Bharat Scouts and Guides ರೋವರ್ಸ್ ಮತ್ತು ರೇಂಜರ್ಸ್ ರವರು ಸ್ಕೌಟ್ ಗೈಡ್ ಚಳುವಳಿಯ ಯೋಜನೆ, ಕಾರ್ಯನುಷ್ಠಾನ ಮತ್ತು ಮೌಲ್ಯಮಾಪನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ – ಶ್ರೀ ಕಾರ್ತಿಕ್ ರಾಮಚಂದ್ರ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ. ಜಿ. ಆರ್. ಸಿಂಧ್ಯಾ ಮತ್ತು ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ದಿನಾಂಕ 21-06-2025ರಂದು ಶಿವಮೊಗ್ಗ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಯುವ ಸಮಿತಿಯ ಕಾರ್ಯಗಾರದಲ್ಲಿ ಕರ್ನಾಟಕ ರಾಜ್ಯ ಯುವ ಸಮಿತಿಯ ಅಧ್ಯಕ್ಷರಾದ ಶ್ರೀ ಕಾರ್ತಿಕ್ ರಾಮಚಂದ್ರರವರು ಆಗಮಿಸಿ ನಗರದ ವಿವಿಧ ಕಾಲೇಜಿನ ರೋವರ್ಸ್ ಮತ್ತು ರೇಂಜಸ್ ರವರೊಂದಿಗೆ ವಿಚಾರ ವಿನಿಮಯ ಮಾಡುತ್ತಾ ಸ್ಕೌಟ್ – ಗೈಡ್ ಚಳುವಳಿಯ ದಳ ಹಂತದಿಂದ ಹಿಡಿದು ತಾಲೂಕು, ಜಿಲ್ಲಾ ಮತ್ತು ರಾಜ್ಯದ ಹಂತದವರೆಗೆ ಯೋಜನೆ, ಅನುಷ್ಠಾನ ಮತ್ತು ಮೌಲ್ಯಮಾಪನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಚಳುವಳಿಯ ಬೆಳವಣಿಗೆಗೆ ಸಹಕರಿಸಬೇಕೆಂದು ತಿಳಿಸಿದರು. ಮುಂದುವರೆದು ರಾಷ್ಟ್ರದ ಮತ್ತು ರಾಜ್ಯದ ಆದ್ಯತೆಗಳಾದ ಆನ್ಲೈನ್ ನೋಂದಣಿ( ಓ.ವೈ.ಎಂ. ಎಸ್.) ಜಿಲ್ಲಾ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಹಸಮಯ ಶಿಬಿರಗಳು, ರಾಷ್ಟ್ರೀಯ ಭಾವೈಕ್ಯತೆ ಶಿಬಿರಿಗಳು, ರೋವರ್ ರೇಂಜರ್ ಸಮಾಗಮ, ಸೇವಾ ಶಿಬಿರಗಳು, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ತಾವು ಬೆಳೆಯುವುದಲ್ಲದೆ ಚಳುವಳಿಯ ಬೆಳವಣಿಗೆಗೂ ಸಹ ಕೊಡುಗೆ ನೀಡಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸ್ಥಾನಿಕ ಆಯುಕ್ತ ( ಸ್ಕೌಟ್ ) ಶ್ರೀ ಘನಶಾಮ ಗಿರಿಮಾಜಿ ರವರು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸದೃಢ ರೋವರ್ ರೇಂಜರ್ ಪಡೆಯನ್ನ ಕಟ್ಟಿ ಬೆಳೆಸೋಣ ಹಾಗೂ ಸಮಾಜಕ್ಕೆ ಆ ಮೂಲಕ ಒಳ್ಳೆಯ ಸೇವೆ ಸಲ್ಲಿಸೋಣ ಎಂದು ಹೇಳಿದರು. ಶಿವಮೊಗ್ಗ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ವಿ ಅವಲಕ್ಕಿ ತರಬೇತಿ ನಾಯಕ ( ರೋವರ್ ) ರವರು ಈ ಕಾರ್ಯಗಾರರ ಸಂವಹನಕಾರರಾಗಿ ಕಾರ್ಯ ನಿರ್ವಹಿಸಿ ತಮ್ಮ ಸ್ಕೌಟಿಂಗ್ ಮತ್ತು ರೋವರಿಂಗ್ ಜೀವನದ ಅನುಭವವನ್ನು ಹಂಚಿಕೊಂಡು ಪ್ರಸ್ತುತ ವಿದ್ಯಾರ್ಥಿ ಜೀವನದಲ್ಲಿರುವ ರೋವರ್ಸ್ ಮತ್ತು ರೇಂಜರ್ಸ್ರವರು ಪದವಿ ಶಿಕ್ಷಣದ ನಂತರ ಚಳುವಳಿಯಲ್ಲಿ ಯಾವುದಾದರೂ ರೀತಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಚಳುವಳಿಗೆ ಮತ್ತು ಸಮಾಜಕ್ಕೆ ತಾವು ಕಲಿತಿದ್ದನ್ನ ಹಿಂದಿರುಗಿಸಬೇಕೆಂದು ತಿಳಿ ಹೇಳುತ್ತಾ ಕಾರ್ಯಗಾರವನ್ನು ಯಶಸ್ವಿಗೊಳಿಸಿಕೊಟ್ಟರು. ಶ್ರೀ ಲೋಹಿತ್ ಪ್ರಸಾದ್ ಹೆಚ್. ವಿ. ಕಬ್ ಮಾಸ್ಟರ್ ಇವರು ಸರ್ವರನ್ನು ಸ್ವಾಗತಿಸಿದರು. ರಾಷ್ಟ್ರಪತಿ ರೋವರ್ ಪದಕ ಪುರಸ್ಕೃತ, ಅಜರ್ಬೈಜನ್ ನಲ್ಲಿ ನಡೆದ್ದಿದ್ದಂತಹ ಅಂತರರಾಷ್ಟ್ರೀಯ ಯುವ ಫೋರಂನಲ್ಲಿ ಭಾಗವಹಿಸಿದ್ದಂತಹ ಶ್ರೀ ಪೃಥ್ವಿರಾಜ್ ಗಿರಿಮಾಜಿ ರವರು ಉಪಸ್ಥಿತರಿದ್ದು ತಮ್ಮ ಅನುಭವವನ್ನು ಹಂಚಿಕೊಂಡರು. Bharat Scouts and Guides ಶಿವಮೊಗ್ಗ ನಗರದ ಎನ್.ಇ.ಎಸ್. ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿನಗರ ಮತ್ತು ಮಲ್ನಾಡ್ ಓಪನ್ ಗ್ರೂಪಿನ ರೋವರ್ಸ್ ಮತ್ತು ರೇಂಜರ್ಸ್ ಉಪಸ್ಥಿತರಿದ್ದು ಸ್ಥಳೀಯ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಟ್ಟದಲ್ಲಿ ತಾವುಗಳು ಚಳುವಳಿಗೆ ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಮತ್ತು ಸಂಸ್ಥೆಯಿಂದ ನಾವು ಏನು ಬಯಸುತ್ತೇವೆ ಎನ್ನುವುದರ ಬಗ್ಗೆ ವಿಸ್ತೃತವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಶ್ರೀ ವರುಣ್ ಎಂ ಶೇಟ್ ಸರ್ವರಿಗೂ ವಂದಿಸಿದರು.
