Sunday, March 22, 2026
Sunday, March 22, 2026

Press Day ಪತ್ರಿಕಾ ದಿನಾಚರಣೆ, ಮುಖ್ಯಮಂತ್ರಿಗಳಿಂದ ಮಾಧ್ಯಮ ಸಂಜೀವಿನಿ ಯೋಜನೆ ಸಾಂಕೇತಿಕ ಉದ್ಘಾಟನೆ

Date:

Press Day ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʼಪತ್ರಿಕಾ ದಿನಾಚರಣೆ 2025ʼ ಕ್ಕೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾನ್ಯತೆ ಪಡೆಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಬಸ್‌ ಸೌಲಭ್ಯಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಹತ್ತು ಪತ್ರಕರ್ತರಿಗೆ ಪಾಸ್‌ಗಳನ್ನು ವಿತರಿಸಿದರು. ಪತ್ರಕರ್ತರಿಗೆ ರೂ.5 ಲಕ್ಷವರೆಗೆ ನಗದುರಹಿತ ಉಚಿತ ಆರೋಗ್ಯ ಸೇವೆ ಒದಗಿಸುವ ʼಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆʼಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ನೀಡಲಾಗುವ ಮೊಜೊ ಕಿಟ್‌ಗಳನ್ನು ವಿತರಿಸಲಾಯಿತು. ಮಾಧ್ಯಮ ಅಕಾಡೆಮಿಯ ಕಾರ್ಯಚಟುವಟಿಕೆಗಳ ಚಿತ್ರ ಸಂಪುಟ ಮಾಧ್ಯಮ ಗ್ಯಾಲರಿಯನ್ನು ಅತಿಥಿಗಳು ಬಿಡುಗಡೆ ಮಾಡಿದರು.

Press Day ಈ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಪಿ ಸಾಯಿನಾಥ್‌, ಹಿರಿಯ ಸಾಹಿತಿ ಶ್ರೀ ರಹಮತ್‌ ತರೀಕೆರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ ವಿ ಪ್ರಭಾಕರ್‌, ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಶ್ರೀಮತಿ ಬಿ ಬಿ ಕಾವೇರಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ನಸೀರ್‌ ಅಹಮದ್‌, ವಾರ್ತಾ ಇಲಾಖೆ ಆಯುಕ್ತರಾದ ಶ್ರೀ ಹೇಮಂತ್‌ ಎಂ ನಿಂಬಾಳ್ಕರ್‌, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಷಾ ಖಾನಂ, ಕಂಠೀರವ ಸ್ಟೇಡಿಯಂ ಅಧ್ಯಕ್ಷರಾದ ಶ್ರೀ ಮೆಹಬೂಬ ಪಾಶ, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ripponpet News ಪೆಟ್ರೋಲ್ ಕೊರತೆ ಎಂಬ ಸುದ್ದಿ ನಂಬಿ ರಿಪ್ಪನ್ ಪೇಟೆಯ ‘ಬಂಕ್’ ಗಳಿಗೆ ಮುಗಿಬಿದ್ದ ಜನ.

Ripponpet News ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್...

Yakshagana ಶಿವಮೊಗ್ಗದ ವರದಾ ಐತಾಳ್ ಅವರಿಗೆ ಶಿವರಾಮ ಕಾರಂತ ಪ್ರತಿಷ್ಠಾನದಿಂದ “ಸಾಧಕಿ ಪ್ರಶಸ್ತಿ” ಪುರಸ್ಕಾರ.

Yakshagana ತಾll 15.03.2026 ರಂದು ಯಕ್ಷಗಾನ ದಲ್ಲಿ ಹೊಸಸಾಧ್ಯತೆಯ ಅನಾವರಣಕ್ಕಾಗಿ ಡಾllಶಿವರಾಮ...

Ramadan ಸಮಾಜದಲ್ಲಿ ಶಾಂತಿ – ಸೌಹಾರ್ದದಿಂದ ಬಾಳಬೇಕು- ಮೌಲಾನಾ ಮುಫ್ತಿ ತಪ್ಜಿಲ್ ಆಲಂ ಖಾಸ್ಮಿ

Ramadan ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಮುಸ್ಲಿಂ ಬಾಂಧವರು...

Chess ಮಾರ್ಚ್ 25 ರಿಂದ ಶಿವಮೊಗ್ಗದಲ್ಲಿ ಬೇಸಿಗೆ ರಜೆ ನಿಮಿತ್ತ ಚೆಸ್ ತರಬೇತಿ ಶಿಬಿರ.

Chess ಶಿವಮೊಗ್ಗ ನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಈ...