ಪ್ರಗತಿ ಶಾಲೆಯ ರೋಟರಿ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
Rotary Interact Club of Pragati School ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನಿರಂಜನ್ ಹೊಸಬಾಳೆ ಇವರು ವಹಿಸಿಕೊಂಡಿದ್ದು, ರೋಟರಿ ನೂತನ ಅಧ್ಯಕ್ಷರಾದ ಗೌತಮ್ ಕೆ. ಎಸ್ ವಕೀಲರು ಹಾಗೂ ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಗಿರೀಶ್ ಜನ್ನೆ ಇವರು ಪಾಲ್ಗೊಂಡಿದ್ದರು. ಪ್ರಗತಿ ಶಾಲೆಯ ರೆಕ್ಟರ್ ಡಾ ಟಿ ಎಸ್. ರಾಘವೇಂದ್ರ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಇಂಟರ್ಯಾಕ್ಟ್ ಕ್ಲಬ್ ನ ಪದಾಧಿಕಾರಿಗಳು ವಿದ್ಯಾರ್ಥಿಗಳು , ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
