Saturday, December 6, 2025
Saturday, December 6, 2025

Veerashaiva Kalyana Mandira ಸ್ತನ ಮತ್ತು ಗರ್ಭಕೊರಳಿನ ಕ್ಯಾನ್ಸರ್ ರೋಗವನ್ನ ಆರಂಭದಲ್ಲೇ ಪತ್ತೆ ಮಾಡಿ ಗುಣಪಡಿಸಬಹುದು – ಡಾ.ಬಿ.ಎಸ್.ಗಿರಿಜಾ ಪ್ರಸನ್ನ ಕುಮಾರ್

Date:

Veerashaiva Kalyana Mandira ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಡಾ. ಬಿ.ಎಸ್.ಗಿರಿಜಾ ಪ್ರಸನ್ನಕುಮಾರ್ ಹೇಳಿದರು.

ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಕದಳಿ ವನಿತ ಸಮಾಜದ 32ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಉದ್ಘಾಟಿಸಿ ಮಾತನಾಡಿ, ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಕದಳಿ ವನಿತಾ ಸಮಾಜದ ನೂತನ ಅಧ್ಯಕ್ಷೆ ಸುಜಾತ ಬಸವರಾಜ್ ಮಾತನಾಡಿ, ಮಹಿಳೆಯರಿಗೆ ಇತ್ತೀಚೆಗೆ ಸಾಮಾನ್ಯವಾಗಿ ಕಂಡು ಬರುತ್ತಿರುವ ಸ್ತನ ಕ್ಯಾನ್ಸರ್ ಹಾಗೂ ಗರ್ಭ ಕೊರಳ ಕ್ಯಾನ್ಸರ್ ಇವುಗಳನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಬಹುದಾಗಿದೆ. ಕಾಯಿಲೆ ಗುಣಪಡಿಸುವ ಬಗ್ಗೆ ಸೂಕ್ತ ವೈದ್ಯರಲ್ಲಿ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.

ಅಧ್ಯಕ್ಷೆಯಾಗಿ ಸುಜಾತ ಬಸವರಾಜ್, ಉಪಾಧ್ಯಕ್ಷೆ ಉಮಾ, ಕಾರ್ಯದರ್ಶಿ ಸವಿತಾ, ಸಹಕಾರ್ಯದರ್ಶಿ ಸುರೇಖಾ, ಖಜಾಂಚಿ ನಿರ್ಮಲ, ನಿರ್ದೇಶಕರಾಗಿ ಲತಾ ಶಂಕರ್, ಮಂಜುಳಾ, ವನಜಾಕ್ಷಿ ಹಾಗೂ ಜಯಮ್ಮ ಪದಗ್ರಹಣ ಮಾಡಿದರು.

ಕದಳಿ ವನಿತಾ ಸಮಾಜದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲಾಯಿತು.

Veerashaiva Kalyana Mandira ಅರುಣಾಚಂದ್ರ ಶೇಖರ್, ಸವಿತಾ, ರೂಪ, ಶೈಲ, ಭಾರತಿ, ವಾಸಂತಿ, ಶೋಭಾ, ಗಿರಿಜಾ ಹಾಗೂ ಜ್ಯೋತಿ ಉಪಸ್ಥಿತರಿದ್ದರು.
ಕದಳಿ ವನಿತಾ ಸಮಾಜದಿಂದ ಬಸವೇಶ್ವರ ಪ್ರೌಢಶಾಲೆ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಹಾಗೂ ಕದಳಿ ಸಮಾಜದ ಸದಸ್ಯನಿಯರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಆಗಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೊಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...