Rotary Club Shimoga ರೋಟರಿ ಅಂತರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿದ್ದು, ವಿಶ್ವಾದ್ಯಂತ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಜಿಲ್ಲಾ ಮಾಜಿ ಗವರ್ನರ್ ಅವಿನಾಶ್ ಪೋತದಾರ್ ಹೇಳಿದರು.
ಸವಳಂಗ ರಸ್ತೆಯಲ್ಲಿರುವ ನಗರದ ರೋಟರಿ ಯೂತ್ ಸೆಂಟರ್‌ನಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಆರ್.ಆನಂದ ಅಧಿಕಾರ ವಹಿಸಿಕೊಂಡು ಮಾತನಾಡಿ, ಎಲ್ಲರಲ್ಲೂ ನಾಯಕತ್ವ ಗುಣಗಳಿರುತ್ತವೆ. ಅದನ್ನು ಗುರುತಿಸುವಂತಹ ಕೆಲಸವಾಗಬೇಕು. ವರ್ಷಪೂರ್ತಿ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ 23 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ನೂತನ ಅಧ್ಯಕ್ಷ ಆನಂದ್ ಅವರು ತಂಡದವರನ್ನು ಸಭೆಗೆ ಪರಿಚಯಿಸಿದರು.
Rotary Club Shimoga ವನಿತಾ ಸಂದೀಪ್ ಪ್ರಾರ್ಥನೆ ನಡೆಸಿದರು. ನಿಯೋಜಿತ ಅಧ್ಯಕ್ಷ ಎನ್.ಗೋಪಿನಾಥ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ವಿಶ್ವಾಸ್ ಎಲಬುರ್ಗಿ ಅವರು ವಂದನಾರ್ಪಣೆ ನಡೆಸಿದರು.
ನಿಕಟಪೂರ್ವ ಅಧ್ಯಕ್ಷ ಕೆ.ಸೂರ್ಯನಾರಾಯಣ ಉಡುಪ, ಉಪಾಧ್ಯಕ್ಷೆ ಡಾ. ಕಾಂಚನ ಕುಲಕರ್ಣಿ, ಕಾರ್ಯದರ್ಶಿ ವಿಶ್ವಾಸ್ ಎಲಬುರ್ಗಿ, ನಿಯೋಜಿತ ಅಧ್ಯಕ್ಷ ಎನ್.ಗೋಪಿನಾಥ್, ಸಹಕಾರ್ಯದರ್ಶಿ ಶ್ರೀಕಾಂತ್ ನಾಡಿಗ್, ಖಜಾಂಚಿ ಲಕ್ಷ್ಮೀನಾರಾಯಣ ಭಟ್, ನಿರ್ದೇಶಕರಾಗಿ ಸುನೀತಾ ಶ್ರೀಧರ್, ಸೆಂಥಿಲ್‌ವೇಲನ್, ಕಿಶೋರ್ ಶೀರನಾಳಿ, ಹೆಚ್.ಎಸ್. ಮೋಹನ್, ಎನ್.ಜಿ. ಉಷಾ, ನಾಗೇಶ್ ಎಂ.ವಿ, ವೀರಣ್ಣ ಎ. ಹುಗ್ಗಿ, ಮಂಜುನಾಥ್ ಎಸ್. ಇತರರಿದ್ದರು.
