VISL Unit 2024-25ನೇ ಸಾಲಿನ ಏಳನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳಿಸಿದ ಕಾರ್ಖಾನೆಯ ಉದ್ಯೋಗಿಗಳ ಮಕ್ಕಳಿಗೆ ಭದ್ರಾ ಅತಿಥಿಗೃಹದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಾಯಿತು.
ಎಸ್.ಎಸ್.ಎಲ್.ಸಿಯಲ್ಲಿ 90% ಕ್ಕೂ ಹೆಚ್ಚು ಅಂಕಗಳನ್ನು ಪಡೆದ, 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ವಿಐಎಸ್.ಎಲ್ ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್. ಚಂದ್ವಾನಿ, ಗೌರವಾನ್ವಿತ ಅತಿಥಿಗಳಾದಿ ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ, ಮಕ್ಕಳಿಗೆ ಅಭಿನಂದನಾ ಪತ್ರ, ನಗದು ಪುರಸ್ಕಾರ ಮತ್ತು ಸಸಿಗಳನ್ನು ನೀಡಿ, ಅವರ ಸಾಧನೆಗಾಗಿ ಆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ಭವಿಷ್ಯ ಉಜ್ವಲವಾಗಿರಲೆಂದು ಹರಸಿದರು. VISL Unit ಸಮಾರಂಭದಲ್ಲಿ ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಕಾರ್ಮಿಕರು, ಅವರ ಕುಟುಂಭದವರು ಹಾಗೂ ಪ್ರಶಸ್ತಿ ವಿಜೇತ ಮಕ್ಕಳು ಪೋಷಕರೊಂದಿಗೆ ಹಾಜರಿದ್ದರು.
ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶೈಕ್ಷಣಿಕವಾಗಿ ಪ್ರತಿಭಾವಂತ ಸೈಲ್-ವಿಐಎಸ್‌ಎಲ್ ಉದ್ಯೋಗಿಗಳ ಮಕ್ಕಳಿಗೆ ಉತ್ತೇಜನ ನೀಡಲು ಇರುವ ಹಲವು ಯೋಜನೆಗಳ ಬಗ್ಗೆ ತಿಳಿಸಿದರು. ಕು. ಎಸ್. ಅನನ್ಯ ಸುಶ್ರಾವ್ಯವಾಗಿ ಪ್ರಾರ್ಥನೆಗೈದರು.

