Transport Department ರಸ್ತೆಯ ಮೇಲೆ ಚಾಲನಾ ಅನುಜ್ಞಾಪತ್ರ ಹಾಗೂ ನೋಂದಣಿ/ ಅರ್ಹತಾ ಪತ್ರ/ ರಹದಾರಿ/ ಹೊಗೆ ತಪಾಸಣೆ ಪತ್ರ/ ವಿಮೆ ಇಲ್ಲದೇ ಸಂಚರಿಸುತ್ತಿರುವುದನ್ನು ಸಾಗರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಗಮನಿಸಿದ್ದು, ವಾಹನ ಮಾಲೀಕರು/ಸವಾರರು ಈ ಎಲ್ಲಾ ದಾಖಲೆಗಳನ್ನು ಪಡೆದು/ ವಾಯಿದೆಯ 15 ದಿನಗಳ ಮುಂಚಿತವಾಗಿ ನವೀಕರಿಸುವಂತೆ ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರೇಶ್ ಡಿ.ಹೆಚ್. ತಿಳಿಸಿದ್ದಾರೆ. Transport Department ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವ್ಯಾಪ್ತಿಗೆ ಬರುವ ಎಲ್ಲಾ ಆಟೋರಿಕ್ಷಾ/ ಮೋಟಾರ್ ಕ್ಯಾಬ್/ಮ್ಯಾಕ್ಸಿ ಕ್ಯಾಬ್/ಹಾಗೂ ಇತರೆ ಸಾರಿಗೇತರ ವಾಹನಗಳಿಗೆ ನೋಂದಣಿ/ ಅರ್ಹತಾ ಪತ್ರ/ ರಹದಾರಿ/ ಹೊಗೆ ತಪಾಸಣೆ ಪತ್ರ/ ವಿಮೆ / ಚಾಲನಾ ಅನುಜ್ಞಾ ಪತ್ರಗಳನ್ನೊಳಗೊಂಡ ಸೂಕ್ತ ದಾಖಲೆಗಳನ್ನು ಮಾಡಿಸುವಂತೆ ಹಾಗೂ ನೋಂದಣಿ/ ಅರ್ಹತಾ ಪತ್ರಗಳ ಅವಧಿ ಮೀರಿದ ವಾಹನಗಳ ನಿಗಧಿತ ಶುಲ್ಕ ಹಾಗೂ ಅರ್ಜಿ ಸಲ್ಲಿಸಿ ವಾಹನ ತಪಾಸಿಸಲು ಕಚೇರಿಗೆ ಹಾಜರುಪಡಿಸುವಂತೆ ವಾಹನ ಮಾಲೀಕರಿಗೆ ತಿಳಿಸಲಾಗಿದೆ ತಪ್ಪಿದಲ್ಲಿ ಅಂತಹ ವಾಹನಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿರುತ್ತಾರೆ.
Transport Department ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಇತ್ಯಾದಿ ಪತ್ರ ಇಲ್ಲವೆ ? ಸಾಗರ ಸಾರಿಗೆ ಕಾರ್ಯಾಲಯ ಪ್ರಕಟಣೆ ಗಮನಿಸಿ
Date:
