Rotary Shivamogga ರೋಟರಿ ಸಂಸ್ಥೆಯು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಸ್ಥೆಯಾಗಿದೆ ಎಂದು ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಎ ಶೆಟ್ಟಿ ಹೇಳಿದರು.
ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯು ಶಾಂತಿಯನ್ನು ಉತ್ತೇಜಿಸುವುದು, ರೋಗಗಳ ವಿರುದ್ಧ ಹೋರಾಡುವುದು, ಶುದ್ಧ ನೀರು, ತಾಯಂದಿರು ಮತ್ತು ಮಕ್ಕಳನ್ನು ಅಪೌಷ್ಠಿಕತೆ ಮತ್ತು ಇತರ ಕಾಯಿಲೆಗಳಿಂದ ರಕ್ಷಿಸುವುದು, ಶುದ್ಧ ನೀರು ಹಾಗೂ ಸಾಕ್ಷರತೆ, ಸ್ಥಳೀಯ ಆರ್ಥಿಕತೆಯನ್ನು ಬೆಳೆಸುವುದು ಮತ್ತು ಪರಿಸರ ರಕ್ಷಿಸುವಲ್ಲಿ ರೋಟರಿ ಕ್ಲಬ್‌ಗಳು ತೊಡಗಿಸಿಕೊಂಡಿವೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಬಸವರಾಜ್ ಬಿ ರವರಿಗೆ ಪದವಿ ಪ್ರಧಾನ ಮಾಡಿದರು. ಕಾರ್ಯದರ್ಶಿಯಾಗಿ ಜಯಶೀಲ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಮಾರ್ ಜಿ ಅವರ ಸೇವಾ ಕಾರ್ಯಗಳ ಬಗ್ಗೆ ಹಾಗೂ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
Rotary Shivamogga ವಲಯ 11 ರ ಸಹಾಯಕ ಗವರ್ನರ್ ಲಕ್ಷ್ಮಣ್‌ಗೌಡ ಎಂ ಬಿ, ಜೋನಲ್ ಲೆಫ್ಟಿನೆಂಟ್ ಕಿರಣ್ ಕುಮಾರ್ ಜಿ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಈಶ್ವರ ಬಿವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನ್ಸ್ ಕ್ಲಬ್ ಪದವಿ ಪ್ರಧಾನ ಮಾಡಲು ಡಾ. ರಾಜನಂದಿನಿ ಕಾಗೋಡು ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಿದ್ದರು. ವಲಯ 10 ಮತ್ತು 11 ರ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು, ಪಿಡಿಜಿಗಳು ಫಾಸ್ಟ್ ಅಸಿಸ್ಟೆಂಟ್ ಗೌರ್ನರ್ ಉಪಸಿತರಿದ್ದರು.
Rotary Shivamogga ವಿಶ್ವಾದ್ಯಂತ ರೋಟರಿ ಕ್ಲಬ್‌ಗಳಿಂದ ಸಮಾಜಮುಖಿ ಸೇವೆ : ಅಭಿನಂದನ್ ಎ ಶೆಟ್ಟಿ
Date:
