ಶಿವಮೊಗ್ಗ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಅಡಿಕೆ, ಶುಂಠಿ, ಅನಾನಸ್ ಮತ್ತಿತರ ಬೆಳೆಗಳು ಹಾಳಾಗಿದ್ದು ಸರ್ಕಾರದಿಂದ ಲಭ್ಯವಿರುವ ಬೆಳೆ ವಿಮೆ ಹಾಗೂ ಮತ್ತಿತರ ಪರಿಹಾರ ಕಾರ್ಯಗಳು ರೈತರಿಗೆ ಸಕಾಲದಲ್ಲಿ ಸಿಗದ ಕಾರಣ ಸಾಕಷ್ಟು ತೊಂದರೆಗೊಳಗಾಗಿದ್ದು, ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ರೈತರಿಗೆ ಪರಿಹಾರ ಒದಗಿಸಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಚ್. ಎನ್. ನಾಗರಾಜ್ ಅಗ್ರಹಿಸಿದರು.
ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದಾಗಿ ರೈತರು ತಮ್ಮ ಬೆಳೆಗಳನ್ನು ಕಳೆದು ಕೊಂಡು ಅತಿಯಾದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಸಂದರ್ಭ ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ರೈತರ ಕಷ್ಟಗಳಿಗೆ ಸ್ಪಂದಿಸಬೇಕಲ್ಲದೆ ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನೆ ಮತ್ತಿತರ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಹಾಗೂ ಗ್ರಾ.ಪಂ. ಮಟ್ಟದಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ರೈತರಿಗೆ ಉತ್ತಮ ಬೆಳೆ ಪಡೆಯಲು ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ರೈತರು ಬೆಳೆದ ಮಾವು ಮತ್ತು ಅನಾನಸ್ ಬೆಳೆಗಳಿಗೆ ಉತ್ತಮ ಬೆಲೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ ಆದ್ದರಿಂದ ರೈತರು ಉಪ ಉತ್ಪನ್ನ ಗಳನ್ನು ತಯಾರಿಸಲು ಅನುಕೂಲ ವಾಗುವಂತೆ ಜಿಲ್ಲೆಗೆ ಜ್ಯೂಸ್ ಫ್ಯಾಕ್ಟರಿಗಳ ಅಗತ್ಯತೆ ಇರುವುದರಿಂದ ಇದನ್ನು ಸರ್ಕಾರದ ಗಮನಕ್ಕೆ ಅಧಿಕಾರಿಗಳು ತರಬೇಕೆಂದು ರಾಜ್ಯ ಪ್ರತಿನಿಧಿ ನಗರದ ಮಹದೇವಪ್ಪ ಕರೆ ನೀಡಿದರು.
ಕೃಷಿ ತೋಟಗಾರಿಕೆ ಹಾಗೂ ಮತ್ತಿತರ ರೈತರಿಗೆ ಸಂಬಂಧಪಟ್ಟ ಇಲಾಖೆಗಳು ರೈತರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಹಾಗೂ ತಾಲ್ಲೂಕುವಾರು ನೀಡಿರುವ ಸೇವೆ ಗಳ ಕುರಿತು ಸಂಪೂರ್ಣ ಮಾಹಿತಿ ಯನ್ನು ಮುಂದಿನ ಸಭೆಯಲ್ಲಿ ಮಂಡಿಸ ಬೇಕೆಂದು ಜಿಲ್ಲಾ ಉಪಾ ಧ್ಯಕ್ಷ ಉಮೇಶ್ ರವರು ಕೋರಿದರು. ಸಭೆಯಲ್ಲಿ ಚರ್ಚಿತವಾದ ರೈತ ಮುಖಂಡರುಗಳ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಲಾಗು ವುದೆಂದು ಜಂಟಿ ಕೃಷಿ ನಿರ್ದೇಶಕ ಡಾ. ಕಿರಣ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು, ಜಿಲ್ಲಾ ಕೃಷಿಕ ಸಮಾಜದ ಎಲ್ಲ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ಅತಿಯಾದ ಮಳೆ ರೈತರಿಗೆ ಶೀಘ್ರ ಬೆಳೆ ವಿಮೆ ಪರಿಹಾರ ನೀಡಿ- ಎಚ್.ಎನ್.ನಾಗರಾಜ್
Date:
