Gubbi Vani Trust ಮಹಿಳೆಯರ ಪ್ರತಿಭೆ ಅನಾವರಣಗೊಳ್ಳಲು ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಲು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ಇನ್ನರ್ ವೀಲ್ ಸಂಸ್ಥೆ ಅತ್ಯಂತ ಸಹಕಾರಿಯಾಗಿದೆ ಎಂದು ಗುಬ್ಬಿ ವಾಣಿ ಟ್ರಸ್ಟ್ ಸಂಸ್ಥಾಪಕರಾದ ಮಾಳವಿಕಾ ಗುಬ್ಬಿವಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ರೋಟರಿ ರಕ್ತ ನಿಧಿಯ ರೋಟರಿ ಬ್ಲಡ್ ಬ್ಯಾಂಕ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ವಿಪುಲವಾದ ಅವಕಾಶಗಳಿವೆ ಇಂತಹ ಅಂತರಾಷ್ಟ್ರೀಯ ಸಂಘ ಸಂಸ್ಥೆಗಳ ಮುಖಾಂತರ ತೊಡಗಿಸಿ ಕೊಂಡಾಗ ಪರಸ್ಪರ. ಸಾಧನೆ. ವ್ಯಕ್ತಿತ್ವ ಪರಿಚಯವಾಗುವುದರ ಜೊತೆಗೆ ನಾವು ಸಹ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಇನ್ನರ್ ವೀಲ್ ಸಂಸ್ಥೆ ಈಗಾಗಲೇ ಪ್ರಪಂಚಾದ್ಯಂತ ವಿಶೇಷ ಸೇವಾ ಕಾರ್ಯಗಳ ಮುಖಾಂತರ ತನ್ನದೇ ಆದ ಗುರುತರವಾದ ಹೆಜ್ಜೆಯನ್ನು ಮೂಡಿಸಿದೆ ಮಹಿಳೆಯರಿಗಾಗಿ ಸ್ಥಾಪಿತವಾದ ಅಂತರಾಷ್ಟ್ರೀಯ ಸಂಸ್ಥೆ ಮುಖಾಂತರ ಸಮಾಜಮುಖಿ ಸೇವೆಗಳು ಹಾಗೂ ಪ್ರೀತಿ ಸ್ನೇಹ ಒಡನಾಟ ಇವುಗಳ ಮುಖಾಂತರ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಇಂತಹ ಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸದಸ್ಯತ್ವ ತೆಗೆದುಕೊಳ್ಳುವುದರ ಮುಖಾಂತರ ಸಂಸ್ಥೆಯನ್ನು ಬಲಪಡಿಸಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ 2024 -25ರ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರಿಂದ
2025 -26ರ ನೂತನ ಅಧ್ಯಕ್ಷರಾಗಿ ವೀಣಾ ಸುರೇಶ್ ಅಧಿಕಾರ ಹಸ್ತಾಂತರಿಸಿಕೊಂಡರು ಕಾರ್ಯದರ್ಶಿ ಲತಾ ಸೋಮಣ್ಣನವರಿಂದ ನೂತನ ಕಾರ್ಯದರ್ಶಿ ಶಿಲ್ಪ ಗೋಪಿನಾಥ ಅವರು ಅಧಿಕಾರವಹಿಸಿಕೊಂಡರು .
ಇದೇ ಸಂದರ್ಭದಲ್ಲಿ ಗ್ರಾಮೀಣ ಶಾಲೆಗೆ ಒಂದು ಕಂಪ್ಯೂಟರ್
ಹಾಗೂ ಇನ್ನರ್ ವೀಲ್ ಮಾಜಿ ಅಧ್ಯಕ್ಷ ರಾದ ರಾಜೇಶ್ವರಿ ಪ್ರತಾಪ್ ಅವರು ಸರ್ಕಾರಿ ಶಾಲೆಗೆ ತಟ್ಟೆ ಲೋಟ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು. ನೂತನವಾಗಿ ಅಧಿಕಾರ ವಹಿಸಿಕೊಂಡ ವೀಣಾ ಸುರೇಶ್ ಅವರು ಮಾತನಾಡುತ್ತಾ ಈಗಾಗಲೇ ಈ ಪರ ಗ್ರಹಣದ ನಿಮಿತ್ತ ರೋಟರಿ ಶಾಲೆಗೆ ಕುಡಿಯುವ ನೀರಿನ ಯಂತ್ರ ಹಾಗೂ ವೃದ್ಧಾಶ್ರಮಗಳಿಗೆ ಆರೋಗ್ಯ ತಪಾಸಣಾ ಯಂತ್ರಗಳನ್ನು ನೀಡುವುದರ ಮುಖಾಂತರ ನಮ್ಮ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದ್ದೇವೆ ಹಾಗೂ ಮತ್ತೊಂದು ಹೆಮ್ಮೆಯ ಸಂಗತಿ ಎಂದರೆ ನಮ್ಮ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶೋಭಾ ಕಡಿದಾಳ ರವರ ಪುತ್ರಿ ಶಬರಿ ಕಡಿದಾಳವರು ಇನ್ನರ್ ವೀಲ್ ಜಿಲ್ಲಾ ಚೇರ್ಮನ್ ಆಗಿ ಅಧಿಕಾರವಹಿಸಿಕೊಳ್ಳುತ್ತಿದ್ದಾರೆ ಎಂದು ನುಡಿದರು ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
Gubbi Vani Trust ಸಮಾರಂಭದಲ್ಲಿ ಮಮತಾ ಸುಧೀಂದ್ರ
ಶ್ವೇತಾ ಅಶಿತ್. ಚೇತನ ಕಿರಣ್. ವಿಜಯಶ್ರೀ ಷಣ್ಮುಖ. ಉಮಾ ವೆಂಕಟೇಶ್. ರೇಖಾ ಅಶೋಕ್ ಕುಮಾರ್. ವಿಜಯ ಜವಳಿ. ವಾಸಂತಿ ಷಣ್ಮುಖಪ್ಪ. ವಿನೋದ ರಮೇಶ್. ಸವಿತಾ. ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್. ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
