Youth Hostel of India ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ಹಿರಿಯ ಸದಸ್ಯರ ಶ್ರಮ ಅಪಾರವಾಗಿರುತ್ತದೆ. ಸಂಸ್ಥೆಗಳ ಪ್ರಗತಿಗೆ ಶ್ರಮಿಸಿದ ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಯೂತ್ ಹಾಸ್ಟೆಲ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಸತೀಶ್ ಹೇಳಿದರು.
ಮಥುರಾ ಪ್ಯಾರಾಡೈಸ್‌ನಲ್ಲಿ ಯೂತ್ ಹಾಸ್ಟೆಲ್ ಆಫ್ ಇಂಡಿಯಾದ ತರುಣೋದಯ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, 35 ವರ್ಷದ ಹಿಂದೆ ಪ್ರಾರಂಭವಾದ ಈ ಸಂಸ್ಥೆಯ ಹಿರಿಯ ಸದಸ್ಯರನ್ನು ಗೌರವಿಸುತ್ತಿರುವುದು ಉತ್ತಮ ಕಾರ್ಯ. ಅವರ ಪರಿಶ್ರಮದಿಂದ ಈ ಘಟಕ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ಮುಂದಿನ ಪೀಳಿಗೆಗೆ, ಹಿಂದಿನ ಸಂಘಟಕರ ವಿಷಯವನ್ನು ತಿಳಿಸುವುದು ನಾವು ತಪ್ಪದೇ ಮಾಡಬೇಕಾದ ವಿಷಯ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ವಾಗೇಶ್ ಮಾತನಾಡಿ, ಕಳೆದ ಕೆಲ ವರ್ಷದಿಂದ ಹಿರಿಯ ಸದಸ್ಯರನ್ನು ಸನ್ಮಾನಿಸಿ, ಅವರಿಗೆ ಗೌರವ ಸಮರ್ಪಿಸುತ್ತಿದ್ದೇವೆ. ಅದೇ ರೀತಿ ಇಂದು ಕೆಲವು ಹಿರಿಯ ಸದಸ್ಯರನ್ನು ಆಹ್ವಾನಿಸಿದ್ದೇವು. ಹಿರಿಯ ಸದಸ್ಯರಿಗೆ ಸನ್ಮಾನಿಸಿ ಸಂಘಟನೆ ಗೌರವವನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
Youth Hostel of India ಯೂತ್ ಹಾಸ್ಟೆಲ್ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ಅ.ನಾ.ವಿಜಯೇಂದ್ರರಾವ್ ಅವರು ಯೂತ್ ಹಾಸ್ಟೆಲ್ ನಡೆದು ಬಂದ ದಾರಿ, ಚಾರಣದಿಂದ ಆಗುವ ಅನುಭವಗಳು ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ದೇಶ ವಿದೇಶಗಳ ಚಾರಣಿಗರ ಸಂಪರ್ಕ ಸಿಗುತ್ತದೆ. ತರುಣೋದಯ ಘಟಕ ಚಾರಣದ ಜತೆಗೆ ಪ್ರತಿ ವರ್ಷ 200ಕ್ಕೂ ಹೆಚ್ಚು ಜನರನ್ನು ಹಿಮಾಲಯ ಚಾರಣಕ್ಕೆ ಕಳಿಸುತ್ತಿದೆ. ಸದಸ್ಯತ್ವದಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂತ್ ಹಾಸ್ಟೆಲ್ ತರುಣೋದಯ ಘಟಕದ ಗೌರವಾಧ್ಯಕ ಎನ್.ಗೋಪಿನಾಥ್ ಮಾತನಾಡಿ, ಮಲೆನಾಡು ಹಬ್ಬ ಎಂಬ ಹೊಸ ಕಾರ್ಯಕ್ರಮವನ್ನು ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಎರಡನೂರು ಮಳಿಗೆಗಳನ್ನು ಹಾಕಿ ಆಯೋಜಿಸಲಾಗುವುದು. ಎಲ್ಲರ ಸಹಕಾರ ಅವಶ್ಯಕತೆ ಇದ್ದು, ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ, ಸುಮಾರಾಣಿ, ಮಮತಾ,
ಸುರೇಶ್ ಇತರರು ಹಾಜರಿದ್ದರು.
