Sunday, December 14, 2025
Sunday, December 14, 2025

Narayana Health Insurance Company ಒಂದು ಕೋಟಿ ರೂ‌, ವಿಮಾ ಮೌಲ್ಯದ “ನಾರಾಯಣ ಅದಿತಿ ಆರೋಗ್ಯ ವಿಮಾ ಯೋಜನೆ” ಬಿಡುಗಡೆ

Date:

Narayana Health Insurance Company ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಸಂಸ್ಥೆಯು ಶಿವಮೊಗ್ಗದಲ್ಲಿ ನಾರಾಯಣ ಆದಿತಿ ಎಂಬ ಕೈಗೆಟಕುವ ಬೆಲೆಯ ವಿನೂತನ ಆರೋಗ್ಯ ವಿಮಾ ಯೋಜನೆಯನ್ನು ಪ್ರಾರಂಭಿಸಿದೆ. ನಾರಾಯಣ ಆದಿತಿ ವಿಮಾ ಯೋಜನೆಯು ನಾಲ್ಕು ಜನರ ಕುಟುಂಬಕ್ಕೆ ಕೇವಲ ದಿನಕ್ಕೆ ₹29 ಬೆಲೆಯಲ್ಲಿ ₹1 ಕೋಟಿವರೆಗಿನ ಕವರೇಜ್ ಒದಗಿಸುವ ಮಹತ್ವದ ಆರೋಗ್ಯ ವಿಮೆಯಾಗಿದ್ದು, ಈ ಪ್ರದೇಶದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ, ಸಮಗ್ರ ಮತ್ತು ಅತ್ಯುತ್ತಮ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ.

ನಾರಾಯಣ ಆದಿತಿ ವಿಮಾ ಯೋಜನೆಯು ವೈದ್ಯಕೀಯ ಚಿಕಿತ್ಸೆಗೆ ₹5 ಲಕ್ಷದವರೆಗಿನ ವಿಮಾ ಮೊತ್ತವನ್ನು ಮತ್ತು ಶಸ್ತ್ರಚಿಕಿತ್ಸೆಗೆ ₹1 ಕೋಟಿವರೆಗಿನ ವಿಮೆಯನ್ನು ಒದಗಿಸುತ್ತದೆ. ವಿಶೇಷವಾಗಿ ನಾರಾಯಣ ಹೆಲ್ತ್ ಆಸ್ಪತ್ರೆ ಜಾಲದಲ್ಲಿ ಒಳರೋಗಿಗಳ ಚಿಕಿತ್ಸೆಗೆ ಮತ್ತು ಕಾರ್ಯವಿಧಾನಗಳಿಗೆ ಕ್ಯಾಶ್ ಲೆಸ್ (ನಗದುರಹಿತ) ಸೌಲಭ್ಯವನ್ನು ಒದಗಿಸುತ್ತದೆ. ನಾರಾಯಣ ಆದಿತಿಯ ಮತ್ತೊಂದು ವಿಶೇಷ ಲಕ್ಷಣವೆಂದರೆ ಗ್ರಾಹಕರು ಆರೋಗ್ಯ ತಪಾಸಣೆ ಮಾಡಿಸಿ, ಮೊದಲೇ ನಿಗದಿಪಡಿಸಿದ ಕೆಲವು ಷರತ್ತುಗಳನ್ನು ಪೂರೈಸಿದರೆ ಯಾವುದೇ ಕಾಯುವ ಅವಧಿ ಇರುವುದಿಲ್ಲ. ಈ ಪಾಲಿಸಿಯು ಆಸ್ಪತ್ರೆಗೆ ದಾಖಲಾಗುವ ಮೊದಲಿನ ಮತ್ತು ನಂತರದ ವೆಚ್ಚಗಳು, ಆಂಬ್ಯುಲೆನ್ಸ್ ಸೇವೆಗಳು, ಡೇ ಕೇರ್ ಪ್ರಕ್ರಿಯೆಗಳಿಗೆ ರಿಯಾಯಿತಿ ಮತ್ತು ಆಧುನಿಕ ಹಾಗೂ ಪರ್ಯಾಯ ಚಿಕಿತ್ಸೆಗಳಿಗೆ ಕವರೇಜ್ ಒದಗಿಸುತ್ತದೆ.

ಬೆಂಗಳೂರು ಮತ್ತು ಮೈಸೂರಿನಂತಹ ಪ್ರಮುಖ ನಗರಗಳಲ್ಲಿ ನಾರಾಯಣ ಆದಿತಿ ವಿಮಾ ಯೋಜನೆ ಈಗಾಗಲೇ ಲಭ್ಯವಿದ್ದು, ಮುಂದೆ ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ. ಆ ಮೂಲಕ ಭಾರತದಾದ್ಯಂತ ಇನ್ನಷ್ಟು ಕುಟುಂಬಗಳಿಗೆ ಸೇವೆ ಸಲ್ಲಿಸುವ ಉದ್ದೇಶ ಸಂಸ್ಥೆಗಿದೆ.

ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಲಭ್ಯವಿರುವ ನಾರಾಯಣ ಆದಿತಿ ವಿಮಾ ಯೋಜನೆಯು ನಗರ ಮತ್ತು ಸಣ್ಣ ಪಟ್ಟಣಗಳಲ್ಲಿರುವ ಕುಟುಂಬಗಳಿಗೆ ಅತ್ಯುತ್ತಮ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡುತ್ತದೆ. ಕೈಗೆಟುಕುವ ದರ, ಸುಲಭ ಲಭ್ಯತೆ ಮತ್ತು ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಾರಾಯಣ ಆದಿತಿ ವಿಮಾ ಯೋಜನೆಯು ಕರ್ನಾಟಕದ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲಿದೆ.

Narayana Health Insurance Company ಈ ಕುರಿತು ಮಾತನಾಡಿರುವ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್‌ ನ ಸಿಇಓ ಶೀಲಾ ಅನಂತ್ ಅವರು, “ನಾರಾಯಣ ಆದಿತಿ ಪ್ರಾರಂಭಿಸುವ ಮೂಲಕ ನಾವು ಆರೋಗ್ಯ ವಿಮಾ ವಿಭಾಗದಲ್ಲಿ ಸಂಚಲನ ಉಂಟು ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಕೈಗೆಟುಕುವ ದರ ಮಾತ್ರವೇ ಅಲ್ಲ, ವಿಶ್ವಾಸಾರ್ಹ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶವೂ ಇದರ ಹಿಂದಿದೆ. ಶಿವಮೊಗ್ಗವು ನಮ್ಮ ಈ ಪಯಣದಲ್ಲಿ ಒಂದು ಪ್ರಮುಖ ಸ್ಥಳವಾಗಿದ್ದು, ಇಲ್ಲಿನ ಜನರಿಗೆ ಈ ಆರೋಗ್ಯ ವಿಮೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.

ನಾರಾಯಣ ಹೆಲ್ತ್ ಇನ್ಶೂರೆನ್ಸ್‌ ನ ನಿರ್ದೇಶಕರಾದ ಶ್ರೀ ರವಿ ವಿಶ್ವನಾಥ್ ಅವರು, “ನಾರಾಯಣ ಆದಿತಿಯು ಕರ್ನಾಟಕದ ಆರೋಗ್ಯ ವಿಮಾ ವಿಭಾಗದಲ್ಲಿ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ಇದು ಕೇವಲ ಆರೋಗ್ಯ ವಿಮಾ ಉತ್ಪನ್ನ ಮಾತ್ರವೇ ಅಲ್ಲ, ವೈದ್ಯಕೀಯ ಸೇವೆಯಲ್ಲಿ ಸಮಾನತೆ ಕಡೆಗಿನ ಮಹತ್ವದ ಹೆಜ್ಜೆಯಾಗಿದೆ. ವಿಶೇಷವಾಗಿ ಇದು ಬಹಳ ಸಮಯದಿಂದ ಸಾಂಪ್ರದಾಯಿಕ ಆರೋಗ್ಯ ವಿಮಾ ಯೋಜನೆಗಳಿಂದ ವಂಚಿತರಾಗಿದ್ದ ಕುಟುಂಬಗಳಿಗಾಗಿ ರೂಪಿಸಲಾದ ವಿಮಾ ಪರಿಹಾರವಾಗಿದೆ. ನಾರಾಯಣ ಆದಿತಿ ಮೂಲಕ ನಾವು ಪ್ರತೀ ಕುಟುಂಬಕ್ಕೂ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ಗುರಿ ಹೊಂದಿದ್ದೇವೆ” ಎಂದರು.

ಕೋಲ್ಕತ್ತಾ ಮತ್ತು ರಾಯಪುರ ಸೇರಿದಂತೆ ಏಕಕಾಲದಲ್ಲಿ 18 ಪ್ರದೇಶಗಳಲ್ಲಿ ಈ ಯೋಜನೆಯನ್ನು ಆರಂಭಿಸಿರುವುದು ವಿಶೇಷವಾಗಿದೆ.

ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಕುರಿತು
ನಾರಾಯಣ ಹೆಲ್ತ್‌ ನ ಅಂಗಸಂಸ್ಥೆಯಾಗಿರುವ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಒಂದು ಸ್ವತಂತ್ರ ಆರೋಗ್ಯ ವಿಮಾ ಕಂಪನಿಯಾಗಿದೆ. ವೈದ್ಯಕೀಯ ಸೇವೆ ಒದಗಿಸುವ ಭಾರತದ ಎರಡನೇ ಅತಿದೊಡ್ಡ ಸಂಸ್ಥೆಯಾಗಿರುವ ನಾರಾಯಣ ಹೆಲ್ತ್ ಆಸ್ಪತ್ರೆಯು ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ಸೂಪರ್-ಸ್ಪೆಷಾಲಿಟಿ ಚಿಕಿತ್ಸೆಗಳ ಸಮಗ್ರ ಶ್ರೇಣಿಯನ್ನು ಒದಗಿಸುತ್ತದೆ. ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಅತ್ಯುತ್ತಮ ಆರೋಗ್ಯ ಕೇಂದ್ರಗಳು, 18,822 ವೃತ್ತಿಪರರ ತಂಡ, 3,868 ಕೌಶಲ್ಯಪೂರ್ಣ ವೈದ್ಯರು ಮತ್ತು ತಜ್ಞರನ್ನು ಒಳಗೊಂಡಂತೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ಸಂಸ್ಥೆಯು ಹೊಂದಿದೆ. ಭಾರತದಲ್ಲಿ ಮಹತ್ವದ ವೈದ್ಯಕೀಯ ಸೇವಾ ಸಂಸ್ಥೆಯಾಗಿರುವ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು www.narayanahealth.insurance ಗೆ ಭೇಟಿ ನೀಡಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...