Saturday, March 21, 2026
Saturday, March 21, 2026

Vivek Vidya Nidhi “ವಿವೇಕ ವಿದ್ಯಾನಿಧಿ” ಸಾರ್ಜಜನಿಕರಿಗೆ ಮುಖ್ಯ ಮಾಹಿತಿ

Date:

Vivek Vidya Nidhi ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಾನ ಮನಸ್ಕರ ತಂಡವಾಗಿರುವ “ಅನವರತ” ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ನಾಲ್ಕನೇ ಆಯಮದ ತಯಾರಿಯಲ್ಲಿ ತೊಡಗಿದೆ.

  • ಅನವರತ ತಂಡವು ಯುವ ಪೀಳಿಗೆಯು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂಬ ಉದ್ದೇಶದೊಂದಿಗೆ ನಗರದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕಿರು ಸಹಾಯವನ್ನು ನೀಡಲು ಸಂಕಲ್ಪ ಮಾಡಿಕೊಂಡಿದೆ.

“ವಿವೇಕ ವಿದ್ಯಾ ನಿಧಿ”

  • ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮಹಾನ್ ರಾಯಭಾರಿ ಶ್ರೀ ಸ್ವಾಮಿ ವಿವೇಕಾನಂದರ ಆದರ್ಶಗಳು, ಅವರ ದೃಷ್ಟಿಕೋನವು ಯುವಜನರು ಉನ್ನತ ಶಿಕ್ಷಣವನ್ನು ಪಡೆದು, ಅದರೊಂದಿಗೆ ಬಲವಾದ ರಾಷ್ಟ್ರೀಯ ಚಿಂತನೆ ಮತ್ತು ರಾಷ್ಟ್ರೀಯತೆಯ ಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿತ್ತು. ಅವರ ಆಶಯದಂತೆ ಈ ಮಹಾನ್ ಕಾರ್ಯಕ್ಕೆ ಅನವರತ ತಂಡವು “ವಿವೇಕ ವಿದ್ಯಾ ನಿಧಿ” ಎಂಬ ಹೆಸರನ್ನಿಡುವ ಮೂಲಕ ಈ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಲು ಮುಂದಾಗಿದೆ.

ಏನಿದು ವಿವೇಕ ವಿದ್ಯಾ ನಿಧಿ?

  • ಪ್ರಸಕ್ತ ಸಾಲಿನಲ್ಲಿ ಓದುತ್ತಿರುವಂತಹ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಕಳೆದ ಸಾಲಿನಲ್ಲಿ ಶೇಕಡ 50% ರಿಂದ 75% ವರೆಗೆ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ – ಪ್ರಸಕ್ತ ಸಾಲಿನಲ್ಲಿ ಇನ್ನು ಹೆಚ್ಚು ಅಂಕ ಪಡೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಆರ್ಥಿಕ ನೆರವು ನೀಡುವುದು.
  • ಸಮಾಜದಲ್ಲಿನ ಅನೇಕ ಕೊಡುಗೈ ದಾನಿಗಳನ್ನು ಈ ಶ್ರೇಷ್ಠ ಕಾರ್ಯದಲ್ಲಿ ಜೋಡಿಸಿಕೊಂಡು ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಸಮಾಜದ ಪಾತ್ರವನ್ನು ನೆನಪಿಸುವುದರ ಜೊತೆಗೆ ಈ ವಿದ್ಯಾನಿಧಿಯು ಅವರ ಉನ್ನತ ಶಿಕ್ಷಣದ ಕನಸಿಗೆ ಒಂದು ಸಣ್ಣ ಬೆಂಬಲವಾಗಲಿದೆ .
  • ಒಟ್ಟಾರೆ, ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲಕ್ಕಾಗಿ 5000/- ರೂಗಳ ವಿದ್ಯಾರ್ಥಿ ವೇತನ ಒದಗಿಸುವುದು.

“ವಿವೇಕ ವಿದ್ಯಾ ನಿಧಿಗೆ ಯಾರು ಅರ್ಹರು?”

  • ಪ್ರಸ್ತುತ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು.
  • ಹಿಂದಿನ ವರ್ಷ ಅಂದರೆ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳಲ್ಲಿ ಶೇಕಡ 50 ರಿಂದ 75% ಹೊಂದಿರಬೇಕು.
  • ಪೋಷಕರ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. (ಅವರ ಆದಾಯವು 1,80,000 ರೂ ಗಿಂತ ಕಡಿಮೆ ಇರಬೇಕು.)
  • ⁠ವಾರ್ಷಿಕ ವರ್ಷದಲ್ಲಿ ಓದುತ್ತಿರುವ ಶಾಲೆ/ಕಾಲೇಜಿನ ಶುಲ್ಕವು 30,000/- ರೂಪಾಯಿ ಮೀರಿರಬಾರದು.
  • ಪೋಷಕರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು.

ವಿವೇಕ ವಿದ್ಯಾನಿಧಿ ಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

  • Vivek Vidya Nidhi ವಿವೇಕ ವಿದ್ಯಾನಿಧಿ ಅರ್ಜಿಗಳನ್ನು ಶಾಸಕರ ಕಛೇರಿ ಕರ್ತವ್ಯ ಭವನದಲ್ಲಿ ಮಾತ್ರ ನೀಡಲಾಗುವುದು.
  • ವಿವೇಕ ವಿದ್ಯಾನಿಧಿ ಅರ್ಜಿಗಳನ್ನು ಜುಲೈ 11 ರಿಂದ ಆಗಸ್ಟ್ 15 ರವರೆಗೆ ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ನೀಡಲಾಗುವುದು.
  • ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 31ರ ಒಳಗಾಗಿ ಕರ್ತವ್ಯ ಭವನಕ್ಕೆ ನೀಡಬೇಕು.

ಆಯ್ಕೆ ಮಾಡಲಾದ ವಿದ್ಯಾರ್ಥಿಗಳಿಗೆ ವಿವೇಕ ವಿದ್ಯಾನಿಧಿ ಅನ್ನು ಅಕ್ಟೋಬರ್ / ನವಂಬರ್ ತಿಂಗಳಿನಲ್ಲಿ ಕಾರ್ಯಕ್ರಮದ ಮೂಲಕ ನೀಡಲಾಗುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಶಿವಮೊಗ್ಗದಿಂದ ದಂಪತಿ ನಾಪತ್ತೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆಮ

Shivamogga News ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ 2ನೇ...

Shivamogga News ಪಂಚಾಂಗ ಶ್ರವಣವು ಪುಣ್ಯಪ್ರದ. ಕೆಟ್ಟಸ್ವಪ್ನವನ್ನು ದೂರಮಾಡುತ್ತದೆ- “ಕಗ್ಗ” ಜಿ.ಎಸ್.ನಟೇಶ್.

Shivamogga News ಪಂಚಾಂಗ ಶ್ರವಣದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ನಮ್ಮ ಎಲ್ಲಾ...

Rangayana, Shivamogga ಚಿಣ್ಣರ ಸಿಹಿಮೊಗೆ ಬೇಸಿಗೆ ಶಿಬಿರದಲ್ಲಿ ನಾಟಕ ನಿರ್ದೇಶಕ ಮತ್ತು ಜನಸಹಾಯಕ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಅರ್ಜಿಗಳ ಆಹ್ವಾನ.

Rangayana ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ...