Bharat Scouts and Guides ರಾಜ್ಯಮಟ್ಟದ ಮುಕ್ತದಳದ ರ್ಯಾಲಿ ಯಶಸ್ಸಿಗೆ ನಿಮ್ಮ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು, ದಳದ ನಾಯಕರು, ತಾಲೂಕು ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳ ಪ್ರಮುಖರ ಸಹಕಾರ ಕಾರಣ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಸ್ಟೀಸ್ ಕೆ.ಶಂಕರನಾರಾಯಣರಾವ್ ಸ್ಮಾರಕ ರಾಜ್ಯಮಟ್ಟದ ಮುಕ್ತದಳದ ರ‍್ಯಾಲಿ ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ಸಹಕಾರದಿಂದ ತುಂಬಾ ಯಶಸ್ವಿಯಾಗಿ ಜರುಗಿತು.
13 ವರ್ಷಗಳ ನಂತರ ನಡೆದ ಕಾರ್ಯಕ್ರಮ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ರ‍್ಯಾಲಿಯು ವಿದ್ಯಾರ್ಥಿಗಳಿಗೆ ವಿಶೇಷ ಅನುಭವ, ಸಾಹಸ ಕ್ರೀಡೆಗಳು, ಚಾರಣ, ವಸ್ತು ಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮ, ಕರ ಕೌಶಲ್ಯ, ಆಹಾರ ಮೇಳ, ವಿನೋದಮಯ ಚಟುವಟಿಕೆಗಳು, ರಸ್ತೆ ಸುರಕ್ಷತೆ, ಕೌಶಲ್ಯ ಪ್ರದರ್ಶನ ಹೀಗೆ ವೈವಿಧ್ಯ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು ಎಂದರು.
ರೋವರ್ ವಿಭಾಗದ ಆಯುಕ್ತ ಕೆ.ರವಿ ಮಾತನಾಡಿ, ಎರಡು ಮೂರು ತಿಂಗಳ ಸತತ ಪರಿಶ್ರಮದಿಂದ ರಾಜ್ಯಮಟ್ಟದ ರ‍್ಯಾಲಿ ಆಯೋಜಿಸಿದ್ದೇವು. ಚಾಲೆಂಜಿಂಗ್ ಆಗಿದ್ದ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು ಎಂದು ಹೇಳಿದರು.
Bharat Scouts and Guides ಜಿಲ್ಲಾ ಸ್ಕೌಟ್ ವಿಭಾಗದ ಆಯುಕ್ತ ಎಸ್.ಜಿ.ಆನಂದ್ ಮಾತನಾಡಿ, ರ‍್ಯಾಲಿಯಲ್ಲಿ ಶ್ರಮಿಸಿದ ಎಲ್ಲ ಪದಾಧಿಕಾರಿಗಳಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಗೈಡ್ ವಿಭಾಗದ ತರಬೇತಿ ಆಯುಕ್ತೆ ಗೀತಾ ಚಿಕ್‌ಮಠ್ ಮೂರು ದಿನದ ರ‍್ಯಾಲಿಯ ಸಂಪೂರ್ಣ ವರದಿ ನೀಡಿದರು. ಸ್ಕೌಟ್ ವಯಸ್ಕ ಸಂಪನ್ಮೂಲ ಆಯುಕ್ತ ಬಿ.ಸಿ.ವೇಣುಗೋಪಾಲ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಜಂಟಿ ಕಾರ್ಯದರ್ಶಿ ಲಕ್ಷ್ಮೀ ಕೆ.ರವಿ, ಸಹ ಕಾರ್ಯದರ್ಶಿ ವೈ.ಆರ್.ವಿರೇಶಪ್ಪ, ತರಬೇತಿ ಆಯುಕ್ತ ಎಚ್.ಶಿವಶಂಕರ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಸಂಚಾಲಕ ರಾಜೇಶ್ ಅವಲಕ್ಕಿ, ವರ್ಮ, ದೊರೆ, ಪರಮೇಶ್ವರಯ್ಯ, ಚೂಡಾಮಣಿ ಪವಾರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
