World Doctor’s Day ಮೂಳೆಗಳು ದೇಹದ ಅವಿಭಾಜ್ಯ ಅಂಗಾಂಶ. ಮೂಳೆಗಳು ಸಂಯೋಜಕ ಅಂಗಾಂಶದ ಒಂದು ವಿಧವಾಗಿದ್ದು, ದೇಹಕ್ಕೆ ಆಧಾರ, ಆಕಾರ, ರಕ್ಷಣೆಯನ್ನು ನೀಡುತ್ತದೆ.ಮಾತ್ರವಲ್ಲದೆ ಅಗತ್ಯವಾದ ಖನಿಜಾಂಶಗಳ ಸಂಗ್ರಹಿಸುವಿಕೆ, ರಕ್ತ ಕಣಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಮೂಳೆ ಅಂಗಾಂಶವು ಕಾರ್ಟಿಕಲ್ ಮೂಳೆ – ಗಟ್ಟಿಯಾದ ಹೊರ ಪದರ, ಕ್ಯಾನ್ಸಲಸ್ ಮೂಳೆ – ಸ್ಪಂಜಿನಂತಹ ಮೃದುವಾದ ಒಳ ಪದರ, ಮೂಳೆ ಮಜ್ಜೆ – ಕೆಂಪು ಮತ್ತು ಹಳದಿ ಮೂಳೆ ಮಜ್ಜೆ ಎಂಬ ಮೂರು ಮುಖ್ಯ ಭಾಗಗಳನ್ನು ಹೊಂದಿದ್ದುರಕ್ತ ಕಣಗಳನ್ನು ಉತ್ಪಾದಿಸುತ್ತದೆ.ಆದ್ದರಿಂದ ಪ್ರತಿಯೊಂದು ಜೀವಿಯ ಬೆಳವಣಿಗೆ, ಉಳಿಯುವಿಕೆಯಲ್ಲಿ, ದೇಹ ರಚನೆಯಲ್ಲಿ ಮೂಳೆಗಳು ಪ್ರಮುಖ ಪಾತ್ರವಹಿಸುತ್ತದೆ. ಮೂಳೆ ಸವೆತ, ವಿಶೇಷವಾಗಿ ಮಂಡಿ ನೋವು: 60 ವರ್ಷ ಮೇಲ್ಪಟ್ಟವರಿಗೆ ಈ ಸಮಸ್ಯೆ ಕಾಡಬೇಕು. ಆದರೆ ಇತ್ತೀಚೆಗೆ 40 ವರ್ಷ ಆದ ಕೂಡಲೇ ಈ ಸಮಸ್ಯೆಗೆ ಜಾರುವವರ ಸಂಖ್ಯೆ ಹೆಚ್ಚುತ್ತಿದೆ. ಕಾರಣ? ದೇಹದ ಮೇಲಾಗುವ ಪರಿಣಾಮ, ದೈನಂದಿನ ಚಟುವಟಿಕೆಗಳಲ್ಲಿ ಆಗುವ ಸಮಸ್ಯೆ, ಪರಿಹಾರ ಕುರಿತು ಸಮಗ್ರ ವಿವರಣೆಯನ್ನು ಆರಾಧನಾ ಆಥೋಪೆಡಿಕ್ ಸೆಂಟರ್, ಶಿವಮೊಗ್ಗದ ಮುಖ್ಯಸ್ಥರು, ಚೀಪ್ ಕನಸ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಕೆ.ಎಂ.ಸಿ.ಯವರೂ ಆದ ಡಾ: ಗಿರೀಶ್ ಕೆ ಇವರು “ವಿಶ್ವ ವೈದ್ಯರ ದಿನಾಚರಣೆ” ಜುಲೈ ಒಂದರ ಪ್ರಯುಕ್ತ ಮಿತ್ರೆ.. ಕಾಸ್ಮೋ ಕ್ಲಬ್ ಮಹಿಳಾ ಬಳಗದವರು ಆರಾಧನಾ ಆರ್ಥೋಪೆಡಿಕ್ ಸೆಂಟರ್‌ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಮಹಿಳೆ : ಮೂಳೆ ಸವೆತ ಮತ್ತು ಮಂಡಿ ನೋವು” ವಿಚಾರವಾಗಿ ತಜ್ಞ ಮಾಹಿತಿಯನ್ನು ವಿವಿಧ ವೀಡಿಯೋಗಳ ಮೂಲಕ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
World Doctor’s Day ಚಯಾಪಚಯ ಕ್ರಿಯೆಯ್ನು ಹೊಂದಿರುವ ಮೂಳೆಗಳ ಮರುರೂಪಿಸುವಿಕೆ, ಜೀವಕೋಶಗಳ ಪ್ರಭಾವ, ತಿನ್ನುವ ಆಹಾರ ಪದ್ಧತಿ, ಕುಟುಂಬದ ಜೆನೆಟಿಕ್ಸ್,.ಮಹಿಳೆಯರಲ್ಲಿ ಋತುಬಂಧದ ನಂತರ ಮೂಳೆಯ ದ್ರವ್ಯರಾಶಿಯ ನಷ್ಟಕ್ಕೆ ಒಳಗಾಗುವ ಬಗ್ಗೆ ವಿವರಿಸಿದರು.ಮೂಳೆ ಜೀವಂತ ಕ್ರಿಯಾತ್ಮಕ ಅಂಗಾಂಶ. ಜೀವಿತಾವಧಿಯಲ್ಲಿ ವ್ಯಾಪಕವಾದ ಪುನ್ರಚನೆಗೆ ಒಳಗಾಗುತ್ತಲೇ ಇರುತ್ತದೆ.ಆಸ್ಟಿಯೋಬ್ಲಾಸ್ಟ್ನಿಂದ ಮೂಳೆಯ ರಚನೆ ಆದರೆ, ಆಸ್ಟಿಯೋಕ್ಲಾಸ್ಟ್ನಿಂದ ಮೂಳೆ ಮರುಹೀರಿಕೆ ಆಗುತ್ತದೆ.ಇವೆರಡರ ಕ್ರಿಯೆಯಿಂದ ಬಿಗಿಯಾದ ನಿಯಂತ್ರಣ ದೇಹವನ್ನು ಹೊಂದಿದ್ದು, ಕ್ರಿಯಾತ್ಮಕ ಅಸ್ಥಿಪಂಜರದ ವ್ಯವಸ್ಥೆಯನ್ನು ನಿರ್ವಹಿಸಲು, ಹಿಡಿದಿಡಲು ಸಹಾಯಮಾಡುತ್ತದೆ.
ಡಾ: ಉಮೇಶ್, ಚೀಫ್ ಕನ್ಸಲ್ಟೆಂಟ್, ಫಿಸಿಯೋಥೆರಪಿಸ್ಟ್ ಇವರು ಮೂಳೆರೋಗ ಸಮಸ್ಯೆಯಿಂದ ಬಳಲುತ್ತಿದ್ದೇವೆ ಎಂದು ಗೊತ್ತಾಗುವುದರೊಳಗೆ ಸಮಸ್ಯೆಯ ಮೂರನೇ ಹಂತ ತಲುಪಿರುತ್ತೇವೆ. ವ್ಯಾಯಾಮ, ನಡಿಗೆ ನಿತ್ಯ ಅನುಷ್ಠಾನದಲ್ಲಿರಬೇಕು.ನಲ್ಲಿಸಿದರೆ ನಮ್ಮ ದೇಹದ ತೂಕ ಹೆಚ್ಚುತ್ತದೆ.ಆಗಬೊಜ್ಜು ಹೆಚ್ಚಿ, ಮೂಳೆಗಳು ಸಾಮರ್ಥ್ಯವನ್ನು ಕುಗ್ಗಿಸಿಕೊಂಡು, ಹಾಸಿಗೆ ಹಿಡಿದು ಮಲಗುವ ಸ್ಥಿತಿ ಬರುತ್ತದೆ.ಮೂಳೆ ಸವೆತ, ಮಂಡಿಯ ಸವೆತ ಎರಡೂ ಪ್ರತ್ಯೇಕ ಸಮಸ್ಯೆಗಳು.ದೇಹದ ಮೂಳೆಗಳ ಸಾಮರ್ಥ್ಯವನ್ನು 90 ವರ್ಷವಾದರೂ ದೃಢವಾಗಿ ಇಟ್ಟುಕೊಳ್ಳಬಹುದು ಎಂಬುದಾದರೆ ನಿತ್ಯ ಕನಿಷ್ಠ 30 ನಿಮಿಷದ ದೇಹದ ವ್ಯಾಯಾಮ, ಕನಿಷ್ಠ ೩೦ ನಿಮಿಷದ ನಡಿಗೆಯಿಂದ ಮಾತ್ರ ಸಾಧ್ಯ ಎಂದರು.
ಡಾ: ಹರೀಶ್ ಹೆಚ್.ಕೆ. ಕನ್ಸಲ್ಟೆಂಟ್ ಫಿಸಿಯೋ ಥೆರಪಿಸ್ಟ್ರವರು ಸವೆದ ಮೂಳೆಗಳ ಸರಿಪಡಿಸಿಕೊಳ್ಳಲು ಅಗತ್ಯವಾದ ವ್ಯಾಯಾಮ, ನಿತ್ಯ ಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿ; ನಮಗರಿವಿಲ್ಲದಂತೆ ದೇಹದಲ್ಲಿ ಒಂದು ಪ್ರಕ್ರಿಯೆ ನಡೆಯುತ್ತದೆ. ಪ್ರಕೃತಿ ನಮಗೆ ನೀಡಿರುವ ನಿಗೂಡ ಕೊಡುಗೆಯದು.ಅದುವೇ ದೇಹದಲ್ಲಿ ಹೊಸ ಮೂಳೆಗಳು ನಿರಂತರವಾಗಿ ಬೆಳೆಯುತ್ತಲೇ ಇರುತ್ತದೆ. ಹಳೇ ಮೂಳೆಗಳು ನಿರಂತರವಾಗಿ ಒಡೆಯುತ್ತಲೇ ಇದ್ದು ಅದು ಲವಣ ರೂಪದಲ್ಲಿ ದೇಹದಿಂದ ಹೊರ ಹೋಗುತ್ತದೆ. ಈ ಪ್ರಕ್ರಿಯೆಗೆ ನಿರಂತರ ಮರು ರೂಪಿಸುವಿಕೆ ಎನ್ನುತ್ತೇವೆ ಎಂದು ಮಾಹಿತಿ ನೀಡಿ, ಅಡುಗೆ ಮಾಡುವಾಗ ಕೂಡ ಮಾಡಬಹುದಾದ ಲಘು ವ್ಯಾಯಾಮದ ಬಗ್ಗೆ ತಿಳಿಸಿದರು.ಡಾ: ಸೈಮಾ ಫಿಸಿಯೋ ಥೆರಪಿಸ್ಟ್ ಇವರು ಕೂಡ ಜೊತೆಗಿದ್ದು ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದ ಅಧ್ಯಕ್ಷರಾದ ಶ್ರೀಮತಿ.ಶ್ರೀರಂಜಿನಿ ದತ್ತಾತ್ರಿಯವರುಈ ಕಾರ್ಯಕ್ರಮವು ಅತ್ಯಂತ ಉಪಯುಕ್ತವಾಗಿದ್ದುಜವಾಬ್ದಾರಿಗಳ ನಡುವೆ ಕಳೆದುಹೋಗುವ ನಾವು ನಮ್ಮ ಆರೋಗ್ಯ ಸಂರಕ್ಷಣೆ ಬಗ್ಗೆ ಗಮನ ನೀಡುವುದು ಕಡಿಮೆ.ಒಂದು ದಿನ ವ್ಯಾಯಾಮ ಮಾಡಿದ ನಾವು, ಐದು ದಿನ ಅದರಿಂದ ದೂರ ಉಳಿಯುತ್ತೇವೆ. ನಮ್ಮ ಜೀವನದ ಚಟುವಟಿಕೆಗಳನ್ನು ಯಂತ್ರೋಪಕರಣಗಳಿಗೆ ಅಳವಡಿಸಿಕೊಂಡಿದ್ದೇವೆ. ಇದರಿಂದಾಗಿ ಹೃದಯ ರೋಗದ ಸಮಸ್ಯೆ, ಮೂಳೆ ರೋಗದ ಸಮಸ್ಯೆಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ.ವ್ಯಾಯಾಮ, ನಡಿಗೆ ದೇಹದ ಮೂಳೆ ಸದೃಢತೆಗೆ ಬಹಳ ಮುಖ್ಯ..ಮೂಳೆಯ ಆರೋಗ್ಯ ಸಂರಕ್ಷಣೆ ಜಾಗ್ರತೆವಹಿಸಿ, ಆಹಾರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಾಯ್ದುಕೊಂಡು ನಮ್ಮ ಕುಟುಂಬದ ಸದಸ್ಯರಲ್ಲಿಯೂ ಜಾಗೃತಿ ಮೂಡಿಸೋಣ ಎಂದರು.
ಕಾರ್ಯದರ್ಶಿ ದೀಪಾಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ, ವಿನುತಾ ಪ್ರಾರ್ಥಿಸಿ, ಸುನಿತಾ ಅರುಣ್ ಸ್ವಾಗತಿಸಿ, ಮನು ಪ್ರೀತಮ್ ವಂದಿಸಿದರು.
ಮಿತ್ರೆ..ಕಾಸ್ಮೋ ಕ್ಲಬ್ ಮಹಿಳಾ ಬಳಗದಿಂದ, ಡಾ: ಗಿರೀಶ್, ಡಾ: ಶೋಭಾ ಗಿರೀಶ್, ಡಾ: ಉಮೇಶ್, ಡಾ: ಹರೀಶ್ ರವರನ್ನು ಆತ್ಮೀಯವಾಗಿ ವ್ಯದ್ಯರ ದಿನಾಚರಣೆ ಅಂಗವಾಗಿ ಗೌರವಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಿತ್ರೆಯರು ಆಗಮಿಸಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
