Shimoga News ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳು ಮತ್ತು ಪೌರಕಾರ್ಮಿಕರಿಗೆ ದೊರಕಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು ಹಾಗೂ ಅವರಲ್ಲಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿಗಳಾದ ಚಂದ್ರಕಲಾ ಸೂಚಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ಜಿ.ಪಂ.ಸಭಾAಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಚತಾ ಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ 22 ಜನ ಮ್ಯಾನುಯಲ್ ಸ್ಕಾö್ಯವೆಂಜರ್‌ಗಳನ್ನು ಗುರುತಿಸಲಾಗಿದೆ. ಆದರೆ ಕ್ಷೇತ್ರ ಭೇಟಿ ಮಾಡಿದಾಗ ಇವರಲ್ಲಿ ಅನೇಕರಿಗೆ ಮನೆ, ಸಾಲ ಇತರೆ ಸೌಲಭ್ಯಗಳು ಸರಿಯಾಗಿ ಸಿಗದೇ ಇರುವುದು ಗಮನಕ್ಕೆ ಬಂದಿದೆ. ಇನ್ನು ಎರಡು ದಿನಗಳ ಒಳಗೆ ಗುರುತಿಸಲಾದ ಮ್ಯಾನುಯಲ್ ಸ್ಕೌಟ್ವೆಂಜರ್‌ಗಳಿಗೆ ಯಾವೆಲ್ಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ವರದಿ ನೀಡಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮ್ಯಾನುಯಲ್ ಸ್ಕೌಟ್ ವೆಂಜರ್‌ಗಳು ಎಂದು ಗುರುತಿಸಿದ 09 ತಿಂಗಳ ಒಳಗೆ ಅವರಿಗೆ ಪುನರ್ವಸತಿ ಸೌಲಭ್ಯಗಳಾದ ವಸತಿ, ಸಾಲ, ಮಕ್ಕಳಿಗೆ ಶಿಕ್ಷಣ ಸೌಲಭ್ಯ, ಕೌಶಲ್ಯಾಭಿವೃದ್ದಿ ತರಬೇತಿ, ಕಾನೂನಿನ ಸಲಹೆ ಅವಶ್ಯಕತೆ ಇದ್ದಲ್ಲಿ ಅದನ್ನು ನೀಡಬೇಕು. ಆದರೆ ಜಿಲ್ಲೆಯಲ್ಲಿ ಈ ಎಲ್ಲ ಸೌಲಭ್ಯ ನೀಡಿರುವ ಕುರಿತು ಸಮರ್ಪಕವಾದ ವರದಿ, ಮಾಹಿತಿ, ಅಂಕಿ ಅಂಶಗಳನ್ನು ನೀಡಿಲ್ಲ. ನಿಖರವಾಗಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಗುರುತಿಸಲಾದ ಮ್ಯಾನುಯಲ್ ಸ್ಕಾö್ಯವೆಂಜರ್‌ಗಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ರೂ.2 ರಿಂದ 5 ಲಕ್ಷ ಸಾಲ, ವಿವಿಧ ವಸತಿ ಯೋಜನೆಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶ, ಅವರ ಮಕ್ಕಳಿಗೆ ಸಿಇಟಿ ಇಲ್ಲದೇ ವಸತಿ ಶಾಲೆಗಳಿಗೆ ಪ್ರವೇಶ ನೀಡುವ ಅವಕಾಶವಿದೆ.
Shimoga News ಮ್ಯಾನುಯಲ್ ಸ್ಕೌಟ್ ವೆಂಜರ್‌ಗಳಿಗೆ ನೀಡಲಾದ ಸಾಲದ ಮೊತ್ತ ದುರುಪಯೋಗವಾಗಬಾರದು. ಕ್ಷೇತ್ರ ಭೇಟಿ ವೇಳೆ ಸಾಲ ಸದ್ಬಳಕೆ ಕುರಿತು ಸರಿಯಾದ ಮಾಹಿತಿ ಒದಗಲಿಲ್ಲ. ಸಾಲ ಸದುಪಯೋಗ ಆಗಬೇಕು. ಇದರ ಸದ್ಬಳಕೆ ಕುರಿತು ಸಂಬAಧಿಸಿದ ಅಧಿಕಾರಿಗಳು ವರದಿ ನೀಡಬೇಕು ಎಂದರು.
ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಲೋಡರ್ಸ್, ಕ್ಲೀನರ್ಸ್, ಡ್ರೆöÊವರ್ಸ್ಗಳಿಗೆ ನಿಗದಿತ ವೇಳೆಯೊಳಗೆ ವೇತನ ಪಾವತಿಸಿ, ವೇತನ ಸ್ಲಿಪ್ ನೀಡಬೇಕು. ಪಿಎಫ್ ಮತ್ತು ಇಎಸ್‌ಐ ಮೊತ್ತ ಸರಿಯಾಗಿ ಕಟಾವಣೆಯಾಗುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು. ಮಾಸ್ಟರ್ ಆರೋಗ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಿಸಬೇಕು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್, ವೇತನ ಪ್ಯಾಕೇಜ್ ಸೌಲಭ್ಯ ದೊರೆಯುವಂತೆ ಮಾಡಬೇಕು.
ಏಜೆನ್ಸಿಗಳು ಪೌರಕಾರ್ಮಿಕರಿಗೆ ಅಗತ್ಯವಾದ ಸಮವಸ್ತç, ಗಮ್ ಬೂಟ್, ಕೈಗವಸು, ಮಾಸ್ಕ್ ಮತ್ತು ಇತರೆ ಸುರಕ್ಷಣಾ ಪರಿಕರಗಳನ್ನು ಸಮರ್ಪಕವಾಗಿ ನೀಡಬೇಕು.
ವಾರ್ಡ್ ನಂ 21 ಸೇರಿದಂತೆ ಕೆಲವೆಡೆ ಇಂದು ಕ್ಷೇತ್ರಭೇಟಿ ಮಾಡಿದಾಗ ಪೌರಕಾರ್ಮಿಕರು ಸಮವಸ್ತç, ಗ್ಲೋವ್ಸ್ ಇತರೆ ಸುರಕ್ಷತಾ ಪರಿಕರ ಧರಿಸದೇ ಇರುವುದು ಕಂಡುಬAತು. ಆದ್ದರಿಂದ ಆರೋಗ್ಯ ನಿರೀಕ್ಷಕರು ಮತ್ತು ಮೇಸ್ತಿçಗಳು ಸುರಕ್ಷತಾ ಪರಿಕರಗಳನ್ನು ಧರಿಸುವಂತೆ ಪ್ರೇರೇಪಿಸಬೇಕು. ಹಾಗೂ ಏಜೆನ್ಸಿಗಳು ಮತ್ತು ಪೌರಸಂಸ್ಥೆಗಳು ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದಲ್ಲಿ ಅನೇಕ ಆರೋಗ್ಯದ ಸಮಸ್ಯೆಗಳು ಉಂಟಾಗಿ ಗಂಭೀರವಾಗಿ ಪರಿಣಿಮಿಸುತ್ತವೆ ಎಂದು ಎಚ್ಚರಿಕೆ ನೀಡಿದರು.
ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಆರೋಗ್ಯ ಬಹಳ ಮುಖ್ಯ. ಇವರು ನಗರವನ್ನು ಸ್ವಚ್ಚಗೊಳಿಸಿದಂತೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಕೂಡ ಆಗಿದೆ ಎಂದರು.
ಏಜೆನ್ಸಿಯವರು, ಸ್ಪೆçà ಮಾಡುವ ಪೌರಕಾರ್ಮಿಕರಿಗೆ ಆಕ್ಸಿಜನ್ ಮಾಸ್ಕ್ ನೀಡಬೇಕು, ಡಂಪಿAಗ್ ಯಾರ್ಡ್ಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಎಲ್ಲ ಪೌರಕಾರ್ಮಿಕರಿಗೆ ಸಮಾನ ಸೌಲಭ್ಯಗಳನ್ನು ನೀಡಬೇಕು. ಮಳೆಗಾಲ ಆರಂಭವಾಗಿದ್ದು ರೈನ್ ಕೋಟ್ ನೀಡಬೇಕು. ಶೌಚಾಲಯಗಳು, ವಿಶ್ರಾಂತಿ ಗೃಹಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು.
481 ಪೌರ ಕಾರ್ಮಿಕರ ಪೈಕಿ 267 ಜನರಿಗೆ ವಸತಿ ಇಲ್ಲವಾಗಿದ್ದು, ಇದೀಗ ವಿವಿಧ ಯೋಜನೆಗಳಡಿ 261 ಜನರಿಗೆ ವಸತಿ ಮಂಜೂರಾಗಿ, ಕಾಮಗಾರಿ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರದಲ್ಲಿ ಗುಣಮಟ್ಟದೊಂದಿಗೆ ಕೂಡಿದ ವಸತಿ ಗೃಹಗಳನ್ನು ಪೌರಕಾರ್ಮಿಕರಿಗೆ ನೀಡಬೇಕೆಂದರು.
ಪಿಎಫ್, ಇಎಸ್‌ಐ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳಿಗೆ ದೊರಕುವ ಸೌಲಭ್ಯಗಳ ಕುರಿತು ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕೆಂದು ಸೂಚನೆ ನೀಡಿದರು.
ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳ ಕಾರ್ಮಿಕರ ವೇತನವನ್ನು ಸರಿಯಾದ ಸಮಯಕ್ಕೆ ನಿಗದಿತಗೊಳಿಸಿದ ಮೊತ್ತವನ್ನು ನೀಡಬೇಕು.
ಮ್ಯಾನುಯಲ್ ಸ್ಕಾö್ಯವೆಂಜರ್‌ಗಳ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸಲು ಮೊಬೈಲ್ ಆ್ಯಪ್‌ನ್ನು ಸಿದ್ದಪಡಿಸಲಾಗಿದ್ದು, ಸಮರ್ಪಕ ಮತ್ತು ನಿಖರ ಮಾಹಿತಿ ನೀಡಬೇಕು. ಹೀಗೆ ನೀಡಿದಾಗ ಮಾತ್ರ ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಡಿಯುಡಿಸಿ ಪಿಡಿ ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 11 ನಗರ ಸ್ಥಳೀಯ ಸಂಸ್ಥೆಗಳಿವೆ. 1074 ಪೌರಕಾರ್ಮಿಕರ ಹುದ್ದೆ ಮಂಜೂರಾಗಿದ್ದು, 194 ಪುರುಷ ಮತ್ತು 237 ಮಹಿಳೆ ಖಾಯಂ ಪೌರ ಕಾರ್ಮಿಕರು, 196 ನೇರಪಾವತಿ ಕಾರ್ಮಿಕರಿದ್ದಾರೆ. ಲೋಡರ್ಸ್/ಡ್ರೆöÊವರ್ ಮತ್ತು ಕ್ಲೀನರ್ 50 ಜನ ಖಾಯಂ ಮತ್ತು 551 ಹೊರಗುತ್ತಿಗೆಯಲ್ಲಿದ್ದಾರೆ. 139 ಹುದ್ದೆ ನೇಮಕಾತಿಯಾಗದೇ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೌರಕಾರ್ಮಿಕ ಸಂಘದ ಅಧ್ಯಕ್ಷರಾದ ಗೋವಿಂದಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ವಸತಿ ಒದಗಿಸುವ ಗೃಹಭಾಗ್ಯ ಯೋಜನೆ 2016 ರಲ್ಲಿ ಆರಂಭವಾಗಿದ್ದು ತುಂಬಾ ವಿಳಂಬವಾಗುತ್ತಿದೆ. ಆದ್ದರಿಂದ ವಸತಿ ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರದಲ್ಲೇ ಮನೆಗಳನ್ನು ಹಂಚಿಕೆ ಮಾಡಬೇಕು. ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೂ ಗೃಹಭಾಗ್ಯ ಯೋಜನೆ ಸೌಲಭ್ಯ ನೀಡಬೇಕು. ಹೊರಗುತ್ತಿಗೆ ಕಾರ್ಮಿಕರನ್ನು ನೇರ ಪಾವತಿ ವ್ಯಾಪ್ತಿಗೆ ತರಬೇಕು ಹಾಗೂ ಕಾರ್ಮಿಕರ ಸಿಂಗಾಪುರ ಪ್ರವಾಸ ಕೂಡ ವಿಳಂಬವಾಗುತ್ತಿದ್ದು ಶೀಘ್ರದಲ್ಲೇ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಕೆ.ಮಾಯಣ್ಣಗೌಡ, ಜಿ.ಪಂ ಉಪಕಾರ್ಯದರ್ಶಿ-2 ಜಯಲಕ್ಷಿö್ಮ, ಆಯೋಗದ ಅಧಿಕಾರಿ ರಾಘವೇಂದ್ರ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Shimoga News ಪೌರಕಾರ್ಮಿಕರಿಗೆ ಎಲ್ಲಾ ಅಗತ್ಯ ಸೌಲಭ್ಯ ನೀಡಿ ಸದ್ಬಳಕೆ ಮಾಡಿ- ಚಂದ್ರಕಲಾ
Date:
