MESCOM ಮೆಗ್ಗಾನ್ ಆಸ್ಪತ್ರೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ. ದೊಡ್ಡಪೇಟೆಪೊಲೀಸ್ ಠಾಣೆ ಪ್ರಕಟಣೆ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಫಾರ್ಮಸಿ ಹತ್ತಿರ ಜು.09 ರಂದು ಸುಮಾರು 35 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿ ಪ್ರಜ್ಞೆ ಇಲ್ಲದೇ ಮಲಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ.
ಮೃತ ವ್ಯಕ್ತಿಯು 5.6 ಅಡಿ ಉದ್ದ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು, ಮುಖದ ಮೇಲೆ ಕಪ್ಪು ಬಣ್ಣದ ಕುರುಚಲು ಗಡ್ಡ, ಮೀಸೆ ಇರುತ್ತದೆ. MESCOM ಮೆಗ್ಗಾನ್ ಆಸ್ಪತ್ರೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ. ದೊಡ್ಡಪೇಟೆಪೊಲೀಸ್ ಠಾಣೆ ಪ್ರಕಟಣೆ ಮೃತನ ಮೈ ಮೇಲೆ ಕಪ್ಪು ಬಣ್ಣದ ಜಾಕೇಟ್, ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಇರುತ್ತದೆ. ಬಲಗೈನ ಒಳಭಾಗದಲ್ಲಿ ಲಕ್ಷಿ ಹಾಗೂ ಬಿಲ್ಲು ಬಾಣದ ಚಿತ್ರದ ಹಚ್ಚೆ ಗುರುತು ಇರುತ್ತದೆ. ಬಲಗೈ ಮಣಿಕಟ್ಟಿನ ಹೆಬ್ಬೆರಳ ಹತ್ತಿರ ಹಾರ್ಟ್ ಚಿಹ್ನೆ ಅದರ ಮಧ್ಯ ‘ಎನ್’ ಅಕ್ಷರದ ಹಚ್ಚೆ ಹಾಗೂ ಮೃತನ ಎದೆಯ ಎಡ ಭಾಗದಲ್ಲಿ ಹಾರ್ಟ್ ಹಾಗೂ ಬಾಣದ ಚಿತ್ರವಿರುವ ಹಚ್ಚೆ ಗುರುತು ಇರುತ್ತದೆ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ಸಂ.08182-261414, ಮೊ.ಸಂ.9916882544, ದೊಡ್ಡಪೇಟೆ ಪೊಲೀಸ್ ಠಾಣೆ ಇವರನ್ನು ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
MESCOM ಮೆಗ್ಗಾನ್ ಆಸ್ಪತ್ರೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ
Date:
