Inner Wheel Institute ಆಪತ್ ಕಾಲದಲ್ಲಿ ನಮ್ಮ ಜೀವವನ್ನು ರಕ್ಷಿಸುವ ವೈದ್ಯ ದೇವರಿಗೆ ಸಮಾನ ವೈದ್ಯರ ಸೇವೆ ಅವಿಸ್ಮರಣೀಯ ಎಂದು ಇನ್ನರ್ವಿಲ್ ಕ್ಲಬ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವೀಣಾ ಸುರೇಶ್ ಅವರು ಅಭಿಮತ ವ್ಯಕ್ತಪಡಿಸಿದರು. ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ವೈದ್ಯಕೀಯ ವೃತ್ತಿಯ ಜೊತೆಗೆ ಸಮಾಜ ಸೇವೆ ಸಲ್ಲಿಸುತ್ತಿರುವ ವೈದ್ಯರಗಳನ್ನ ಗುರುತಿಸಿ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು. ಇನ್ನರ್ ವೀಲ್ ಸಂಸ್ಥೆ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವುದರ ಮುಖಾಂತರ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಾ ಇದೆ ಈ ನಿಟ್ಟಿನಲ್ಲಿ ನಾವು ವೈದ್ಯರನ್ನು ಅವರ ಸೇವೆಯನ್ನು ಸದಾ ಗೌರವಿಸಬೇಕು ಕೆಲವು ಬಾರಿ ನಮ್ಮ ತಪ್ಪಿನಿಂದ ಅಥವಾ ಕಾಲದ ಪರಿಮಿತಿಯಿಂದ ರೋಗಿಯ ಕಾಯಿಲೆಯ ಸ್ವರೂಪದಿಂದ ಮರಣವನ್ನಪ್ಪಿದಾಗ ಅವರನ್ನ ಶಿಕ್ಷಿಸುವುದು ದೂರುವುದು ಗಲಾಟೆ ಮಾಡುವುದು ಅವಮಾನವೀಯ ಎಂದು ನೋಡಿದರು. Inner Wheel Institute ಇದೇ ಸಂದರ್ಭದಲ್ಲಿ ಇನ್ನರ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ. ಡಾಕ್ಟರ್ ಕೌಸ್ತುಭ ಅರುಣ್. ಡಾಕ್ಟರ್ ಅಕ್ಷತಾ. ಡಾಕ್ಟರ್ ಐಶ್ವರ್ಯ. ಡಾಕ್ಟರ್ ಅರುಣ್. ಡಾ. ಅಪರ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಬಿಂದು ವಿಜಯ ಕುಮಾರ್. ಜಯಂತಿ ವಾಲಿ. ವಿನೋದ ದಳವೇ. ಶ್ವೇತಾ ಆಶಿತ್. ವಿಜಯಶ್ರೀ. ಶಿಲ್ಪ ಗೋಪಿನಾಥ್. ಚೇತನ. ಹಾಗೂ ಇನ್ನರ್ವೇಲ್ ಸದಸ್ಯರು ಉಪಸ್ಥಿತರಿದ್ದರು
Inner Wheel Institute ವೈದ್ಯರು ದೈವಸ್ವರೂಪ. ಅವರ ಸೇವೆ ಅವಿಸ್ಮರಣೀಯ- ವೀಣಾ ಸುರೇಶ್
Date:
