Rotary Club Shimoga ರೋಟರಿ ಅಂತರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿದ್ದು, ಯಾವುದೇ ಜಾತಿ, ಮತ ಭೇದವಿಲ್ಲದೆ ಸೇವಾ ಮನೋಭಾವನೆ ಹೊಂದಿರುವ ಸಮಾಜಮುಖಿ ವ್ಯಕ್ತಿ ಅತ್ಯುತ್ತಮ ಸೇವೆ ಸಲ್ಲಿಸಬಹುದು ಎಂದು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ರೋಟರಿ ಜಿಲ್ಲಾ ಗವರ್ನರ್ ಆಗಿ ಚುನಾಯಿತರಾದ ಕಾರಣ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಶ್ವಾದ್ಯಂತ 220ಕ್ಕೂ ಹೆಚ್ಚು ದೇಶಗಳಲ್ಲಿ 120 ವರ್ಷಗಳಿಂದ ತನ್ನ ಸೇವಾ ಕಾರ್ಯ ನಡೆಸುತ್ತ ರೋಟರಿ ಸಂಸ್ಥೆಯು ಮನೆಮಾತಾಗಿದೆ. ಸಮುದಾಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ನಾಲ್ಕು ರೆವೆನ್ಯೂ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಆಗಿ ಎಲ್ಲ 87 ರೋಟರಿ ಕ್ಲಬ್ ಗಳು ಶೇ. 95ಗೂ ಹೆಚ್ಚು ಮತಗಳಿಂದ ಚುನಾಯಿಸಿರುವುದಕ್ಕೆ ಧನ್ಯವಾದಗಳು. ನನ್ನ ಅವಧಿಯಲ್ಲಿ ಜಿಲ್ಲೆಯನ್ನು ಸೇವಾ ಕಾರ್ಯಗಳಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲ ರೋಟರಿ ಸದಸ್ಯ ಮಿತ್ರರು ಸಹಕರಿಸಬೇಕು ಎಂದರು.
Rotary Club Shimoga ರೋಟರಿ ರಿವರ್ ಸೈಡ್ ಅಧ್ಯಕ್ಷ ಬಸವರಾಜ ಅವರು ಮಾಡಿದ ಸೇವಾ ಕಾರ್ಯಗಳು ಅರ್ಹ ವ್ಯಕ್ತಿಗಳಿಗೆ ತಲುಪಿದೆ. ರೊಟರಿಯ ಸಾರ್ವಜನಿಕ ಸದಭಿಪ್ರಾಯದ ಏಳಿಗೆಗೆ ಕಾರಣರಾದ ಅವರು ತಮ್ಮ ಮುಂದಿನ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುವಲ್ಲಿ ಮತ್ತು ನಿಭಾಯಿಸುವಲ್ಲಿ ರೋಟರಿ ಅನುಭವ ಅನುಕೂಲಕರವಾಗುತ್ತದೆ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ವಿಜಯರತ್ನ ಪ್ರಶಸ್ತಿ ಪುರಸ್ಕೃತ ರಾಮ ಜೋಯ್ಸ್ ದಂಪತಿಗೆ ಸನ್ಮಾನಿಸಲಾಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಎಂ.ಪಿ.ಆನಂದಮೂರ್ತಿ, ಎಂ.ಜಗನ್ನಾಥ, ರವೀಂದ್ರನಾಥ ಐತಾಳ್, ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ನಿಯೋಜಿತ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಎಂ.ಆರ್.ಬಸವರಾಜ್, ವಿಶ್ವನಾಥ ನಾಯಕ, ಬಿ.ಜಿ.ಧನರಾಜ್, ಎಸ್.ಪಿ.ಶಂಕರ್, ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.
Rotary Club Shimoga ವಸಂತ್ ಹೋಬಳಿದಾರ್‌ಗೆ ರಿವರ್‌ಸೈಡ್ ಕ್ಲಬ್‌ನಿಂದ ಸನ್ಮಾನ
Date:
