Shimoga District Tourism Development ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ 13.07.25 ರ ಭಾನುವಾರ ಶಿವಮೊಗ್ಗದಿಂದ ಅಂಜನಾಪುರ ಡ್ಯಾಂ, ಷಿಕಾರಿಪುರ ಹುಚ್ಚರಾಯಸ್ವಾಮಿ ದೇವಸ್ಥಾನ, ಅಕ್ಕಮಹಾದೇವಿ ಜನ್ಮಸ್ಥಾನ ಉಡುಗಣಿ, ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ, ತೋಗರ್ಸಿಯ ಶ್ರೀ ಮಲ್ಲಿಕಾರ್ಜುನ – ದೇವಸ್ಥಾನ, ಶ್ರೀ ಗುರು ಕೊಟ್ಟೂರೇಶ್ವರ ಐತಿಹಾಸಿಕ ದೇವಸ್ಥಾನ ಕುಬಟೂರು, ಬನವಾಸಿಯ ಮಧುಕೇಶ್ವರ ದೇವಸ್ಥಾನ ಮತ್ತು ಚಂದ್ರಗುತ್ತಿಯ ರೇಣುಕಾಂಬದೇವಿ ದೇವಸ್ಥಾನ ಸ್ಥಳಗಳಿಗೆ ಒಂದು ದಿನದ ಪ್ರವಾಸವನ್ನು ಏರ್ಪಡಿಸಲಾಗಿದೆ.
ಶಿವಮೊಗ್ಗದಿಂದ ಬೆಳಿಗ್ಗೆ 6:30 ಕ್ಕೆ ಹೊರಟು ರಾತ್ರಿ 10 ರ ಒಳಗಾಗಿ ಶಿವಮೊಗ್ಗಕ್ಕೆ ತಲುಪಲಾಗುವುದು ಶುಲ್ಕ ಒಬ್ಬರಿಗೆ ರೂ 700 ಮಾತ್ರ. (ಶುಲ್ಕದಲ್ಲಿ ಬಸ್ ಚಾರ್ಜ್, ಬೆಳಿಗ್ಗೆ ಉಪಹಾರ, ಮದ್ಯಾಹ್ನ ಮತ್ತು ರಾತ್ರಿಯ ಊಟದ ಖರ್ಚು ಸೇರಿರುತ್ತದೆ.) 45 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ಹೆಸರನ್ನು ಮಹದೇವಸ್ವಾಮಿ ದೂರವಾಣಿ 9448844380 ಅಥವಾ ಲಕ್ಷ್ಮೀ ನಾಗೇಶ್ ದೂರವಾಣಿ ಸಂಖ್ಯೆ 9916334736 ಇವರ ಬಳಿ ನೋಂದಾಯಿಸುವಂತೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್.ಗೋಪಿನಾಥ್ ಅವರು ತಿಳಿಸಿದ್ದಾರೆ.
