Youth Hostel Association of India ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ( ವೈಎಚ್‌ಎಐ ) ತರುಣೋದಯ ಘಟಕದ ಅಧ್ಯಕ್ಷರಾಗಿ ಎನ್.ಗೋಪಿನಾಥ್ ಆಯ್ಕೆಯಾಗಿದ್ದಾರೆ.
ತರುಣೋದಯ ಘಟಕದ 2026 ರಿಂದ 2028ನೇ ಅವಧಿಗೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಎನ್.ಗೋಪಿನಾಥ್, ಕಾರ್ಯಾಧ್ಯಕ್ಷರಾಗಿ ಎಸ್.ಎಸ್.ವಾಗೇಶ್, ಉಪಾಧ್ಯಕ್ಷರಾಗಿ ಡಾ. ಅರುಣ್.ಎಮ್.ಎಸ್ ಮತ್ತು ಡಾ. ಪ್ರಕೃತಿ ಮಂಚಾಲೆ, ಸಂಘಟನ ಕಾರ್ಯದರ್ಶಿಯಾಗಿ ಜಿ.ವಿಜಯಕುಮಾರ್, ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್.ಜಿ, ಖಚಾಂಚಿಯಾಗಿ ಎಮ್.ಪಿ.ನಾಗರಾಜ್, ನಿರ್ದೇಶಕರಾಗಿ ಕೆ.ಹೆಚ್.ಸುಮಾರಾಣಿ, ರಾಜ್.ಎಮ್.ಎಸ್, ಮಮತಾ.ಕೆ, ಭಾರತಿ.ಕೆ, ಮಲ್ಲಿಕಾರ್ಜುನ್ ಕಾನೂರು, ನಾಗರಾಜ್ ಮರಿದಾಸ್, ಲಕ್ಷ್ಮೀರಾಜೇಶ್, ಎನ್.ಎಸ್.ರವೀಂದ್ರ, ಕೆ.ಗಣಪತಿ, ಕೃಷ್ಣಮೂರ್ತಿ.ಹೆಚ್.ಜಿ, ಮಂಜಪ್ಪ.ಆರ್. ಆಯ್ಕೆಯಾಗಿದ್ದಾರೆ.
ಕಾರ್ಯಾಧ್ಯಕ್ಷ ಎಸ್.ಎಸ್.ವಾಗೇಶ್ ಮಾತನಾಡಿ, ನಗರದ ಸಾವಿರಾರು ಜನರಿಗೆ ನಮ್ಮ ಘಟಕದ ವತಿಯಿಂದ ಹಿಮಾಲಯ ಚಾರಣ ಮಾಡಿಸಲಾಗಿದೆ. ಅದ್ಭುತ ಅನುಭವ ಪಡೆಯಲು ಹಾಗೂ ಆರೋಗ್ಯದಲ್ಲಿ ಸುಧಾರಣೆಯಾಗಲು ಹಿಮಾಲಯ ಚಾರಣ ಪ್ರತಿಯೊಬ್ಬರು ಪಡೆಯಬೇಕು. ಸ್ಥಳಿಯ ಚಾರಣಗಳನ್ನು ಆಗಿಂದಾಗೆ ಆಯೋಜಿಸುತ್ತಿದ್ದು, ನಮ್ಮ ಸದಸ್ಯರು ಅತ್ಯತ್ತಮವಾಗಿ ಸ್ವಂದಿಸುತ್ತಿದ್ದಾರೆ ಎಂದರು.
ವೈಎಚ್‌ಎಐನ ಅ.ನಾ.ವಿಜಯೇಂದ್ರ ರಾವ್ ಮಾತನಾಡಿ, ತರುಣೋದಯ ಘಟಕ ಚಾರಣದೊಂದಿಗೆ ಸಾಮಾಜಿಕ ಕಳಕಳಿಯ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ, ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ತೆಗೆದುಕೊಳ್ಳಬಹುದ ಮುನ್ನೆಚರಿಕೆ ಬಗ್ಗೆ ಮಾರ್ಗದರ್ಶನವನ್ನು ತಜ್ಞ ವೈದ್ಯರಿಂದ ಸಲಹೆ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿ.ವಿಜಯಕುಮಾರ್ ಮಾತನಾಡಿ, ಅಜೀವ ಸದಸ್ಯತ್ವ ಹೊಂದುವಲ್ಲಿ ನಮ್ಮ ಘಟಕ ದ್ವಿತೀಯ ಸ್ಥಾನದಲ್ಲಿದ್ದು, ಎಲ್ಲಾ ಸದಸ್ಯರ ಸಹಕಾರದಿಂದ ಈ ಸಾಲಿನಲ್ಲಿ ಪ್ರಥಮ ಸ್ಥಾನಕ್ಕೆ ಬರಲು ಸಹಕಾರ ನೀಡಬೇಕು ಎಂದರು.
Youth Hostel Association of India ಎನ್.ಗೋಪಿನಾಥ್ ಮಾತನಾಡಿ, ನಗರದಲ್ಲಿ ವಿಶೇಷ ಮಲೆನಾಡು ಪದಾರ್ಥಗಳ ಆಹಾರ ಮೇಳವನ್ನು ನವೆಂಬರ್‌ನಲ್ಲಿ ಜಿಲ್ಲಾಡಳಿತದ ಸಹಕಾರದಲ್ಲಿ ಏರ್ಪಡಿಸಲು ಆಯೋಜಿಸಲು ಪ್ರಯತ್ನ ನಡೆಸುತ್ತಿದ್ದು, ಎಲ್ಲರ ಸಹಕಾರ ಮುಖ್ಯ. ಆಸಕ್ತರು ನಮ್ಮಲ್ಲಿ ಹೆಸರು ನೊಂದಾಯಿಸಿದಲ್ಲಿ ಆ ಕಾರ್ಯಕ್ರಮದ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು, ಯಶಸ್ವಿಗೊಳಲು ಸಹಕಾರಿಯಾಗುತ್ತದೆ ಎಂದರು.
ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ನೂತನ ತಂಡಕ್ಕೆ ಶುಭಕೋರಿದರು. ಸುಮಾರಾಣಿ, ಮಮತಾ, ಭಾರತಿ ಗುರುಪಾದಪ್ಪ, ಸುರೇಶ್ ಕುಮಾರ್ ಮತ್ತಿತರರು ಇದ್ದರು.
