Friday, December 5, 2025
Friday, December 5, 2025

Sitaramchandra Temple ಭಗವದ್ಗೀತೆಯ ಜ್ಞಾನದಿಂದ ಸಮಾಜದಲ್ಲಿ ಶಾಂತಿ & ಮಾನವೀಯತೆ ಸ್ಥಾಪನೆ- ಅಶೋಕ ಭಟ್

Date:

Sitaramchandra Temple ಭಗವದ್ಗೀತಾ ಜ್ಞಾನವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸರ್ವರೂ ಸಮಾನರಾಗಿ ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಶ್ರೀ ಭಗವದ್ಗೀತಾ ಅಭಿಯಾನದ ಜಿಲ್ಲಾ ಕಾರ್ಯಧ್ಯಕ್ಷ ಹಾಗೂ ವಕೀಲ ಅಶೋಕ್ ಭಟ್ ಹೇಳಿದರು.
ಪಟ್ಟಣದ ಮುಖ್ಯರಸ್ತೆಯ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ೨೦೨೫ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಅನೇಕ ವಿಕಾರಗಳಿಗೆ ಜನತೆ ಬಲಿಯಾಗುತ್ತಿದ್ದಾರೆ ಜೊತೆಗೆ ವಿಕೃತವಾದ ಮನಸ್ಸು ಅಡ್ಡದಾರಿಯನ್ನು ಹಿಡಿಯುತ್ತಿದೆ. ಭಯೋತ್ಪಾದನೆ, ಅತ್ಯಾಚಾರ, ಕೊಲೆ, ಸುಲಿಗೆ, ಮಾದಕ ವಸ್ತುಗಳ ಸೇವನೆ, ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿದೆ. ಇದಕ್ಕೆಲ್ಲಾ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಭಗವದ್ಗಿತೆಯ ಮೂಲಕ ಸಮಾಜದಲ್ಲಿ ಸುಖ ಮತ್ತು ಶಾಂತಿ ನೆಲೆಸುವಂತೆ ಪ್ರತಿಯೊಬ್ಬರನ್ನು ಸುಸಂಸ್ಕೃತರನ್ನಾಗಿಸುವ ನಿಟ್ಟಿನಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ೨೦೦೭ರಿಂದ ಭಗವದ್ಗೀತಾ ಅಭಿಯಾನ ಆರಂಭಿಸಿದ್ದಾರೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರವಂತರನ್ನಾಗಿಸುವ ಉದ್ದೇಶದಿಂದ ಗೀತ ಜ್ಞಾನವನ್ನು ನೀಡಲಾಗುತ್ತಿದೆ ಎಂದರು.
ಭಗವದ್ಗೀತಾ ಅಭಿಯಾನದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್ ಮಾತನಾಡಿ, ಭಗವದ್ಗೀತೆಯು ಜ್ಞಾನ, ಧರ್ಮ ಹಾಗೂ ಸಂಸ್ಕೃತಿಯಾಗಿದೆ. ಶುಭ ಜೀವನದ ಹೊತ್ತಿಗೆಯಾಗಿದೆ. ಭಗವದ್ಗಿತೆಯನ್ನು ಅಧ್ಯಯನ ಮಾಡುವುದರಿಂದ ಒತ್ತಡ ಮುಕ್ತವಾದ ಜೀವನದನ್ನು ನಡೆಸಲು ಸಾಧ್ಯವಾಗುತ್ತದೆ. Sitaramchandra Temple ಸರ್ವ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಶ್ರೀ ಭಗವದ್ಗಿತೆಯ ಕುರಿತಾದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಜಾಗೃತರನ್ನಾಗಿಸಲಾಗುವುದು ಎಂದ ಅವರು, ತಮ್ಮನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಜೊತೆಗೆ, ಇಂತಹ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ. ಪ್ರತಿಯೊಬ್ಬರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗೌರವ ಅಧ್ಯಕ್ಷರಾಗಿ ಪಾಣಿ ರಾಜಪ್ಪ, ಉಪಾಧ್ಯಕ್ಷರಾಗಿ ಎಂ.ಎನ್. ಗುರುಮೂರ್ತಿ, ನಾಗರಾಜ ಗುತ್ತಿ. ಸತೀಶ್ ಜಾಣ್ಮನೆ ನಿಸರಾಣಿ, ಸರಸ್ವತಿ ನಾವುಡ. ಪ್ರಧಾನ ಸಂಚಾಲಕರಾಗಿ ದಿನಕರ ಭಟ್ ಭಾವೆ, ಕಾರ್ಯದರ್ಶಿ ಎಂ.ಎಸ್. ಕಾಳಿಂಗರಾಜ್, ಸಂಚಾಲಕರಾಗಿ ಪುರಸಭೆ ಸದಸ್ಯ ಡಿ.ಎಸ್. ಪ್ರಸನ್ನ ಕುಮಾರ್ ದೊಡ್ಮನೆ, ಪ್ರಶಾಂತ ಕೆ. ಸಾಗರ ಶ್ಯಾಡಲಕೊಪ್ಪ, ಕೇಶವಮೂರ್ತಿ ಪೇಟ್ಕರ್, ವಾಸುದೇವ ಉಡುಪ, ಗಾಯತ್ರಿ ಜೊಯ್ಸ್, ರೂಪದರ್ಶಿನಿ ಮಧುಕೇಶ್ವರ, ಸಹ ಸಂಚಾಲಕರಾಗಿ ರಾಘವೇಂದ್ರ ಆಚಾರ್, ನಾಗರಾಜ ಆಚಾರಿ, ಲೋಕೇಶ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕ ಪಿ.ಪಿ. ಹೆಗಡೆ, ಲಕ್ಷಿನಾರಾಯಣ,ಖಜಾಂಚಿ ದತ್ತಾತ್ರೇಯ ಹೆಗಡೆ, ವಿಭಾಗ ಸಂಚಾಲಕರಾದ ಮಾ.ಸ.ನಂಜುಂಡಸ್ವಾಮಿ, ವಿವಿಧ ಸಮುದಾಯ ಮುಖಂಡರು ಹಾಗೂ ಸಂಘ-ಸಂಸ್ಥೆಯವರು ಇದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...