Actress Umashree ರೇಡಿಯೋ ಶಿವಮೊಗ್ಗ ೯೦.೮ಎಫ್.ಎಂ ಮತ್ತು ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಇದೇ ೧೨-೭-೨೫ ರ ಶನಿವಾರ ಬೆಳಗ್ಗೆ ೧೧.೩೦ಕ್ಕೆ ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಅಭಿನಯದ ಮೂಲಕ ವಿಶಿಷ್ಟ ಛಾಪನ್ನು ಮೂಡಿಸಿರುವ ಕನ್ನಡದ ಹೆಮ್ಮೆಯ, ಜನಪ್ರಿಯ ನಟಿ ಉಮಾಶ್ರೀ ಅವರೊಂದಿಗೆ ಸಂದರ್ಶನ ಮತ್ತು ನೇರ ಫೋನ್ ಇನ್ ಕಾರ್ಯಕ್ರಮ ಇರಲಿದೆ. Actress Umashree ನಟಿಯಾಗಿ, ರಾಜಕಾರಣಿಯಾಗಿ ಪ್ರಸಿದ್ದಿ ಪಡೆದಿರುವ ಇವರು ಇತ್ತೀಚೆಗೆ ನಟಿಸಿದ ಏಕವ್ಯಕ್ತಿ ನಾಟಕ ‘ಶ್ರಮಿಷ್ಠೆ’ ನಾಟಕವು ಯಶಸ್ವಿಯಾಗಿ ರಾಜ್ಯದ್ಯಂತ ಪ್ರದರ್ಶನ ಕಾಣುತ್ತಿದೆ. ಇವರ ಬದುಕು, ರಂಗಭೂಮಿ, ಸಿನಿಪಯಣ, ಸಮಾಜಸೇವೆಯ ಬಗ್ಗೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೇಳುಗರು ಸಹ ೯೬೮೬೦೯೬೨೭೯ ನಂಬರ್ ಗೆ ಕರೆ ಮಾಡಿ ಮಾತನಾಡಬಹುದು. ಆಸಕ್ತರು ತಪ್ಪದೇ ಕಾರ್ಯಕ್ರಮವನ್ನು ಆಲಿಸಿ. ಎಂದು ರೇಡಿಯೋ ಶಿವಮೊಗ್ಗದ ನಿಲಯದ ನಿರ್ದೇಶಕರಾದ ಜನಾರ್ಧನ್.ಜಿ.ಎಲ್. ರವರು ಕೋರಿದ್ದಾರೆ.
Actress Umashree ಜುಲೈ 12 ರಂದು “ರೇಡಿಯೋ ಶಿವಮೊಗ್ಗ ಎಫ್.ಎಂ” ನಲ್ಲಿ ಖ್ಯಾತ ನಟಿ ಉಮಾಶ್ರೀ ಅರೊಂದಿಗೆ ಫೋನ್ ಇನ್ ಕಾರ್ಯಕ್ರಮ
Date:
