S.N.Chennabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 21ರ ದುರ್ಗಿಗುಡಿ, ಕಾಮಾಕ್ಷಿ ಬೀದಿ, ಗಾರ್ಡನ್ ಏರಿಯ ಹಾಗೂ ಸಾವರ್ ಲೈನ್ ರಸ್ತೆಯ ಬಡಾವಣೆಗಳಿಗೆ ಶಾಸಕರಾದ ಎಸ್. ಎನ್. ಚನ್ನಬಸಪ್ಪ ಅವರು ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ನೇರವಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಬಡಾವಣೆಗಳಲ್ಲಿರುವಂತಹ ಇರುವಂತಹ ಯುಜಿಡಿ ಸಮಸ್ಯೆಗಳು, ಕನ್ಸರ್ವೆನ್ಸಿ ರಸ್ತೆಗಳ ಸ್ವಚ್ಛತೆ ಕುರಿತು ಸ್ಥಳೀಯರಿಂದ ವಿವರವಾದ ಮಾಹಿತಿ ಪಡೆದರು.
ಈ ಕುರಿತು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣ ಚರ್ಚಿಸಿ, ಶೀಘ್ರದಲ್ಲಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
S.N.Chennabasappa ಈ ಭೇಟಿ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಶ್ರೀ ಶಿವಾನಂದ್, ಪ್ರಮುಖರಾದ ಶ್ರೀ ಕಿರಣ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
