Sri Kannika Parameshwari Temple ಶಿವಮೊಗ್ಗ ನಗರದ ಗಾಂಧಿಬಜಾರ್‌ನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣದ ಪ್ರಯುಕ್ತ ಆಷಾಢ ಶುಕ್ರವಾರದಂದು 1008 ಸೀರೆಗಳಿಂದ ಶ್ರೀ ಕನ್ನಿಕಾ ಪರಮೇಶ್ವರಿಗೆ ಲಲಿತಾ ಸಹಸ್ರನಾಮ ಪೂಜೆ ನಡೆಸಲಾಯಿತು.
ಶಿವಮೊಗ್ಗ ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್ ಮಾತನಾಡಿ, ಆಷಾಡ ಮಾಸದಲ್ಲಿ ಲಲಿತಾ ದೇವಿಯ ಅರ್ಚನೆ ಮಾಡುವುದರಿಂದ ಸಕಲ ಸಿದ್ಧಿಗಳು ಲಭಿಸುತ್ತವೆ ಎಂದು ನಮ್ಮ ಸಂಪ್ರದಾಯ ಹಾಗೂ ಹಿರಿಯರು ಹೇಳಿದ್ದಾರೆ. ಶ್ರೀ ಲಲಿತಾ ಸಹಸ್ರನಾಮ ಎನ್ನುವುದು ಬ್ರಹ್ಮ ಪುರಾಣದ ಒಂದು ಭಾಗ. ಲಲಿತಾ ಆನಂದ ದೇವತೆ, ಈಶ್ವರನ ಪತ್ನಿ ಪಾರ್ವತಿಯ ರೂಪ. ಶ್ರೀ ಲಲಿತಾ ಸಹಸ್ರನಾಮವು ಅತ್ಯಂತ ಪವಿತ್ರವಾದ ಮಂತ್ರವಾಗಿದೆ ಎಂದು ಹೇಳಿದರು.
ಶಿವಮೊಗ್ಗ ವಾಸವಿ ಮಹಿಳಾ ಸಂಘದ ಕಾರ್ಯದರ್ಶಿ ನಮ್ರತಾ ಪ್ರಶಾಂತ್ ಮಾತನಾಡಿ, ಪೂಜೆಯಲ್ಲಿ ಒಟ್ಟು 1008 ಸೀರೆಗಳನ್ನು ದೇವಿಗೆ ಅರ್ಪಿಸಲಾಯಿತು. ಇದರಲ್ಲಿ 500 ಸೀರೆಗಳನ್ನು ದಾನದ ಮೂಲಕ ಅಗತ್ಯ ಇರುವವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಭಗವಾನ್ ಹಯಗ್ರಿವ ಹಾಗೂ ಅಗಸ್ತ್ಯ ಮುನಿಗಳ ಚರ್ಚೆಯಿಂದ ಹೊರಹೊಮ್ಮಿದ ಮಂತ್ರವೇ ಶ್ರೀ ಲಲಿತಾ ಸಹಸ್ರನಾಮ. ಇದು ಅತ್ಯಂತ ಪವಿತ್ರವಾದ ಹಾಗೂ ಶಕ್ತಿಯುತವಾದ ಮಂತ್ರ. ಇದನ್ನು ಪಠಿಸುವುದರಿಂದ ಇಷ್ಟಾರ್ಥಗಳು ಹಾಗು ನಮ್ಮ ಮೇಲೆ ದೇವಿ ರಕ್ಷಣೆ ಸದಾ ಇರುತ್ತದೆ ಎಂದರು.
ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಹಾಗೂ ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಭೂಪಾಲಂ ಶಶಿಧರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶುಭಕೋರಿದರು. ಶ್ರೀ ಕನ್ನಿಕಾ ಸಹಸ್ರನಾಮ ಹಾಗೂ ಶ್ರೀ ಲಲಿತಾ ಸಹಸ್ರನಾಮ ಪೂಜೆಯನ್ನು ಮಾಡಲಾಯಿತು. 108 ಮಹಿಳೆಯರು ಪೂಜೆಯಲ್ಲಿ ಭಾಗವಹಿಸಿದ್ದರು. ಹತ್ತು ತರಹದ ಪೂಜಾ ದ್ರವ್ಯಗಳು ಹಾಗೂ ಒಂದು ಸೀರೆಯಿಂದ ಪ್ರತಿಯೊಬ್ಬರು ಪೂಜೆ ನೆರವೇರಿಸಿದರು.
ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಅಶ್ವತ್ ನಾರಾಯಣ ಶೆಟ್ಟಿ, ಆರ್ಯವೈಶ್ಯ ಸಮಾಜದ ಹಿರಿಯ ಶೇಷಾಚಲ, ಸಂಘದ ನಿಕಟಪೂರ್ವ ಅಧ್ಯಕ್ಷೆ ರಾಧಿಕಾ ಮಾಲತೇಶ್, ಉಪಾಧ್ಯಕ್ಷೆ ಕವಿತಾ ಸಂತೋಷ್, ಖಜಾಂಚಿ ವಿಜಯ ದತ್ತ ಕುಮಾರ್, ಜಂಟಿ ಕಾರ್ಯದರ್ಶಿ ಅನಿತಾ ರಘು, ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಆರ್ಯವೈಶ್ಯ ಸಮಾಜದ ಮುಖಂಡರು ಭಾಗವಹಿಸಿದ್ದರು.
Sri Kannika Parameshwari Temple ಶ್ರೀಕನ್ನಿಕಾ ಪರಮೇಶ್ವರಿಗೆ 1008 ಸೀರೆಗಳಿಂದ ಅಲಂಕಾರ ಪೂಜೆ
Date:
