JCI Shimoga ಜೆಸಿಐ ಶಿವಮೊಗ್ಗ ಶಕ್ತಿ ಮತ್ತು ಜೆಸಿಐ ಶಿವಮೊಗ್ಗ ಬೆಳ್ಳಿ ಸಂಸ್ಥೆಗಳ ವತಿಯಿಂದ ನಗರದ ಮಥುರಾ ಪ್ಯಾರಾಡೈಸ್‌ನಲ್ಲಿ ಜುಲೈ 19 ಮತ್ತು 20ರಂದು ಪರಿಣಾಮಕಾರಿ ಸಾರ್ವಜನಿಕ ಸಂವಹನ ಕೌಶಲ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜೆಸಿಐ ಸಂಸ್ಥೆಯ ಡಾ. ಎಸ್.ವಿ.ಶಾಸ್ತ್ರಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು. ಜೆಸಿಐ ಸಂಸ್ಥೆಯ ಪ್ರವೀಣ್ ದೇಶಪಾಂಡೆ, ನಿವೇದಿತಾ, ವಿನೀತ್ ತರಬೇತುದಾರರಾಗಿ ಪಾಲ್ಗೊಳ್ಳುವರು. ಜೆಸಿಐ ಶಿವಮೊಗ್ಗ ಶಕ್ತಿ ಸಂಸ್ಥೆಯ ಅಧ್ಯಕ್ಷೆ ಸ್ವಾತಿ ಎಸ್.ಎಂ., ಜೆಸಿಐ ಶಿವಮೊಗ್ಗ ಬೆಳ್ಳಿ ಸಂಸ್ಥೆಯ ಅಧ್ಯಕ್ಷೆ ಶಿಲ್ಪಾ ಎನ್. ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು. ಎರಡು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಮೊಬೈಲ್ ಸಂಖ್ಯೆ 8050114993 ಸಂಪರ್ಕಿಸಬಹುದಾಗಿದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ ಗಣೇಶ್ ತಿಳಿಸಿದ್ದಾರೆ.
JCI Shimoga ಜುಲೈ 19 & 20 ರಂದು ಸಾರ್ವಜನಿಕ ಸಂವಹನ ಕೌಶಲ ತರಬೇತಿ ಕಾರ್ಯಾಗಾರ
Date:
