Central Department of Small Industries and Labour ಬೆಂಗಳೂರಿನ ಮಲ್ಲೇಶ್ವರಂನಲ್ಲಿಂದು ಜರುಗಿದ ʼಮಹಿಳೆಯರಿಗೆ ಮತ್ತು ಮಂಗಳಮುಖಿಯರಿಗೆ ಆಟೋ ಚಾಲನಾ ಕೌಶಲ್ಯ ತರಬೇತಿ 2025ʼ ರ ಕಾರ್ಯಕ್ರಮದಲ್ಲಿ ಕೇಂದ್ರ ಸಣ್ಣ ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಪಾಲ್ಗೊಂಡು, ಆಟೋ ರಿಕ್ಷಾ ಓಡಿಸುವ ತರಬೇತಿಗೆ ಚಾಲನೆ ನೀಡಿ, ಮಹಿಳೆಯರಿಗೆ ಚಾಲನಾ ಪರವಾನಗಿ ವಿತರಣೆ ಮಾಡಿದರು.
ತಳಮಟ್ಟದಿಂದ ಮಹಿಳೆಯರನ್ನು ಸಬಲೀಕರಣಗೊಳಿಸುವ ಹಿತದೃಷ್ಠಿಯಿಂದ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಆಟೋ ಚಾಲನಾ ತರಬೇತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮಹಿಳೆಯರು ವಿಶೇಷವಾಗಿ ಮಂಗಳಮುಖಿಯರು ಈ ರೀತಿಯ ತರಬೇತಿಗಳ ಮೂಲಕ ತಮ್ಮ ಜೀವನವನ್ನು ಮತ್ತಷ್ಟು ಸದೃಢವಾಗಿ ಕಟ್ಟಿಕೊಳ್ಳಲಿ ಹಾಗೂ ಸಮಾಜಕ್ಕೆ ಮಾದರಿಯಾಗಲಿ ಎಂದು ಸಚಿವೆ
ಮಂಗಳಮುಖಿಯರಿಗೆ ಹಾರೈಸಿದರು.
