Kannada Sahitya Parishath ಜುಲೈ 20 ರಂದು ಭಾನುವಾರ ಸಂಜೆ 5-30 ಕ್ಕೆ ಸಾಹಿತ್ಯ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ನಾಡಿನ ವಿವಿಧ ಕವಿಗಳು ಬರೆದ ಕವನಗಳನ್ನು ಗಾಯಕರು ಹಾಡಿದ ಹಾಡುಗಳನ್ನು ನಮ್ಮ ಪ್ರೌಢಾಶಾಲಾ ವಿದ್ಯಾರ್ಥಿಗಳು ವೃಂದಗಾನದಲ್ಲಿ ಹಾಡಲಿದ್ದಾರೆ. ಆಯ್ದ 11 ಶಾಲೆಗಳಿಂದ ತಲಾ 15 ವಿದ್ಯಾರ್ಥಿಗಳನ್ನು ಒಳಗೊಂಡ ತಂಡಗಳು ವೃಂದಗಾನದಲ್ಲಿ ಹಾಡಲಿದ್ದಾರೆ. ಆಷಾಡದ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ 165 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮಕ್ಕಳಲ್ಲಿ ಕಾವ್ಯ ಆಸಕ್ತಿ ಮೂಡಿಸುವುದು. ಕವನಗಳನ್ನು ಹಾಡುವಂತೆ ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯಾರ್ಥಿಗಳು, ಪೋಷಕರು, ಸಾಹಿತ್ಯ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮನವಿಮಾಡಿದ್ದಾರೆ.
Kannada Sahitya Parishath ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನೆರವು ಪಡೆಯಲಾಗಿದೆ. ಎಲ್ಲಾ ಶಾಲೆಗಳಿಗೂ ಸುತ್ತೋಲೆ ಹೊರಡಿಸಲಾಗಿದೆ. ಆಸಕ್ತಶಾಲೆಗಳು ಸಂಪರ್ಕ ಮಾಡಲು ಡಿ. ಮಂಜುನಾಥ ಮನವಿ ಮಾಡಿದ್ದಾರೆ.
Kannada Sahitya Parishath ಶಿವಮೊಗ್ಗ ಜಿಲ್ಲಾ ಕಸಾಪದಿಂದ ಆಷಾಡೆ “ಕಾವ್ಯ ಸಂಭ್ರಮ” ವಿದ್ಯಾರ್ಥಿ ವಿಶೇಷ
Date:
