Bharat Scout and Guides ಶಿವಮೊಗ್ಗ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶಿವಮೊಗ್ಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗ 90.8, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ವಿಶ್ವ ಪರಿಸರ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಪರಿಸರವಾದಿ ಪ್ರೊಫೆಸರ್ ಬಿ.ಎಂ. ಕುಮಾರಸ್ವಾಮಿಯವರು ಭಾಗವಹಿಸಿ ಮಾತನಾಡಿದರು.
“ಜಗತ್ತಿನ ಶ್ವಾಸಕೋಶವಾದ ಪಶ್ಚಿಮ ಘಟ್ಟಗಳು ಅಭಿವೃದ್ಧಿಯ ಅವಾಂತರಕ್ಕೆ ಸಿಕ್ಕಿ ಕುಸಿಯುತ್ತಿದೆ ಪ್ಲಾಸ್ಟಿಕ್ ಮಾಲಿನ್ಯ ಪಶ್ಚಿಮ ಘಟ್ಟಕ್ಕೆ ಕಂಟಕವಾಗಿದೆ ಪಶ್ಚಿಮ ಘಟ್ಟದೊಳಗಿರುವ ನಾವು ಇಂಥ ಸೂಕ್ಷ್ಮತೆಗಳನ್ನು ಗಮನಿಸ ಬೇಕು” ಎಂಬುದನ್ನು ಅಂಕಿ ಅಂಶಗಳ ಮೂಲಕ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗದ ಪ್ಯಾನಲ್ ಅಡ್ವಕೇಟ್ ಶ್ರೀ ಚಂದ್ರಶೇಖರಪ್ಪ ಎನ್ ಮಾತನಾಡುತ್ತಾ “ಏಕ ಬಳಕೆಯ ಪ್ಲಾಸ್ಟಿಕ್ ನಿಂದ ಬಹಳ ದೊಡ್ಡ ಪರಿಣಾಮ ನಮ್ಮೆಲ್ಲರ ಮೇಲು ಆಗುತ್ತಿದ್ದು ಇಂದಿನ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಬಹಳ ದೊಡ್ಡ ಮಟ್ಟದಲ್ಲಿ ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ದಂತಹ ಪ್ರಾದೇಶಿಕ ಹಿರಿಯ ಪರಿಸರ ಅಧಿಕಾರಿ ಶ್ರೀ ರಮೇಶ್ ಡಿ ನಾಯಕ್ ರವರು ಮಾತನಾಡುತ್ತಾ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ರೆಫ್ಯೂಸ್, ರೆಡ್ಯೂಸ್, ರೀಯೂಸ್ ಪರಿಕಲ್ಪನೆ ಯೊಂದಿಗೆ ಬಳಸೋಣ ಎಂದು ಕರೆ ನೀಡಿದರು.
Bharat Scout and Guides ನಂತರ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರದ ಶಕುಂತಲಾ ಚಂದ್ರಶೇಖರ್ ಪರಿಸರ ಜಾಗೃತಿಯ ಬಗ್ಗೆ ಮಾತನಾಡುತ್ತಾ ಕರ್ನಾಟಕ ರಾಜ್ಯಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಸನ್ಮಾನ್ಯ ಶ್ರೀ ಪಿ ಜಿ ಆರ್ ಸಿಂಧ್ಯಾ ರವರ ಪರಿಕಲ್ಪನೆಯಂತೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಅದನ್ನು ಪುನರ್ ಬಳಕೆ ಮಾಡುವಂತೆ ತಿಳಿಸಿದ್ದಾರೆ ಅದನ್ನು ಶಿವಮೊಗ್ಗ ಜಿಲ್ಲಾ ಸಂಸ್ಥೆಯು ಸಹ ಅನುಸರಿಸುತ್ತಿದೆ, ವಿದ್ಯಾರ್ಥಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದಂತಹ ಚಿತ್ರಕಲೆ, ಪ್ರಬಂಧ ಹಾಗೂ ಸಮೂಹ ಗಾನ ಸ್ಪರ್ಧೆಗಳಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪರಿಸರ ಅಧ್ಯಯನ ಕೇಂದ್ರದ ದಿನೇಶ್ ಹೊಸನಗರ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಸ್ವಾಗತವನ್ನು ಕ ರಾ ಮಾ ನಿ ಮಂ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿಯದ ಶ್ರೀಮತಿ ಶಿಲ್ಪ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ನುಡಿಯನ್ನು ಪರಿಸರ ಅಧಿಕಾರಿಯದ ಶ್ರೀ ವಿ ರಮೇಶ್ ನಡೆಸಿಕೊಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹೇಶ್ವರಪ್ಪ ಟಿ. ಎಸ್. ವಹಿಸಿ ವಿದ್ಯಾರ್ಥಿನಿಯರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜನ್ನು ಪ್ಲಾಸ್ಟಿಕ್ ಮುಕ್ತ ಕಾಲೇಜನ್ನಾಗಿ ರೂಪಿಸಲು ಸಹಕರಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ರೇಡಿಯೋ ಶಿವಮೊಗ್ಗದ ಆರ್ ಜೆ ಪವಿತ್ರ ದಿನೇಶ್, ಜೀವ ವೈವಿಧ್ಯದ ಮತ್ತು ಸಂಶೋಧನಾ ಪ್ರಯೋಗಾಲಯದ ಶ್ರೀಮತಿ ರಾಧಾ ಸಂತೋಷ್ ಹಾಗೂ ಶ್ರೀಮತಿ ಸಹನ ,ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ, ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್ ,ಶ್ರೀ ಚೂಡಮನಿ ಪವಾರ್, ಶ್ರೀ ಶಿವಶಂಕರ್, ಶ್ರೀಮತಿ ಲಕ್ಷ್ಮಿ ಕೆ ರವಿ ಮುಂತಾದವರು ಉಪಸ್ಥಿತರಿದ್ದರು.
ಶಿವಮೊಗ್ಗ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀ ರಾಜೇಶ್ ವಿ ಅವಲಕ್ಕಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ, ಉಪನ್ಯಾಸಕಿ ವರ್ಗದವರು ರೇಂಜರ್ಸ್ ಮತ್ತು ವಿದ್ಯಾರ್ಥಿನಿಯರು ಹಾಗೂ ವಿವಿಧ ಶಾಲಾ ಕಾಲೇಜಿನ ಪ್ರಶಸ್ತಿ ವಿಜೇತರು ಭಾಗವಹಿಸಿದ್ದರು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಳಿಸಲಾಯಿತು.
