S.N.Chennabasappa ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ, ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಮಹಾನಗರ ಪಾಲಿಕೆ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ, ನೌಕರರ ಆವಾಲುಗಳನ್ನು ಸ್ವೀಕರಿಸಿದರು.
ನೌಕರರ ಬೇಡಿಕೆಗಳಾದ ಏಳನೇ ವೇತನ ಆಯೋಗದ ಸೌಲಭ್ಯ, ನೇಮಕಾತಿ ನಿಯಮಾವಳಿಗಳ ತಿದ್ದುಪಡಿ, ಕೆಜಿಐಡಿ ಮತ್ತು ಜೆಪಿಎಫ್ ಸೌಲಭ್ಯಗಳ ಕುರಿತು, ಆರೋಗ್ಯ ಸೌಲಭ್ಯಗಳಾದ ಜ್ಯೋತಿ ಆರೋಗ್ಯ ಸಂಜೀವಿನಿಯನ್ನು ಜಾರಿಗೊಳಿಸುವ ಕುರಿತು, ಸರ್ಕಾರಿ ನೌಕರರಿಗೆ ಕ್ರೀಡೆ ಆಯೋಜನೆಗೆ ಸಂಬಂಧಿಸಿದಂತೆ ಮನವಿಯನ್ನು ಸ್ವೀಕರಿಸಿ, ಈ ಕುರಿತು ಮಹಾನಗರ ಪಾಲಿಕೆ ಹಾಗೂ ಸಂಬಂಧಿತ ಇಲಾಖೆಗಳೊಂದಿಗೆ ಸೂಕ್ತ ಮಟ್ಟದಲ್ಲಿ ಚರ್ಚೆ ನಡೆಸುವ ಮೂಲಕ ನ್ಯಾಯ ದೊರಕಿಸುವ ಪ್ರಯತ್ನ ಮಾಡುವ ವಿಶ್ವಾಸವನ್ನು ನೀಡಿದರು.
S.N.Chennabasappa ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾಕ್ಟರ್ ಧನಂಜಯ್ ಸರ್ಜಿ, ನೌಕರರ ಸಂಘದ ಪ್ರಮುಖರು, ಸಂಘದ ಸದಸ್ಯರು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
