ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ, ಬೆಂಗಳೂರಿನಲ್ಲಿ ದಿನಾಂಕ ೧೧ ರಿಂದ ೧೩ ಜುಲೈ, ೨೦೨೫ ರವರೆಗೆ “ಸಸ್ಯ ಸಂತೆ” ಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೊದಲನೆ ದಿನ ೧೧ ಜುಲೈ ೨೦೨೫ ರಂದು ಶ್ರೀ. ಎಸ್. ಆರ್. ವಿಶ್ವನಾಥ್ ಮಾನ್ಯ ಶಾಸಕರು, ಯಲಹಂಕ ವಿಧಾನಸಭಾ ಕ್ಷೇತ್ರ ಇವರು ಸಸ್ಯ ಸಂತೆಯ ಪ್ರದರ್ಶನ ಮಳಿಗಗಳನ್ನು ಉದ್ಘಾಟಿಸುವುದರೊಂದಿಗೆ ತೋಟಗಾರಿಕೆಗೆ ಸಂಬಂಧಿತ ವೈವಿಧ್ಯಮಯ ಮಳಿಗೆಗಳನ್ನು ವೀಕ್ಷಿಸಿದರು. ನಂತರ ತಮ್ಮ ಉದ್ಘಾಟನಾ ಭಾಷಣದಲ್ಲಿ ನಗರಿಕರಣದ ಭರದಲ್ಲಿ ಜನತೆ ಕೃಷಿಯನ್ನು ಮರೆಯುತ್ತಿದ್ದು, ಭವಿಷ್ಯದಲ್ಲಿ ಇದೊಂದು ಅಪಾಯಕಾರಿ ಸಂಗತಿ ಆಗಬಹುದೆಂದು ತಿಳಿಸಿದರು. ಮುಂದುವರೆದು ಸ್ವತಃ ಅವರೆ ಕೃಷಿ, ತೋಟಗಾರಿಕೆ, ಹೈನುಗಾರಿಕೆಯನ್ನು ಮಾಡುತ್ತಿದ್ದು ಇದರಿಂದ ಉತ್ತಮ ಆಹಾರವನ್ನು ಬೆಳೆದು ಸೇವಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿರುವುದಾಗಿ ತಿಳಿಸಿದರು. ಸಾಂಪ್ರದಾಯಿಕ ಪದ್ದತಿಗಳ ಜೊತೆಗೆ ವಿಜ್ಞಾನಿಗಳು ಸಂಶೋದಿಸಿದ ನವೀನ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡರೆ ದೇಶದ ೧೫೦ ಕೋಟಿ ಜನಸಂಖ್ಯೆಗೆ ಪೌಷ್ಠಿಕ ಆಹಾರ ಒದಗಿಸಬಹುದು. ನಗರವಾಸಿಗಳು ತಮ್ಮ ಮನೆಯ ಮೇಲ್ಚಾವಣಿಯಲ್ಲಿ ಹಾಗೂ ಮುಂಭಾಗದಲ್ಲಿ ತರಕಾರಿ ಹಾಗೂ ಗಿಡಗಳನ್ನು ಬೆಳೆದು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಿರಿ ಎಂದು ಕರೆನೀಡಿದರು ಹಾಗೂ ಮೊಬೈಲ್ ಬಿಟ್ಟು ಪ್ರತಿಯೊಬ್ಬರು ೨ ಗಿಡ ನೆಟ್ಟರೆ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. University of Horticultural Sciences ಕನ್ನಡದ ಬಿಗ್ ಬಾಸ್ ಖ್ಯಾತಿಯ ಜನಪ್ರಿಯ ಯುವನಟ, ನಿರ್ಮಾಪಕ ಹಾಗೂ ಕೃಷಿ ಉದ್ದಿಮೆದಾರರು ಆದ ಶ್ರೀ. ಶಶಿ ಕುಮಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಎಲ್ಲಾ ಕೃಷಿ ಪದವಿದರರು ಕೃಷಿಯಲ್ಲಿ ತೊಡಗಿಕೊಂಡು ತಮ್ಮದೇ ರೀತಿಯಲ್ಲಿ ಕೃಷಿ ಅಬಿವೃದ್ದಿಗೆ ಕೊಡಿಗೆ ನೀಡಿ ಎಂದು ತಿಳಿಸಿದರು. ಜೊತೆಗೆ ಕೃಷಿಯನ್ನು ಒಂದು ಉಧ್ಯಮವಾಗಿ ನೋಡುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. ಡಾ. ಎಸ್. ಬಿ. ದಂಡಿನ, ಸಂಸ್ಥಾಪಕ ಹಾಗೂ ವಿಶ್ರಾಂತ ಕುಲಪತಿಗಳು, ತೋ. ವಿ. ವಿ., ಬಾಗಲಕೋಟೆ ಇವರು ಮಣ್ಣಿನ ಪಲವತ್ತತೆ, ನೀರು, ಹಾಗೂ ರೈತರ ಜ್ಞಾನ ಕೃಷಿಗೆ ಬಹುಮುಖ್ಯ ಮತ್ತು ಯುವಕರು ಕೃಷಿಗೆ ಬಂದು ಕೃಷಿಯಲ್ಲಿ ಬದಲಾವಣೆ ತರಲು ತಿಳಿಸಿದರು. ಡಾ. ಜಿ. ಎಸ್. ಕೆ. ಸ್ವಾಮಿ, ಡೀನ್, ತೋಟಗಾರಿಕೆ ಮಹಾವಿದ್ಯಾಲಯ ಬೆಂಗಳೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ರಾಜಾಸಾಬ್ ಎ. ಹೆಚ್., ಅಧ್ಯಕ್ಷರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳುರು ಹಾಗೂ ಡಾ. ಜಿ. ಕೆ. ಸೀತಾರಾಮು, ನಿರ್ದೇಶಕರು, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ, ಬೆಂಗಳೂರು ರವರು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಎಸ್.ಎಲ್. ಜಗದೀಶ್, ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು ಅತಿಥಿಗಳನ್ನ ಸ್ವಾಗತಿಸಿದರು .
University of Horticultural Sciences ಕೃಷಿ ಪದವಿಧರರು ಕೃಷಿಮಾಡಿ ಅಭಿವೃದ್ಧಿಗೆ ಕೊಡುಗೆ ನೀಡಿ-ನಟ ಶಶಿಕುಮಾರ್
Date:
