Inner wheel Shivamogga ಇನ್ನರ್‌ವ್ಹೀಲ್ ಜಿಲ್ಲಾ ಚೇರ್ಮನ್ ಆಗಿ ಶಬರಿ ಕಡಿದಾಳ್ ಆಯ್ಕೆಯಾಗಿದ್ದಾರೆ. ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಗೆ 2013ರಲ್ಲಿ ಸೇರ್ಪಡೆಯಾಗಿ ದಶಕದಿಂದ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶಬರಿ ಕಡಿದಾಳ್ ಅವರು ಕ್ಲಬ್ ಐಎಸ್‌ಒ ಆಗಿದ್ದಾಗಲೇ ಸಿಲ್ವರ್ ಐಎಸ್‌ಒ ಕ್ವೀನ್ ಪ್ರಶಸ್ತಿ ವಿಜೇತರಾಗಿದ್ದರು.
2018-19ರಲ್ಲಿ ಕ್ಲಬ್ ಅಧ್ಯಕ್ಷೆಯಾಗಿ ಡಿಸ್ಟ್ರಿಕ್ ರ‍್ಯಾಲಿ ಮತ್ತು ಐಎಸ್‌ಒ ಮೀಟ್ ಸಂಭ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು.
ಶಿವಮೊಗ್ಗದ ನೆಹರು ರಸ್ತೆಯಲ್ಲಿ 17 ಸ್ಥಿತ ಡಸ್‌ಬಿನ್‌ಗಳನ್ನು ಐಡಬ್ಲ್ಯೂ ಲೋಗೋಸಹಿತ ಸ್ಥಾಪಿಸಿ ಮಹತ್ವದ ಸಾರ್ವಜನಿಕ ಸೇವಾ ಯೋಜನೆ ಜಾರಿಗೊಳಿಸಿದ್ದರು.
2020-21ರಲ್ಲಿ ಜಿಲ್ಲಾ ಐಎಸ್‌ಒ ಆಗಿ ಇನ್ನರ್‌ವ್ಹೀಲ್ ಪ್ರಥಮ ವರ್ಚುಯಲ್ ಐಎಸ್‌ಒ ಮೀಟ್ ಆಯೋಜಿಸಿದ್ದರು. 23 ಸ್ಪರ್ಧೆಗಳ ಮೂಲಕ ಭಾರತದ ಎಲ್ಲೆಡೆ ಸದಸ್ಯರನ್ನು ಸಕ್ರಿಯರಾಗಿಸಿದರು.
2021-22ರಲ್ಲಿ ಜಿಲ್ಲಾ ಎಡಿಟರ್ ಆಗಿ 7 ಬುಲೆಟಿನ್‌ಗಳನ್ನು ಹೊರತಂದರು. ಅಸೋಸಿಯೇಷನ್ ಮಟ್ಟದಲ್ಲಿ ಪ್ರಶಂಗೆ ಪಾತ್ರವಾಯಿತು. 2022-23ರಲ್ಲಿ ಜಿಲ್ಲಾ ಖಜಾಂಚಿ, 2023-24ರಲ್ಲಿ ಜಿಲ್ಲಾ ಕಾರ್ಯದರ್ಶಿ, 2024-25ರಲ್ಲಿ ಜಿಲ್ಲಾ ವೈಸ್ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
Inner wheel Shivamogga ಸಹ್ಯಾದ್ರಿ ವಿದ್ಯಾಸಂಸ್ಥೆ ನಿರ್ದೇಶಕಿ, ಒಕ್ಕಲಿಗರ ಮಹಿಳಾ ವೇದಿಕೆ, ಶಾರದಾ ಕ್ಲಬ್, ಗೆಳತಿ, ಎಲೈಟ್ ಲೇಡೀಸ್ ಕ್ಲಬ್, ಶರಾವತಿ ಸಂಘ, ಐಕ್ಯಾ ಸೇರಿದಂತೆ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.
ರೋಟರಿಯನ್ ಕಡಿದಾಳ್ ಗೋಪಾಲ್ ಮತ್ತು ಶೋಭಾ ಕಡಿದಾಳ್ ದಂಪತಿಯ ಪುತ್ರಿ. ಪತಿ ಅನೂಪ್ ಸಿ.ಕೆ.ಅವರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಪುತ್ರಿಯರಿದ್ದಾರೆ.
