎಲ್ಲಾ ಭಾಷೆಯ ವ್ಯಾಕರಣದಲ್ಲಿ ಸಂಸ್ಕೃತ ಇದೆ ಇತ್ತೀಚೆಗೆ ಇದರ ಅಧ್ಯಯನ ಮಾಡುವರ ಸಂಖ್ಯೆ ಕಡಿಮೆ ಯಾಗಿದೆ ಹಿಂದೆ ಮೈನಾರಿಟಿ ಲಾಂಗ್ವೇಜ್ ಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿತ್ತು ಹತ್ತು ವಿದ್ಯಾರ್ಥಿಗಳು ಇದ್ದರೂ ಅಧ್ಯಯನಕ್ಕೆ ಅವಕಾಶ ನೀಡಲಾಗುತ್ತಿತ್ತು ಆದರೆ ಈಗ ಕನಿಷ್ಠ 40 ವಿದ್ಯಾರ್ಥಿಗಳು ಇರುಬೇಕು ಎಂಬ ನಿಯಮವಿದೆ ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕರೂ ಕಾಲಕಾಲಕ್ಕೆ ಅಪ್ಡೇಟ್ ಆಗಬೇಕು ಹೊಸ ಹೊಸ ವಿಷಯಗಳನ್ನು ತಿಳಿಯಲು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು ವಿಷಯ ವಿನಿಮಯ ದಿಂದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಹೇಳಿದರು
ಸಂಸ್ಥೆಯ ಅಧ್ಯಕ್ಷ ಕೇಶವ ಸಂಪೆಕೈ ಮಾತನಾಡಿ ಸಮಾಜದ ಬದಲಾವಣೆಗೆ ಶಿಕ್ಷಕರ ಪಾತ್ರ ಬಹಳ ಮುಖ್ಯ ಶಿಕ್ಷಕರು ಉತ್ತಮ ಪ್ರಜೆಗಳನ್ನು ತಯಾರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು
Rupashree Pre Graduate College ಸಂಸ್ಕೃತ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸಂಸ್ಕೃತ ಉಪನ್ಯಾಸಕರಿಗೆ ಸಂಸ್ಕೃತ ವಿಷಯ ಕುರಿತು ವಿವಿಧ ವಿಚಾರಗೋಷ್ಠಿ ನಡೆಸಲಾಯಿತು
ವಿ ಸಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೇಶವ ಸಂಪೆಕೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ರೂಪಶ್ರೀ ಕಾಲೇಜು ಪ್ರಾಂಶುಪಾಲ ಎಂ ಎಂ ತಿಮ್ಮಪ್ಪ, ಉಪನ್ಯಾಸಕಿ ಡಾ ಮೈತ್ರೇಯಿ ಆದಿತ್ಯ ಪ್ರಸಾದ್, ಜ್ಯೋತಿ,ಶುಭಾ,ವಿ ಜಿ ಶ್ರೀಧರ ಇನ್ನಿತರರು ಇದ್ದರು.
